ಬೆಂಗಳೂರು:ಇಂದು ಬೆಳಿಗ್ಗೆಯಿಂದಲೇ ರಾಜ್ಯಸಭೆ ಚುನಾವಣೆ ಮತದಾನ ಆರಂಭವಾಗಿದ್ದು, ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಎನ್ಡಿಎ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಸ್ಪರ್ಧೆ ಮಾಡಿದ್ದಾರೆ. ಎನ್ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಶಾಸಕರ ಬಳಿ ಮತಯಾಚಿಸಿದ ಆರೋಪದಡಿ ದೂರು ದಾಖಲಾಗಿದೆ.
ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ , ನಮ್ಮ ಶಾಸಕರಿಗೆ ಆಸೆ-ಆಮೀಷ ತೋರಿಸಿ ಬೆದರಿಸಿದರು. ಅದಕ್ಕೆ ಎಫ್ಐಆರ್ ದಾಖಲಾಗಿದೆ ಎಂದರು.
ವಿಧಾನಸೌದಲ್ಲಿ ಮತ ಚಲಾಯಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಆತ್ಮಸಾಕ್ಷಿ ಮತ ಅಂದ್ರೆ ಏನು? ಆತ್ಮಸಾಕ್ಷಿ ಎಂದು ಮತಗಳು ಇರುತ್ತವಾ? ಅವರ ಮತಗಳೇ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬರುತ್ತವೆ. ನಮ್ಮ ಪಕ್ಷದವರಿಗೆ ಬೆದರಿಕೆ ಹಾಕಿದ್ದಕ್ಕೆ ಎಫ್ಐಆರ್ ಆಗಿದೆ ಎಂದರು.
ನೀವು ಬೇಕಾದಹಾಗೆ ಕಾನೂನು ತಿದ್ದುಪಡಿ ಮಾಡಿಕೊಂಡಿದ್ದೀರಿ ಎಂಬ ವಿಪಕ್ಷದವರ ಆರೋಪ ವಿಚಾರವಾಗಿ ಮಾತನಾಡಿದ ಅವರು, ಅದರ ಬಗ್ಗೆ ಆಮೇಲೆ ಮಾತನಾಡುತ್ತೇನೆ. ನಮ್ಮವರು ಗೆಲ್ತಾರೆ ಅಷ್ಟೆ. ಜೆಡಿಎಸ್ನವರಿಗೆ ಮತಗಳೇ ಇಲ್ಲ. ಐದನೇ ಅಭ್ಯರ್ಥಿ ಸ್ಪರ್ಧಿಸಿದ್ದು, ಆಮಿಷವೊಡ್ಡುವ ಸಾಧ್ಯತೆ ಹಿನ್ನೆಲೆ ಒಗ್ಗಟ್ಟಾಗಿ ಬಂದು ಮತ ಹಾಕಿದ್ದೇವೆ.
ಜೆಡಿಎಸ್ನವರಿಗೆ ಆತ್ಮವೇ ಇಲ್ಲ, ಇನ್ನೆಲ್ಲಿ ಆತ್ಮಸಾಕ್ಷಿ ಇದೆ? ಜಾತ್ಯತೀತ ಅಂತಾರೆ, ಇದೀಗ ಯಾರ ಜೊತೆಗಿದ್ದಾರೆ? ಅದಕ್ಕಾಗಿ ಜೆಡಿಸ್ನವರಿಗೆ ಆತ್ಮಸಾಕ್ಷಿಯೇ ಇಲ್ಲ ಎಂದು ವಾಗ್ದಾಳಿ ಮಾಡಿದರು.