ಕುಂದಗೋಳ: ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಭಯೋತ್ಪಾದಕರು ಹಾಗೂ ಮತಾಂಧ ಸಂಘಟನೆಯವರ ಮನೆಗಳನ್ನು ಕೆಡವಲು 20 ಸಾವಿರ ಬುಲ್ಡೋಜರ್ ಖರೀದಿಗೆ ಅನುಮತಿ ನೀಡುವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಕುಂದಗೋಳ ಪಟ್ಟಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಬೃಹತ್ ರೋಡ್ ಶೋ ನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಎಲ್ಲಿ ಹೋದರೂ ಚೊಂಬು ಹಿಡಿದುಕೊಂಡು ಹೋಗುತ್ತಿದ್ದಾರೆ.
ಯಾಕೆಂದರೆ, ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಮೂರನೇ ಭಾರಿ ಪ್ರಧಾನಿ ಆಗುವುದು ಎಷ್ಟು ಗ್ಯಾರಂಟಿಯೋ ಇವರು ಚೊಂಬು ಹಿಡಿದುಕೊಂಡು ಹೊರಗಡೆ ಹೋಗುವುದು ಅಷ್ಟೇ ಗ್ಯಾರಂಟಿ ಎಂದು ಹೇಳಿದರು.
ಮೋದಿ ವಿರುದ್ಧ ಮಾತನಾಡಲು ಏನೂ ವಿಷಯವಿಲ್ಲ. ಅದಕ್ಕಾಗಿ ಈ ಚೊಂಬಿನ ನಾಟಕ ಆಡುತ್ತಿದ್ದಾರೆ. ಇದಕ್ಕೆ ಮತದಾರರು ಮಣೆ ಹಾಕದೇ ಬಿಜೆಪಿ ಅಭ್ಯರ್ಥಿ ಜೋಶಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷದಿಂದ ಮುಂಬರುವ ದಿನಗಳು ದುಬಾರಿಯಾಗಲಿವೆ. ತಾವು ಹಾಕುವ ಒಂದು ಮತವೂ ಒಬ್ಬ ಭಯೋತ್ಪಾದಕನನ್ನು ಸಂಹಾರ ಮಾಡಲಿದೆ ಎಂದು ತಿಳಿಸಿದರು.