ಬಾಗಲಕೋಟೆ:
ಮೃತಪಟ್ಟ ಮಹಿಳೆಯ ಕುಟುಂಬಸ್ಥರಿಗೆ ವಿಮೆ ಹಣವನ್ನು ನೀಡಲು ನಿರಾಕರಿಸಿದ ಲೈಪ್ ಇನ್ಸೂರೆನ್ಸ್ ಕಂಪನಿ ಆಪ್ ಇಂಡಿಯಾಗೆ ಶೇ.೯ರ ಬಡ್ಡಿ ಸಮೇತ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.
ಇಲಕಲ್ಲ ನಿವಾಸಿ ಪದ್ಮಾವತಿ ಲಿಂಗಪ್ಪ ಗುಗ್ಗರಿ ಅವರು ಲೈಪ್ ಇನ್ಸೂರೆನ್ಸ್ ಕಂಪನಿ ಬಾದಾಮಿ ಶಾಖೆಯಲ್ಲಿ ೭೦ ಸಾವಿರ ರೂ.ಗಳಿಗೆ ವಿಮೆ ಪಡೆದಿದ್ದರು. ಸದರಿ ಪದ್ಮಾವತಿ ಅನಾರೋಗ್ಯದಿಂದ ಮೃತ ಪಟ್ಟಿದ್ದು, ಮೃತಳ ಪತಿ ಲಿಂಗಪ್ಪ ಗುಗ್ಗರಿ ಮೃತಳಿಗೆ ಮಕ್ಕಳು ಇರಲಿಲ್ಲ. ಆದರೆ ವಾರಸುದಾರರ ಸಂತೋಷ ಎಂದು ನಮೂದಾಗಿದ್ದು, ತಮಗೆ ವಿಮೆ ಹಣ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದರು.
ಈ ಹಿನ್ನಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನನ್ವಯ ತಹಶೀಲ್ದಾರ ನೀಡಿದ ವಾರಸಾ ಪ್ರಮಾಣ ಪತ್ರದಲ್ಲಿ ಮೃತಳ ಪತಿ ಮಾತ್ರ ವಾರಸುದಾರರಾಗಿದ್ದು, ಮತ ಇರುವದಿಲ್ಲ ಎಂದು ನಮೂದಿಸಲಾಗಿದೆ. ಅಲ್ಲದೇ ನಾಮಿನಿ ಸಂತೋಷ ಎಂಬುವರು ವಿಮಾ ಕಂಪನಿಗೆ ವಿಮೆ ಹಣ ಕೋರಿ ಅರ್ಜಿ ಸಲ್ಲಿಸಿರುವದಿಲ್ಲ.
ಈ ಹಿನ್ನಲೆಯಲ್ಲಿ ಸೇವಾ ನ್ಯೂನ್ಯತೆ ಎಸಗಿರುವುದು ಕಂಡುಬAದಿದ್ದು, ವಿಮಾ ಕಂಪನಿಗೆ ಶೇ.೯ರ ಬಡ್ಡಿದರದಲ್ಲಿ ವಿಮೆ ಹಣ ಕೊಡುವ ಜೊತೆಗೆ ೧೦ ಸಾವಿರ ರೂ. ವಿಶೇಷ ಪರಿಹಾರ, ೫ ಸಾವಿರ ಪ್ರಕರಣದ ಖರ್ಚು ನೀಡುವಂತೆ ಆಯೋಗದ ಅಧ್ಯಕ್ಷ ಡಿ.ವೈ.ಬಸಾಪೂರ, ಸದಸ್ಯರಾದ ಸಿ.ಎಚ್.ಸಮಿಉನ್ನಿಸ್ ಅಬ್ರಾರ್, ಕಮಲಕಿಶೋರ ಜೋಶಿ ಒಳಗೊಂಡ ಪೀಠವು ತೀರ್ಪು ನೀಡಿದೆ