ಬಾಗಲಕೋಟೆ:
ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಭೋವಿ ಗುರುಪೀಠದ ಗುರುಕುಟೀರವನ್ನು ನ.೨೩ ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳುವ ಕಾರ್ಯಕ್ರಮದ ಸಿದ್ಧತೆಗಳನ್ನು ವೀಕ್ಷಿಸಿ, ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶರಣಬಸವ ಶ್ರೀಗಳು ಸಮುದಾಯವನ್ನು ಮೌಢ್ಯತೆಯಿಂದ ವೈಚಾರಿಕತೆಯ ಪಥಕ್ಕೆ ತಂದವರು, ಮುಗ್ಧರನ್ನು ಪ್ರಬುದ್ಧರನ್ನಾಗಿಸಿದವರು. ಕಂದಾಚಾರ ಪರಂಪರೆಯಿAದ ಶರಣ ಪರಂಪರೆಗೆ ಮತ್ತೊಮ್ಮೆ ಸೆಳೆದವರು. ಶ್ರಮಿಕ ವರ್ಗವನ್ನು ಅಕ್ಷರದ ವಾರಸುದಾರರನ್ನಾಗಿಸಿದ ಲಿಂ. ಶ್ರೀ ಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವ, ಗದ್ಗುಗೆ ಶಿಲಾಮಂಟಪ ಶಿಲಾನ್ಯಾಸ ನೇರವೇರಿಸಲಾಗುವುದು ಎಂದರು.
ಉಪಮುಖ್ಯಮAತ್ರಿ ಡಿ.ಕೆ.ಶಿವಕುಮಾರ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಸಚಿವ ಶಿವರಾಜ ತಂಗಡಗಿ ನೇತೃತ್ವವಹಿಸಲಿದ್ದಾರೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಭೋವಿ ಸಮಾಜದ ವಿಪ ಸದಸ್ಯ ಸುನೀಲ್ ವಲ್ಯಾಪುರೆ, ಶಾಸಕರಾದ ಲಿಂಗಸ್ಗೂರಿನ ಮಾನಪ್ಪ ವಜ್ಜಲ್, ಪುಲಕೇಶಿ ನಗರದ ಎ.ಸಿ.ಶ್ರೀನಿವಾಸ, ಪಾವಗಡದ ವೆಂಕಟೇಶ, ಹೊಳಲ್ಕೆರೆಯ ಚಂದ್ರಪ್ಪ, ಸಿ.ವಿ.ರಾಮನ ನಗರದ ಎಸ್.ರಘು ಮಾಜಿ ಸಚಿವರಾದ ವೆಂಟರಮಣಪ್ಪ ಹಾಗೂ ಗೂಳಿಹಟ್ಟಿ ಶೇಖರ್, ಮಾಜಿ ಶಾಸಕರಾದ ದುರ್ಗಪ್ಪ ಹೂಲಗೇರಿ, ನೆಲಮಂಗಲ ನಾಗರಾಜು, ಅಖಂಡ ಶ್ರೀನಿವಾಸಮೂರ್ತಿ, ಬಂಗಾರಪೇಟೆ ನಾರಾಯಣಸ್ವಾಮಿ, ಮಾಜಿ ಸಂಸದ ಜನಾರ್ಧನಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮುಖಂಡ ಅಶೋಕ ಲಿಂಬಾವಳಿ ಮಾತನಾಡಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಭೋವಿ ಗುರುಪೀಠದ ಪೀಠಾಧ್ಯಕ್ಷರಾಗಿ ೨೫ ವರ್ಷಗಳು ಸಂದಿವೆ. ಭೋವಿ ಸಮುದಾಯದ ಉನ್ನತಿಗಾಗಿ ಶ್ರೀಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರ ಪರಿಣಾಮ ಈಗಾಗಲೇ ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಅಲೆಮಾರಿ, ಶ್ರಮಿಕ ಸ್ವಭಾವದ ಭೋವಿ ಸಮುದಾಯದಲ್ಲಿ ಧಾರ್ಮಿಕ ಸಂಸ್ಕಾರ, ಶಿಕ್ಷಣದ ಬಗ್ಗೆ ಜಾಗೃತಿ ಹಾಗೂ ಒಗ್ಗಟ್ಟಿನ ಮಂತ್ರ ಹೇಳಿಕೊಡುವ ಮೂಲಕ ಸಮುದಾಯವನ್ನು ಎಚ್ಚರದಲ್ಲಿಟ್ಟಿದ್ದಾರೆ. ಧಾರ್ಮಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ರಾಜಕೀಯವಾಗಿ ಸುಧಾರಣೆಗೊಳ್ಳುವಲ್ಲಿ ಶ್ರೀಗಳ ಪಾತ್ರ ಅನ್ಯನ್ನವಾದುದ್ದು. ಶ್ರೀಗಳ ಪ್ರಯತ್ನದಿಂದ ಕೋಟ್ಯಾಂತರ ವೆಚ್ಚದ ಗುರು ಕುಟೀರ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.
ಮುಖಂಡರಾದ ಸತೀಶ ಬಂಡಿವಡ್ಡರ, ದುರ್ಗಪ್ಪ ವಡ್ಡರ, ಅನಿಲ ಮಮದಾಪುರ, ಸಿದ್ದು ಬಂಡಿ, ಗಿಡ್ಡಪ್ಪ ಬಂಡಿ ಹಾಗೂ ಋಷಿ ಪಾತ್ರೋಟ್ ಇತರರಿದ್ದರು.
ಭೋವಿ ಸಮಾಜದ ಮುಖಂಡರಲ್ಲಿದ್ದ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಸಮಾಜದ ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ಕೆಲಸ ಮಾಡಲಾಗುತ್ತಿದೆ. ಈಗ ಯಾರ ಮಧ್ಯೆಯೂ ಯಾವುದೇ ಅಸಮಾಧಾನಗಳಿಲ್ಲ.
| ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಭೋವಿ ಗುರುಪೀಠದ ಜಗದ್ಗುರುಗಳು
೨೨ ರಂದು ಸಂಗೀತ ರಸ ಸಂಜೆ ಕಾರ್ಯಕ್ರಮ
ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣಗೊಂಡು (ಹೆಸರಿಟ್ಟು) ೫೦ ವರ್ಷ ತುಂಬಿದ ಹಿನ್ನೆಲೆಯಲ್ಲಿ ನ. ೨೨ ರಂದು ಸಂಜೆ ೬:೩೦ಕ್ಕೆ ಸಂಗೀತ ರಸ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕಿ ಅನುರಾಧ ಭಟ್, ಜೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಕುರಿ ಹನುಮಂತ, ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆಯ ಕಾಸಿಂ, ಕಲರ್ಸ್ ಕನ್ನಡ ವಾಹಿನಿಯ ಮತ್ತೊಬ್ಬ ಗಾಯಕಿ ಕಲಾವತಿ, ಕನ್ನಡ ಕೋಗಿಲೆ ಖ್ಯಾತಿಯ ಮಹಾನ್ಯ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ಮುಖಂಡ ಅಶೋಕ ಲಿಂಬಾವಳಿ ತಿಳಿಸಿದ್ದಾರೆ.