ನಿಮ್ಮ ಸುದ್ದಿ ಬಾಗಲಕೋಟೆ
ಬರೀ ಕಸ, ಕಡ್ಡಿಯಿಂದ ತುಂಬಿದ್ದ ಹಳೆ ಬಾಗಲಕೋಟೆಯ ಪ್ರವಾಸಿ ಮಂದಿರದ ಆವರಣ ಇದೀಗ ವಾಯು ವಿಹಾರಿಗಳ ತಾಣವಾಗಿ ಬದಲಾಗಿದೆ.
ಈ ಆವರಣದಲ್ಲಿ ಮೊದಲೆಲ್ಲ ಕಸ, ಕಡ್ಡಿಯಿಂದ ತುಂಬಿರುತ್ತಿತ್ತು. ಅದನ್ನು ಬದಲಾಯಿಸಿ ಪೆವರ್ ಬ್ಲಾಕ್ ಅಳವಡಿಸಿ ಫುಟ್‌ಫಾತ್, ಜಿಮ್‌ಪಾರ್ಕ್ ನಿರ್ಮಿಸುವ ಮೂಲಕ ಆಕರ್ಷಕ ಮೈದಾನ ನಿರ್ಮಿಸಲಾಗಿದೆ.
ಸ್ಥಳೀಯ ನಿವಾಸಿ ಸಿ.ವಿ.ಕೋಟಿ ಅವರ ಆಸಕ್ತಿ ಹಾಗೂ ಶಾಸಕ ವೀರಣ್ಣ ಚರಂತಿಮಠ ಅವರ ಕಾಳಜಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇಲ್ಲಿ ಪ್ರತಿದಿನ ಪತಂಜಲಿ ಯೋಗ ಸಂಸ್ಥೆಯ ಯೋಗ ಪಟುಗಳು ಯೋಗಾಭ್ಯಾಸ ನಡೆಸುತ್ತಾರೆ.
ಪತಂಜಲಿ ಯೋಗ ಸಂಸ್ಥೆ ಹಮ್ಮಿಕೊಂಡ ಯೋಗ ಶಿಕ್ಷಕರ ತರಬೇತಿ ನಂತರ ಶಿಬಿರಾರ್ಥಿಗಳು ಆವರಣವನ್ನು ಸ್ವಚ್ಚಗೊಳಿಸುತ್ತಿದ್ದರು. ಸದ್ಯ ಸುಂದರ ತಾಣವಾಗಿರುವುದರಿಂದ ನಿತ್ಯ ನೂರಾರು ಜನ ವಾಕಿಂಗ್, ವ್ಯಾಯಾಮ ಹಾಗೂ ಯೋಗಾಭ್ಯಾಸದಲ್ಲಿ ತೊಡಗಿ, ಸರಳ ಹಾಗೂ ನೈಸರ್ಗಿಕ ಆರೋಗ್ಯ ಹೊಂದುವ ಮೂಲಕ ಆವರಣದ ವಾತಾವರಣ ಬದಲಾಯಿಸಿದ್ದಾರೆ.
ಇದೀಗ ಜಿಮ್ ಅಳವಡಿಕೆ, ಫುಟ್‌ಪಾತ್ ಮೂಲಕ ಸುಂದರವಾಗಿ ಕಂಗೊಳಿಸುತ್ತಿದೆ. ಹಳೆ ಐಬಿ ಆವರಣ ಅಭಿವೃದ್ಧಿ ಆಗಿರುವುದರಿಂದ ನೂರಾರು ಜನ ವಾಕಿಂಗ್, ಯೋಗಾಬ್ಯಾಸದಲ್ಲಿ ತೊಡಗಿಕೊಳ್ಳಲು ಅನುಕೂಲವಾಗಿದೆ ಎಂದು ಶ್ರೀಶೈಲ ಮಠಪತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.