This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

೩.೧೦ ಕೋಟಿ ವೆಚ್ಚದಲ್ಲಿ ನವೀಕೃತ ಸಂತೆ ಮೈದಾನ ನಿರ್ಮಾಣ : ಚರಂತಿಮಠ

ನಿಮ್ಮ ಸುದ್ದಿ ಬಾಗಲಕೋಟೆ

ನವನಗರದ ವಾಣಿಜ್ಯ ಸೆಕ್ಟರ ನಂ.೪ರಲ್ಲಿ ಸಂತೆ ಮೈದಾನವನ್ನು ೩.೧೦ ಕೋಟಿ ರೂ.ಗಳ ವೆಚ್ಚದಲ್ಲಿ ವಾಹನಗಳ ಪಾರ್ಕಿಂಗ್, ಸಾರ್ವಜನಿಕ ಶೌಚಾಲಯ ಮತ್ತು ಬೆಳಕಿನ ವ್ಯವಸ್ಥೆಯೊಂದಿಗೆ ಸುಸಜ್ಜಿತವಾಗಿ ನವೀಕರಿಸಲಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ನವನಗರದ ಸೆಕ್ಟರ ನಂ.೪ರಲ್ಲಿ ರವಿವಾರ ಹಮ್ಮಿಕೊಂಡ ಸಂತೆ ಮೈದಾನ ಪುನರಾರಂಭಕ್ಕೆ ಚಾಲನೆ ಅವರು ಮಾತನಾಡಿದರು. ನವೀಕೃತಗೊಂಡ ಸಂತೆ ಮೈದಾನದಲ್ಲಿ ವ್ಯಾಪಾರಸ್ಥರು ನಿಗಧಿತ ಸ್ಥಳಗಳಲ್ಲಿ ಅಂಗಡಿ ಹಾಕಿಕೊಂಡು ಗ್ರಾಹಕರಿಗೆ ನಿಗದಿಪಡಿಸಿದ ಕೆಂಪು ಬಣ್ಣದ ಹಾದಿಯಲ್ಲಿ ನಡೆಯಲು ಅನುಕೂಲ ಮಾಡಿಕೊಡಬೇಕು. ವ್ಯಾಪಾರ ಪೂರ್ಣಗೊಂಡ ನಂತರ ತಮ್ಮ ಸ್ಥಳದಲ್ಲಿದ್ದ ಎಲ್ಲ ತ್ಯಾಜ್ಯವನ್ನು ನಿಗದಿಪಡಿಸಿದ ಸ್ಥಳದಲ್ಲಿ ಹಾಕಲು ತಿಳಿಸಿದರು.

ಈ ಮೊದಲು ವಾರಕೊಂದು ಬಾರಿ ಸಂತೆ ಜರುಗುತ್ತಿದ್ದು ಇನ್ನು ಮುಂದೆ ಪ್ರತಿದಿನವು ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದ್ದು ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳಬೇಕು. ವ್ಯಾಪಾರಿಗಳಿಗೆ ಮಳೆಗಾಲದಲ್ಲಿ ತೊಂದರೆಯಾಗದಂತೆ ಮೇಲ್ಚಾವಣಿ ವ್ಯವಸ್ತೆ ಇದ್ದು ಮುಂಬರುವ ದಿನಗಳಲ್ಲಿ ಎಲ್ಲ ವ್ಯಾಪಾರಿಗಳಿಗೂ ಅನುಕೂಲವಾಗುವ ವ್ಯಾಪಾರಿ ಕಟ್ಟೆ ನಿರ್ಮಿಸುವುದರ ಜೊತೆಗೆ ರಸ್ತೆಯನ್ನು ನಿರ್ಮಿಸಲಾಗುವುದು ಎಂದರು.

ವ್ಯಾಪರಸ್ಥರು ತಮಗೆ ನೆರಳು ಬೇಕಾದಲ್ಲಿ ಕೊಟೆಗಳನ್ನು ಹಾಕಿಕೊಳ್ಳಲು ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದನ್ನು ಬಿಟ್ಟು ಮೈದಾನ ಹಾಳುಮಾಡುವ ಕಾರ್ಯಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದರು. ವ್ಯಾಪಾರಿಗಳು ನಿಗದಿತ ಸ್ಥಳ ಹೊರತು ಪಡಿಸಿ ಅಕ್ರಮಿಸಿದರೆ ನಿದ್ರಾಕ್ಷಿಣ್ಯವಾಗಿ ತೆಗೆದು ಹಾಕಲಾಗುವುದು. ಪ್ರಾಧಿಕಾರದಿಂದ ನಿಗದಿ ಪಡಿಸಿದ ಸ್ಥಳದಲ್ಲಿಯೇ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಮೋಹನ ನಾಡಗೌಡ, ಕುಮಾರ ಯಳ್ಳಿಗುತ್ತಿ, ಶಿವಾನಂದ ಟವಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾಧಿ, ಮುಖ್ಯ ಅಭಿಯಂತರ ಮನ್ಮತಯ್ಯ ಸ್ವಾಮಿ ಹಾಗೂ ಉಪವಿಭಾಗ ಒಂದರ ವಿ.ಜಿ.ಮಿಕ್ಕಲ, ಕಿರಿಯ ಅಭಿಯಂತರರಾದ ರಾಜು ಅವರಾಧಿ, ವಿಜಯಶಂಕರ ಹೆಬ್ಬಳ್ಳಿ, ಎಸ್.ಎಸ್.ಚಿನ್ನಣ್ಣವರ, ಸುರೇಶ ತೆಗ್ಗಿ, ಅಧೀಕ್ಷಕ ಇಂಜಿನೀಯರ್ ಎಂ.ಎಚ್.ಕಟ್ಟಿಮನಿ ಮತ್ತಿತರು ಉಪಸ್ಥಿತರಿದ್ದರು.

ಚರಂಡಿ ಮೇಲೆ ಆರ್.ಸಿ.ಸಿ ಸ್ಲ್ಯಾಬ್ ಕಾಮಗಾರಿಗೆ ಚಾಲನೆ
ನವನಗರದ ರಸ್ತೆ ಸಂಖ್ಯೆ ೧೩ ಹಾಗೂ ಎಫ್.ಎಕ್ಸ್ ಮಧ್ಯ ಯುನಿಟ್-೨ರಲ್ಲಿ ತುಂಬಾ ಆಳವಾದ ಮುಖ್ಯ ರಸ್ತೆಗಳಲ್ಲಿ ಇರುವ ಚರಂಡಿ ಮೇಲೆ ಸುರಕ್ಷತಾ ದೃಷ್ಟಿಯಿಂದ ಆರ್.ಸಿ.ಸಿ. ಸ್ಲಾö್ಯಬ್ ಕಾಮಗಾರಿಗೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸುವ ಮೂಲ ಚಾಲನೆ ನೀಡಿದರು.

Nimma Suddi
";