ಬೆಂಗಳೂರು : ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಎನ್ನುತ್ತಿದ್ದ ಎಚ್ಡಿ ದೇವೇಗೌಡರು ಈಗ ಏನು ಹೇಳ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘಟನೆ ಹಾಗೂ ಮುಖಂಡರುಗಳ ಸಭೆ ನಡೆಸಿದ ನಂತರ ಸಿಎಂ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದರು. ಆ ವೇಳೆನಿರ್ಮಲಾ ಸೀತಾರಾಮನ್ ಅವರು ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಸಂಸತ್ತಿನಲ್ಲಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ” ಈಗ ದೇವೇಗೌಡರು ಅವರ (ಬಿಜೆಪಿ) ಜೊತೆ ಸೇರಿದ್ದಾರೆ ಎಂದರು.
ದೇವೇಗೌಡರು ಬಿಜೆಪಿ ಜೊತೆ ಸೇರಿದ್ದಾರೆ ಅದಕ್ಕೆ ಎಲ್ಲಾವನ್ನು ಸರಿ ಎನ್ನುತ್ತಿದ್ದಾರೆ ದೇವೆಗೌಡರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದ ದೇವೇಗೌಡರು ಈಗೇನು ಹೆಳುತ್ತಿದ್ದಾರೆ. ಅವರು ಯಜಮಾನರು, ಮಾಜಿ ಪ್ರಧಾನಿಗಳಾಗಿದ್ದವರು, ರಾಜ್ಯದ ಪರ ಮಾತನಾಡಬೇಕು, ಈ ರೀತಿ ಹೇಳಿಕೆ ನೀಡಬಾರದು ಎಂದು ತಿಳಿಸಿದರು.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅವರು ಮಾಡಿದ ಅನ್ಯಾಯವನ್ನೆಲ್ಲಾ ಸರಿ ಎಂದು ಹೇಳಬಾರದು ಎಂದು ಹೇಳಿದರು.