This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ರಾಮೇಶ್ವರಂ ಕೆಫೆ ಸ್ಫೋಟ : ಸಂತ್ರಸ್ತರನ್ನು ಭೇಟಿ ಮಾಡಲಿದ್ದಾರೆ ಸಿಎಂ ಸಿದ್ದು

ರಾಮೇಶ್ವರಂ ಕೆಫೆ ಸ್ಫೋಟ : ಸಂತ್ರಸ್ತರನ್ನು ಭೇಟಿ ಮಾಡಲಿದ್ದಾರೆ ಸಿಎಂ ಸಿದ್ದು

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಘಟನೆಯಲ್ಲಿ ಗಾಯಗೊಂಡ ಸಂತ್ರಸ್ತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ವಿವಿಧ ಅಭಿವೃದ್ಧಿ‌ ಕಾರ್ಯಗಳ ಉದ್ಘಾಟನೆ/ಶಂಕುಸ್ಥಾಪನೆ ಮುಗಿಸಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದಂತೆ ನೇರವಾಗಿ ರಾಮೇಶ್ವರ ಕೆಫೆ ಸ್ಫೋಟದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಮೈಸೂರಿನಿಂದ ಹೆಚ್ ಎ ಎಲ್ ವಿಮಾನ ನಿಲ್ದಾಣಕ್ಕೆ 11:45 ರ ಸುಮಾರಿಗೆ ಆಗಮಿಸಲಿದ್ದು ಇಲ್ಲಿಂದಲೇ ಆಸ್ಪತ್ರೆಗೆ ತೆರಳುತ್ತಾರೆ ಎಂದು ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಶನಿವಾರ ತುರ್ತು ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಭೆ ನಡೆಯಲಿದ್ದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಕೂಡಾ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.ಇನ್ನು ಘಟನೆಯ ಕುರಿತು ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಘಟನೆ ಕುರಿತು ಬಹಳ ಆಳವಾಗಿ ತನಿಖೆ ನಡೆಯುತ್ತಿದೆ.

ಸಾಕಷ್ಟು‌ ಕುರುಹುಗಳು ಸಿಕ್ಕಿದ್ದು, ಸಿಸಿ ಟಿವಿಯಲ್ಲಿ ಕೆಲವು ಸಾಕ್ಷ್ಯಗಳು ದೊರಕಿವೆ ಎಂದರು.ಘಟನೆ ನಡೆದ ಸಂದರ್ಭದಲ್ಲಿ ಈ ಭಾಗದಲ್ಲಿ ಸುಮಾರು ‌ 28 ಬಸ್ ಗಳು ಓಡಾಡಿವೆ.‌ ಆತ ಬಸ್ ನಲ್ಲಿ‌ ಬಂದಿರುವ ಸಾಧ್ಯತೆ‌‌ ಇದೆ. ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ. ಯಾವ ಕಾರಣಕ್ಕೂ‌ ಆರೋಪಗಳನ್ನು ಬಿಡೋದಿಲ್ಲ. ಎಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದರೂ ಬಿಡೋದಿಲ್ಲ ಎಂದು ತಿಳಿಸಿದರು.

";