ಬಾಗಲಕೋಟೆಯಲ್ಲಿ ಶತಕ ದಾಖಲಿಸಿದ ಕೊವೀಡ್
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಹಲವು ತಿಂಗಳ ನಂತರ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಭಾನುವಾರ ಶತಕ ದಾಖಲಿಸಿದೆ.
ಕೋವಿಡ್ 2ನೇ ಅಲೆ ತೀವ್ರತೆಗೊಳ್ಳುತ್ತಿರುವ ಮುನ್ಸೂಚನೆ ದೊರಕಿದ್ದು ಜನ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಎಲ್ಲರನ್ನೂ ಸುತ್ತಿಕೊಳ್ಳಲಿದೆ.
ಭಾನುವಾರ ಒಂದೇ ದಿನ ಜಿಲ್ಲೆಯಾದ್ಯಂತ 104 ಕೊರೋನಾ ಪ್ರಕರಣ ದಾಖಲಾಗಿವೆ. ಬಾಗಲಕೋಟೆ ತಾಲೂಕಿನಲ್ಲಿ 23, ಬಾದಾಮಿ 13, ಜಮಖಂಡಿ 22, ಬೀಳಗಿ 9, ಮುಧೋಳ 23 ಹಾಗೂ ಹುನಗುಂದ ತಾಲೂಕಿನಲ್ಲಿ 14 ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.
ಕಳೆದೊಂದು ವರ್ಷದ ಹಿಂದೆ ಆರಂಭವಾದ ಕೋವಿಡ್ ನಿಂದಾಗಿ ಈವರೆಗೆ 5,06,614 ಸ್ಯಾಂಪಲ್ ಸಂಗ್ರಹಿಸಲಾಗಿದ್ದು, 4,90,802 ನೆಗೆಟಿವ್ ಹಾಗೂ 14,625 ಪಾಸಿಟಿವ್ ಪ್ರಕರಣ ವರದಿ ಆಗಿವೆ.
326 ಸಕ್ರೀಯ ಪ್ರಕರಣಗಳಿದ್ದು 138 ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ. 14,159 ಜನ ಗುಣಮುಖರಾಗಿದ್ದು 625 ಜನರ ವರದಿ ನಿರೀಕ್ಷಿಸಲಾಗುತ್ತಿದೆ.