ಬಾಗಲಕೋಟೆ
ದಿನಂಪ್ರತಿ ನಸುಕಿನ ಜಾವದಿಂದಲೇ ಅಮೀನಗಡ ಪಟ್ಟಣದ ಕಸ ಸಂಗ್ರಹ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರು ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದರು.
ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ಪೌರ ಕಾರ್ಮಿಕರ ದಿನದ ನಿಮಿತ್ತ ಪೌರ ಕಾರ್ಮಿಕರಿಗೆ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಬಹುತೇಕ ಎಲ್ಲ ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದ ಪೌರ ಕಾರ್ಮಿಕರು ದಿನವಿಡೀ ಖುಷಿಯಿಂದ ಇದ್ದರು.
ಬಾಯಿಯಲ್ಲಿ ಚಮಚ ಮತ್ತು ಲಿಂಬೆಹಣ್ಣು ಇಟ್ಟುಕೊಂಡು ಓಡುವುದು, ಬಿಸ್ಕತ್ ತಿನ್ನುವುದು, ಕಪ್ಪೆ ಜಿಗಿತ ಸೇರಿದಂತೆ ಹಲವು ಕ್ರೀಡೆಗಳನ್ನು ಆಯೋಜಿಲಾಗಿತ್ತು. ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದ ಪೌರ ಕಾರ್ಮಿಕರು ಮೇಲಕಾರಿಗಳಿಂದ ಬಹುಮಾನ ಪಡೆದರು.
ಪೌರ ಕಾರ್ಮಿಕರಾದ ಕಮಲವ್ವ, ಶಂಕ್ರವ್ವ, ರೇಣುಕಾ, ಸಕ್ಕವ್ವ, ಮಹಾಂತೇಶ, ಸುರೇಶ, ನಾಗೇಶ, ಚಂದ್ರು, ಯಮನಪ್ಪ, ಪಪಂ ಕಿರಿಯ ಆರೋಗ್ಯ ನಿರೀಕ್ಷಕ ಸಂತೋಷ ವ್ಯಾಪಾರಿಮಠ ಇತರರು ಇದ್ದರು.