This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Business NewsEducation NewsState News

ಪ್ರಗತಿಯ ಪೂರಕ ಕೆಲಸಕ್ಕೆ ಸಮಾಜದ ಬೆಂಬಲ

ಪ್ರಗತಿಯ ಪೂರಕ ಕೆಲಸಕ್ಕೆ ಸಮಾಜದ ಬೆಂಬಲ

ಬಾಗಲಕೋಟೆ

ಪ್ರತಿ ಕ್ಷೇತ್ರದ ಪ್ರಗತಿಯ ಪೂರಕ ಕೆಲಸಗಳಿಗೆ ಸಮಾಜದ ಬೆಂಬಲ ಇರುತ್ತದೆ. ಅಂತಹ ಬೆಂಬಲವನ್ನು ಗಾಯತ್ರಿ ಬ್ಯಾಂಕ್ ಪಡೆದುಕೊಂಡಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯ ಶಾಖಾಂಬರಿ ಕಲ್ಯಾಣ ಮಂಟಪದಲ್ಲಿ ಗಾಯತ್ರಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಗತಿಯನ್ನು ಬೆಂಬಲಿಸುವುದು ನಮ್ಮ ಸಂಸ್ಕೃತಿ. ೨೫ ಶಾಖೆಗಳೊಂದಿಗೆ ಸಾವಿರಾರು ಕುಟುಂಬಗಳಿಗೆ ಕುಟುಂಬಗಳಿಗೆ ಗಾಯತ್ರಿ ಬ್ಯಾಂಕ್ ಆಸರೆಯಾಗಿದೆ ಎಂದರು.

ಶಿಕ್ಷಣ ಸಂಸ್ಥೆಯಂತೆ ಹಣಕಾಸು ಸಂಸ್ಥೆ ಸ್ಥಾಪಿಸುವುದು ಸುಲಭದ ಮಾತಲ್ಲ. ಇಂತಹ ಸಂಸ್ಥೆಯೊಂದನ್ನು ಹುಟ್ಟುಹಾಕಿ ಜನರಲ್ಲಿ ವಿಶ್ವಾಸ ಬರುವಂತೆ ಮಾಡುವುದು ಅತಿ ದೊಡ್ಡ ಕೆಲಸ. ಅಂತಹ ಕೆಲಸವನ್ನು ಸಂಸ್ಥೆ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾಡಿದ್ದಾರೆ. ೧೦೦ ಕೋಟಿ ಠೇವಣಿಯೊಂದಿಗೆ ಪ್ರಸಕ್ತ ವರ್ಷ ೧ ಕೋಟಿ ೬೮ ಲಕ್ಷ ಲಾಭ ಗಳಿಸಿದೆ. ಸಮಾಜದಲ್ಲಿ ಸತ್ಕಾರ್ಯಗಳಿಗೆ ಸನ್ಮಾನವಿರುತ್ತದೆ. ನಿಂದಕರು ಹೆಚ್ಚಾದಂತೆ ಪ್ರಗತಿ ಹೆಚ್ಚಾಗುತ್ತದೆ. ಇಂತಹ ಸಂಸ್ಥೆಗಳು ಆರ್ಥಿಕ ಸಬಲತೆ ತಂದು ಕೊಡುತ್ತವೆ ಎಂದು ಹೇಳಿದರು.

ಬ್ಯಾಂಕ್ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ಗ್ರಾಹಕರ ಸಹಕಾರದಿಂದ ರಜತ ಮಹೋತ್ಸವ ಆಚರಿಸಿಕೊಂಡ ಬ್ಯಾಂಕ್ ೨೮ನೇ ವರ್ಷದಲ್ಲಿ ಪಾದಾರ್ಪಣೆ ಮಾಡಿದೆ. ೧೯೯೬ರಲ್ಲಿ ೪೨,೦೦೦ ರೂ. ಠೇವಣಿಯೊಂದಿಗೆ ಆರಂಭವಾಗಿ ಇಂದು ೮ ಕೋಟಿ ಶೇರ್ ಬಂಡವಾಳ, ೧೩,೧೯೫ ಸದಸ್ಯರು ಹಾಗೂ ೧೩೩ ಕೋಟಿ ರೂ. ಠೇವಣಿ ಸಂಗ್ರಹದೊAದಿಗೆ ೨೫ ಶಾಖೆಗಳನ್ನು ಹೊಂದಿದೆ. ಆ ಮೂಲಕ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಾಗಿದೆ ಎಂದರು.

ಹುನಗುಂದ ವಿಜಯ ಮಹಾಂತೇಶ ಬ್ಯಾಂಕ್ ಅಧ್ಯಕ್ಷ ರವಿ ಹುಚನೂರ, ಬ್ಯಾಂಕ್‌ನಿಂದ ಪಡೆದ ಸಾಲದ ಸದುಪಯೋಗ ಪಡೆದು ಸಕಾಲದಲ್ಲಿ ಮರು ಪಾವತಿ ಮೂಲಕ ಬ್ಯಾಂಕ್‌ಗಳ ಬೆಳವಣಿಗೆಗೆ ಗ್ರಾಹಕರು ಶ್ರಮಿಸಬೇಕು ಎಂದರು.

ಪ್ರಧಾನ ವ್ಯವಸ್ಥಾಪಕ ಹೇಮಂತ ಧುತ್ತರಗಿ ವಾರ್ಷಿಕ ವರದಿ ವಾಚಿಸಿದರು. ರೆಹಮಾನಸಾಬ ದೊಡಮನಿ, ಶ್ರೀಶೈಲಪ್ಪ ಅಂಗಡಿ ಸೇರಿದಂತೆ ನಾನಾ ಶಾಖೆಗಳ ಸಲಹಾ ಸಮಿತಿ ಸದಸ್ಯರು ಮಾತನಾಡಿದರು.

ಇಳಕಲ್ ಅರ್ಬನ್ ಬ್ಯಾಂಕ್ ಅಧ್ಯಕ್ಷ ಅರವಿಂದ ಮಂಗಳೂರ, ಉಪಾಧ್ಯಕ್ಷೆ ವೀಣಾ ಅರಳಿಕಟ್ಟಿ, ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ, ವೆಂಕಟೇಶ ಜೋಶಿ, ಮಹಾಂತಪ್ಪ ಭದ್ರಣ್ಣವರ, ನೀಲಪ್ಪ ತಪೇಲಿ, ಬ್ಯಾಂಕ್ ಉಪಾಧ್ಯಕ್ಷ ಸಂಗಪ್ಪ ಕರಡಿ, ನಿರ್ದೇಶಕರು, ಐಹೊಳೆ, ಧನ್ನೂರ, ನಾಗೂರ, ಹನಮಸಾಗರ, ಅಮೀನಗಡ, ಗಜೇಂದ್ರಗಡ ಸೇರಿದಂತೆ ನಾನಾ ಶಾಖೆಗಳ ಸಲಹಾ ಸಮಿತಿ ಸದಸ್ಯರು ಇದ್ದರು.

";