ಧಾರವಾಡ,: ಬಿಜೆಪಿಯವ್ರು ಕೇವಲ ಟಿವಿಯಲ್ಲಿ ದೇವರನ್ನು ತೋರಿಸುತ್ತಾರೆ. ನಾವು ದೇವಾಲಯಗಳಿಗೆ ಹೋಗಲು ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದ್ದೇವೆ ಎಂದು ಸಚಿವ ಸಂತೋಷ್ ಲಾಡ್ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ನಗರದ ಕೆಸಿಡಿ ಮೈದಾನದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಕೊಟ್ಟ ನಮ್ಮ ಸಿದ್ದರಾಮಯ್ಯ ಪರ ನೀವು ಇರಬೇಕೊ ಬೇಡವೋ? ಅದಕ್ಕೆ ತಾವು ಬೆಂಬಲ ಕೊಡಬೇಕು ಎಂದು ಫಲಾನುಭವಿಗಳಲ್ಲಿ ಮನವಿ ಮಾಡಿದರು.
ಬಿಜೆಪಿಯವರು ಕೇವಲ ಟಿವಿಯಲ್ಲಿ ದೇವರನ್ನು ತೋರಿಸುತ್ತಿದ್ದು, ನಮ್ಮ ಸರ್ಕಾರ ದೇವಸ್ಥಾನಗಳಿಗೆ ಉಚಿತವಾಗಿ ಹೋಗಲು ಅವಕಾಶ ಮಾಡಿಕೊಟ್ಟಿದ್ದು, ನಿಮಗೆ ಐದು ಕೆಜಿ ಅಕ್ಕಿ ಸಿಗುತ್ತಿದೆ, ಅಕ್ಕಿ ಬದಲಿಗೆ ದುಡ್ಡು ಬರುತ್ತಿದೆ. ಯಾರೂ ಹಸಿವಿನಿಂದ ಬಳಲಬಾರದು ಎಂದು ಕಾರ್ಯಕ್ರಮ ತಂದಿದ್ದೇವೆ ಎಂದರು.
ಬಿಜೆಪಿ ಗ್ಯಾರಂಟಿ ಅಲ್ಲ, ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ. 9 ವರ್ಷಗಳಿಂದ ಅವರು (ಬಿಜೆಪಿ) ಪ್ರಚಾರ ಮಾಡಲಿಲ್ಲ. ನಮ್ಮ ಗ್ಯಾರಂಟಿಗಳು ಬರುತಿದ್ದಂತೆ ಆ ಹೆಸರು ಕಾಪಿ ಮಾಡಿ ಮೋದಿ ಗ್ಯಾರಂಟಿ ಎನ್ನುತಿದ್ದಾರೆ. ಇತಿಹಾಸವನ್ನು ತಿರುಚಿ ಹೇಳುವ ಕೆಲಸ ಆರಂಭವಾಗಿದೆ ಎಂದು ತಿಳಿಸಿದರು.