This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಚಿತ್ರದುರ್ಗ-ಆಲಮಟ್ಟಿ ಹೊಸ ರೇಲ್ವೆ ಮಾರ್ಗ

ಚಿತ್ರದುರ್ಗ-ಆಲಮಟ್ಟಿ ಹೊಸ ರೇಲ್ವೆ ಮಾರ್ಗ ಇಂಜಿನಿಯರಿಂಗ್ ಮತ್ತು ಪ್ರಾಥಮಿಕ ಸಂಚಾರ ಸಮೀಕ್ಷೆ ರೇಲ್ವೆ ಮಂಡಳಿಗೆ ಸಲ್ಲಿಕೆ

ನಿಮ್ಮ ಸುದ್ದಿ ಬೆಂಗಳೂರು

ಬೆಂಗಳೂರು ಹಾಗೂ ಸೊಲ್ಲಾಪುರ ರೈಲ್ವೆ ಮಾರ್ಗದ ಅಂತರವನ್ನು ಕಡಿಮೆಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ರೂಪಿಸಲಾಗುತ್ತಿರುವ ಚಿತ್ರದುರ್ಗ-ಆಲಮಟ್ಟಿ ರೇಲ್ವೆ ಮಾರ್ಗದ ಇಂಜಿನಿಯರಿಂಗ್ ಹಾಗೂ ಪ್ರಾಥಮಿಕ ಸಂಚಾರ ಸಮೀಕ್ಷೆಯ ವರದಿಯನ್ನು ನೈಋತ್ಯ ರೇಲ್ವೆ ವಲಯದ ಮುಖ್ಯ ಇಂಜಿನಿಯರ್ ಅವರು ರೇಲ್ವೆ ಮಂಡಳಿಗೆ ಸಲ್ಲಿಸಿದ್ದಾರೆ ಎಂದು ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಗಳೂರು ಮತ್ತು ಸೊಲ್ಲಾಪುರ ರೈಲು ಮಾರ್ಗದಲ್ಲಿ ಬಹಳಷ್ಟು ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ 264 ಕಿ.ಮೀ.ಉದ್ದದ ಚಿತ್ರದುರ್ಗ-ಆಲಮಟ್ಟಿ ರೇಲ್ವೆ ಮಾರ್ಗದ ಇಂಜಿನಿಯರಿಂಗ್ ಮತ್ತು ಸಮೀಕ್ಷಾ ಕಾರ್ಯವನ್ನು ನೈಋತ್ಯ ವಲಯ ವಲಯ ಕೈಗೊಂಡಿತ್ತು.ಈಗ ಸಮೀಕ್ಷೆ ಪೂರ್ಣಗೊಂಡಿದ್ದು ಪ್ರತಿ ಕಿ.ಮೀ.ರೈಲು ಮಾರ್ಗ ನಿರ್ಮಾಣಕ್ಕೆ ತಲಾ 30.11 ಕೋಟಿ ರೂ.ವೆಚ್ಚದ ಅಂದಾಜಿನ ಪ್ರಕಾರ ಒಟ್ಟು 8431.44 ಕೋಟಿ ರೂ.ಗಳ ಅಂದಾಜು ವೆಚ್ಚದೊಂದಿಗೆ ರೇಲ್ವೆ ಮಂಡಳಿಗೆ ಸಲ್ಲಿಸಲಾಗಿದೆ.

ಹೊಸ ಮಾರ್ಗವು ಚಿತ್ರದುರ್ಗ,ವಿಜಯನಗರ,ಕೊಪ್ಪಳ ,ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳ ಪ್ರಮುಖ ಸ್ಥಳಗಳಾದ ಹೊಸಹಳ್ಳಿ,ಕೂಡ್ಲಿಗಿ,ಕೊಪ್ಪಳ,ಕುಷ್ಟಗಿ,ಹುನಗುಂದ ಹಾಗೂ ಕೂಡಲಸಂಗಮ ಮೂಲಕ ಹಾಯ್ದು ಹೋಗಲಿದೆ.ಪ್ರಸ್ತುತ ಇರುವ 13.5 ಕಿ.ಮೀ.ಮಾರ್ಗವನ್ನೂ ಕೂಡ ಬಳಸಿಕೊಳ್ಳಲಿದೆ.

1397 ಹೆಕ್ಟೇರ್ ಒಣಭೂಮಿ, 644.88 ಹೆಕ್ಟೇರ್ ನೀರಾವರಿ ಮತ್ತು 107.48 ಹೆಕ್ಟೇರ್ ನಗರ ಪ್ರದೇಶದ ಭೂಮಿ ಸೇರಿ ಒಟ್ಟು 2149.36 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ.

*ಕೇಂದ್ರ ಸಚಿವರು ಹಾಗೂ ಸಂಸದರ ಭರವಸೆ*

ಬಹುನಿರೀಕ್ಷಿತ ಚಿತ್ರದುರ್ಗ-ಆಲಮಟ್ಟಿ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಸಿಗುವ ಭರವಸೆಯನ್ನು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ,ಸಂಸದರಾದ ವೈ.ದೇವೇಂದ್ರಪ್ಪ,ಪಿ.ಸಿ.ಗದ್ದಿಗೌಡರ,ರಮೇಶ ಜಿಗಜಿಣಗಿ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜನರ ಮಹತ್ವದ ಬೇಡಿಕೆಯಾಗಿರುವ ಈ ರೈಲು ಮಾರ್ಗ ನಿರ್ಮಾಣದಿಂದ ಸಾರಿಗೆ, ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆಯಾಗಲಿದೆ.ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಅಗತ್ಯ ಅನುದಾನ ಲಭ್ಯವಾಗಲಿ ಎಂಬುದು ಈ ಭಾಗದ ಜನರ ಆಶಯವಾಗಿದೆ.

";