ಬೆಂಗಳೂರು: ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ನಾಯಿ ಕೊಡೆಗಳಂತೆ ನರ್ಸರಿ LKG & UKG ಶಾಲೆಗಳು ತಲೆ ಎತ್ತುತ್ತಿದ್ದು, ಪೂರ್ವ ಪ್ರಾಥಮಿಕ ಶಾಲೆಗಳ ಹೆಸರಲ್ಲಿ ಪೋಷಕರ ಬಳಿ ಲಕ್ಷ ಲಕ್ಷ ಸುಲಿಗೆ ಮಾಡ್ತಿವೆ ಎಂದು ಮಾಹಿತಿ ತಿಳಿದು ಬಂದಿದೆ.
2018 ಶಿಕ್ಷಣ ಕಾಯ್ದೆಯ ಪ್ರಕಾರ ನರ್ಸರಿ ಶಾಲೆಗಳು ಕಡ್ಡಾಯ ನೊಂದಣಿಯಾಗಬೇಕು. ಆದರೆ ಶಿಕ್ಷಣ ಇಲಾಖೆಯ STATS ನಲ್ಲಿ ಈ ನರ್ಸರಿ ಶಾಲೆಗಳು ರಿಜಿಸ್ಟರ್ ಆಗೋದಿಲ್ಲ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಓಪನ್ ಆಗ್ತಿವೆ, ಕ್ಲೋಸ್ ಆಗ್ತಿವೆ. ಆದ್ರೆ ನೊಂದಣಿಯಾಗ್ತಿಲ್ಲ. ಯಾವುದೇ ನಿಯಮ ಪಾಲನೆ ಮಾಡ್ತಿಲ್ಲ. ಹೀಗಾಗಿ ಮಕ್ಕಳ ಹಕ್ಕುಗಳ ಆಯೋಗ ಈ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದು ವರದಿ ಕೇಳಿದೆ. ಅಷ್ಟೇ ಅಲ್ಲದೆ ಸದ್ಯ ನರ್ಸರಿಗಳಲ್ಲಿ ಮಕ್ಕಳ ರಕ್ಷಣೆ ಹಾಗೂ ಮೂಲಭೂತ ಸೌಕರ್ಯ ಇಲ್ಲ. ಇನ್ನು ಹಲವೆಡೆ ದೌರ್ಜನ್ಯ ಹಲ್ಲೆ ಹೆಚ್ಚಾಗುತ್ತಿವೆ.
ನರ್ಸರಿಗಳ ಆರಂಭಕ್ಕೆ ಬೇಕಾದ ಸೌಕರ್ಯ ಮಾನದಂಡಗಳಿಲ್ಲದೆ ಇರುವುದರಿಂದ ಎಲ್ಲಡೆ ನರ್ಸರಿಗಳ ತಲೆ ಎತ್ತಿ ಸುಲಿಗೆಗೆ ಮುಂದಾಗಿವೆ. ಹೀಗಾಗಿ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷಿತ ದೃಷ್ಟಿಯಿಂದ ಯಾವುದೇ ಭದ್ರತೆ ತೆಗೆದುಕೊಳ್ಳದೆ ತಲೆ ಎತ್ತುತ್ತಿರುವ ನರ್ಸರಿ ಶಾಲೆಗಳ ಮೇಲೆ ಸೂಕ್ತ ಕ್ರಮವಹಿಸುವಂತೆ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಇರುವ ಕನಿಷ್ಠ ಮಾನದಂಡಗಳನ್ನ ನರ್ಸರಿ ಶಾಲೆಗಳ ಆರಂಭಕ್ಕೆ ನಿಗಧಿ ಮಾಡುವಂತೆ ಮಕ್ಕಳ ಹಕ್ಕುಗಳ ಆಯೋಗ ಚಾಟಿ ಬೀಸಿದೆ.
ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆಯೇ ಯಾವುದೇ ಮಾನದಂಡಗಳಿಲ್ಲದೇ ಶಾಲೆಗಳ ಆರಂಭವಾಗುತ್ತಿರುವುದರಿಂದ ನರ್ಸರಿಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹಾಗೂ ಹಲ್ಲೆ ಹೆಚ್ಚಾಗುತ್ತಿವೆ. ಸದ್ಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಇವುಗಳಿಗೆ ಯಾವುದೇ ಕಠಿಣವಾದ ಮಾರ್ಗಸೂಚಿಗಳಿಲ್ಲ. ಪೂರ್ವ ಪ್ರಾಥಮಿಕ ಶಾಲೆಗಳ ನೊಂದಣಿ ಕಡ್ಡಾಯ ಮಾಡಿರುವುದು ಬಿಟ್ರೆ ಯಾವುದೇ ಮಾನದಂಡ ಇಲ್ಲ. ಈ ಶಾಲೆಗಳು ಯಾವುದೇ. ರೂಲ್ಸ್ ಫಾಲೋ ಕೂಡಾ ಮಾಡ್ತಿಲ್ಲ ಎಂದು ಮಾಹಿತಿ ಕಂಡು ಬಂದಿದೆ.