ಪಟ್ಟಣ ಪಂಚಾಯಿತಿಯಿಂದ ಸ್ಯಾನಿಟೈಜರ್
ನಿಮ್ಮ ಸುದ್ದಿ ಬಾಗಲಕೋಟೆ
ಬಹು ನಿರೀಕ್ಷಿತ ಪದವಿ ಕಾಲೇಜ್ ಗಳು ಮಂಗಳವಾರದಿಂದ ಆರಂಭಗೊಂಡಿವೆ.
ತರಗತಿಗಳ ಸಿದ್ದತೆಯನ್ನು ಸರಕಾರದ ಮಾರ್ಗಸೂಚಿಯಂತೆ ಸಿದ್ಧಗೊಳಿಸಿದ್ದು ವಿದ್ಯಾರ್ಥಿಗಳ ಸ್ವಾಗತಕ್ಕೆ ಕಾಲೇಜ್ ಗಳು ಕಂಗೊಳಿಸುತ್ತಿದ್ದವು.
ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಕಾಲೇಜ್ ನ ತರಗತಿ ಕೋಣೆ, ಕುರ್ಚಿ, ಮೇಜು, ಡೆಸ್ಕ್ ಸೇರಿದಂತೆ ಎಲ್ಲ ಪರಿಕರಗಳನ್ನು ಸ್ಯಾನಿಟೈಸರ್ ಮಾಡಲಾಯಿತು. ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಸಂಗಮೇಶ್ವರ ಪದವಿ ಕಾಲೇಜ್ ನಲ್ಲಿ ಪಟ್ಟಣ ಪಂಚಾಯಿತಿಯಿಂದ ಸಂಪೂರ್ಣ ಸ್ಯಾನಿಟೈಸರ್ ಮಾಡಲಾಯಿತು.
ಜಿಲ್ಲೆಯ ಕೆಲ ಕಾಲೇಜ್ ಗಳಲ್ಲಿ ವಿದ್ಯಾರ್ಥಿಗಳ ಸ್ವಾಗತಕ್ಕೆ ಅದ್ದೂರಿ ಡೆಕೊರೇಶನ್ ಮಾಡಲಾಗಿತ್ತು.ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಕೋವಿಡ್ ಟೆಸ್ಟ್ ಕುರಿತಂತೆ ಆರೋಗ್ಯ ಇಲಾಖೆಗೆ ಪತ್ರ ಬರೆದು ಟೆಸ್ಟ್ ಗೂ ಸಿದ್ಧತೆ ನಡೆದಿತ್ತು.
ಸದ್ಯಕ್ಕೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ನಡೆಸಲು ಸರಕಾರ ಸೂಚಿಸಿದ್ದು, ಉಳಿದವುಗಳಿಗೆ ಆನ್ ಲೈನ್ ಕ್ಲಾಸ್ ಮುಂದುವರೆಯಲಿವೆ. ಕೊರೊನಾ ಮಹಾಮಾರಿಯಿಂದ ಕಳೆದ 8 ತಿಂಗಳಿಂದ ಕಳೆಗುಂದಿದ್ದ ಕಾಲೇಜ್ ಗಳಿಗೆ ಹೊಸ ಕಳೆ ಬಂದಂತಾಗಿದೆ.