ಬಾಗಲಕೋಟೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಹುನಗುಂದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಇಳಕಲ್ ನಗರದ ಶ್ರೀ ಮಾರ್ಕಕಂಡೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಸುಧಾರಾಣಿ ಮುರುಗೇಶ್ ಸಂಗಮ ಅಧ್ಯಕ್ಷರು ನಗರಸಭೆ ಇಳಕಲ್ ಇವರು ಉದ್ಘಾಟಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸರಸ್ವತಿ ಅರವಿಂದ್ ಈಟಿ ಸ್ಥಳೀಯ ಗಣ್ಯರು ನಂದವಾಡಗಿ ಮುಖ್ಯ ಅತಿಥಿಗಳಾಗಿ ಶ್ರೀ ಚನ್ನಕೇಶವ ಜಿಲ್ಲಾ ನಿರ್ದೇಶಕರು ಬಾಗಲಕೋಟೆ. ಸಕ್ರಪ್ಪ ಹೂಗಾರ್. ಶ್ರೀ ಕೃಷ್ಣ ರಾಮದುರ್ಗ.ಶ್ರೀ ಮಹಾಂತೇಶ್ ಹನುಮನಾಳ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಬಾಗಲಕೋಟೆ & ಮಹೇಶ್ವರ್ ರೆಡ್ಡಿ ಎಸ್ ಬಿ ಐ ಬ್ರಾಂಚ್ ಮ್ಯಾನೇಜರ್ ಹುನಗುಂದ ಮುಖ್ಯ ಅತಿಥಿಗಳಾಗಿದ್ದರು
ಕಾರ್ಯಕ್ರಮದ ಸ್ವಾಗತವನ್ನು ಸಂತೋಷ್ ಕುಮಾರ್ ಇವರು ಮಾಡಿದರು ಜಿಲ್ಲಾ ನಿರ್ದೇಶಕರಾದ ಚನ್ನಕೇಶವ ಮಾತನಾಡಿ ಧರ್ಮಸ್ಥಳಕ್ಕೆ 800 ವರ್ಷದ ಇತಿಹಾಸವಿದೆ ಅನ್ನದಾನ ಅಭಯದಾನ ವಿದ್ಯಾ ದಾನ ಔಷಧಿ ದಾನ ಇದನ್ನ ಪೂಜ್ಯರು ಈವರೆಗೆ ಮಾಡಿಕೊಂಡು ಬಂದಿದ್ದಾರೆ & ಧರ್ಮಸ್ಥಳದ ಹಿನ್ನೆಲೆ & ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆದು ಬಂದ ಹಾದಿ ಬಗ್ಗೆ ಮಾತನಾಡಿದರು
ಶ್ರೀ ಕೃಷ್ಣ ರಾಮದುರ್ಗ ಅವರು ಮಾತನಾಡಿ ಗ್ರಾಮ ಅಭಿವೃದ್ಧಿ ಯೋಜನೆ ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ನಮ್ಮೂರು ನಮ್ಮ ಕೆರೆ ನಿರ್ಗತಿಕರಿಗೆ ಮಾಶಾಸನ ಹಿಂದೂ ರುದ್ರ ಭೂಮಿ ಅಭಿವೃದ್ಧಿ ವಿಶೇಷವಾಗಿ ಸ್ವ ಸಹಾಯ ಸಂಘದ ಸದಸ್ಯರಿಗೆ ಆರೋಗ್ಯ ರಕ್ಷ ನೊಂದಾವಣೆ ಮಾಡಿ ಜನರ ಆರೋಗ್ಯವನ್ನು ಕಾಪಾಡುತ್ತಿದ್ದಾರೆ ಎಂದು ತಿಳಿಸಿದರು
ಕಾರ್ಯಕ್ರಮವನ್ನು ತಾಲೂಕ್ ಯೋಜನಾಧಿಕಾರಿಯಾದ ಸಂತೋಷ್ ರವರು ಸ್ವಾಗತಿಸಿ ಅರುಣ್ ಕುಮಾರ್ ಮಠಪತಿ ನಿರೂಪಿಸಿ ಆನಂದ್ ಪಡಸಲಗಿ ವಂದಿಸಿದರು ಕಾರ್ಯಕ್ರಮದಲ್ಲಿ ಹುನಗುಂದ ಇಳಕಲ್ ತಾಲೂಕಿನ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳು ಸಿ ಎಸ್ ಸಿ ಸೇವಾದಾರರು ಭಾಗವಹಿಸಿದ್ದರು