This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಕಾಟಾಚಾರಕ್ಕೆ ಕೋವಿಡ್ ನಿರ್ವಹಣೆ ತಂಡ

ಆದೇಶಗಳು ಪಾಲನೆ ಆಗುತ್ತಿಲ್ಲ

ಮನೆಗಳಾಗುತ್ತಿವೆ ವ್ಯಾಪಾರಿ ಮಳಿಗೆಗಳು

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಸರಕಾರದ ಆದೇಶಗಳು ಕಾಗದದಲ್ಲೇ ಕೊಳೆಯುತ್ತಿವೆಯೇ ಹೊರತು ಪಾಲನೆ ಆಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇದಕ್ಕೆ ಶುಕ್ರವಾರ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷ ಸಂಗಪ್ಪ ತಳವಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿತವಾದ ವಿಷಯಗಳು ಜನರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.

ಸ್ವತ: ಸದಸ್ಯರಿಗೆ ಸರಿಯಾದ ಮಾಹಿತಿ ನೀಡದೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇಕಾಬಿಟ್ಟಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಳಿದರೆ ಸರಕಾರದ ಆದೇಶ ಪಾಲಿಸಿದ್ದೇವೆ ಎಂದು ಫೈಲ್‌ನಲ್ಲಿರುವ ಕಡತಗಳನ್ನು ತೋರಿಸುತ್ತಾರೆ.

ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳ ಹೋಂ ಕ್ವಾರಂಟೈನ್ ವಾಚ್ ಆ್ಯಪ್ ಕಾರ್ಯ ನಿರ್ವಹಿಸುವುದಕ್ಕೆ ಸಮುದಾಯ ಸಂಘಟನಾ ಅಧಿಕಾರಿ ಡಿ.ಭೂತಪ್ಪ ನೇತೃತ್ವದಲ್ಲಿ ಮೂವರು ಸಿಬ್ಬಂದಿ ನೇಮಿಸಿದ್ದರೂ ಕಾಟಾಚಾರಕ್ಕೆ ಒಬ್ಬ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿರುವುದನ್ನು ಅವರೂ ಸಹ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿತು.

ಸಭೆ, ಸಮಾರಂಭ, ಧಾರ್ಮಿಕ ಆಚರಣೆ, ರ‍್ಯಾಲಿ, ಮದುವೆ, ಅಂತ್ಯಸಂಸ್ಕಾರ, ಮಾರುಕಟ್ಟೆಯಲ್ಲಿ ಜನಸಂದಣಿ, ವ್ಯಾಪಾರಸ್ಥರಿಗೆ ಕೋವಿಡ್ ನಿಯಮ ಪಾಲನೆ, ಮಾಸ್ಕ್ ಧರಿಸದವರಿಗೆ ದಂಡ ಹೀಗೆ ಪ್ರತಿ ಕಾರ್ಯಕ್ಕೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ಅವರ ಕೈ ಕೆಳಗೆ ನಾಲ್ಕೆೈದು ಸಿಬ್ಬಂದಿ ನೇಮಿಸಿ ಆದೇಶಿಸಿದೆ. ಆದರೆ ಈ ಆದೇಶದ ಜಿಲ್ಲಾಡಳಿತಕ್ಕೆ ಕಳುಹಿಸುವ ಕಡತಗಳಿಗೆ ಮಾತ್ರ ಸೀಮಿತವಾದಂತಿದೆ ಎಂಬುದು ಸದಸ್ಯರ ಆರೋಪವಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಪಟ್ಟಣದಲ್ಲಿ ಇಂದಿಗೂ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ ಎಂಬ ದೂರು ಕೇಳಿದೆ. ಕಿರಾಣಿ ಅಂಗಡಿಯಲ್ಲಿ ಸಾಮಾಜಿಕ ಅಂತರವಿಲ್ಲ, ಸ್ಯಾನಿಟೈಸರ್ ವ್ಯವಸ್ಥೆಯಿಲ್ಲ, ತರಕಾರಿ ತಳ್ಳುಗಾಡಿಯಲ್ಲಿರದೆ ಒಂದೆಡೆ ಕುಳಿತು ವ್ಯಾಪಾರ ಮಾಡುತ್ತಿರುವುದು ಯಥೇಚ್ಛವಾಗಿ ನಡೆದಿದೆ. ಮತ್ತೊಂದೆಡೆ ಅಗತ್ಯ ವಸ್ತುಗಳು ಹೊರತು ಪಡಿಸಿ ಯಾವುದೇ ಅಂಗಡಿ ತೆರೆದಿರಬಾರದೆಂದಿದ್ದರೂ ಅಮೀನಗಡದಲ್ಲಿ ಮಾತ್ರ ಎಲ್ಲವೂ ತೆರೆದಿರುತ್ತವೆ. ಇದಕ್ಕಾಗಿಯೇ ಜನಸಂದಣಿ ಹೆಚ್ಚಾಗಿ ಪೊಲೀಸರು ಹರಸಾಹಸ ಪಡುವಂತಾಗಿದೆ ಎನ್ನಲಾಗಿದೆ.

ಬಟ್ಟೆ ಅಂಗಡಿ, ಮೊಬೈಲ್ ಅಂಗಡಿ, ಗುಟ್ಕಾ, ಜನರಲ್ ಸ್ಟೊರ‍್ಸ್ ಹೀಗೆ ಬಹುತೇಕ ಅಂಗಡಿಗಳು ಬೆಳಗ್ಗೆ ೧೦ರ ವರೆಗೆ ಕಾರ್ಯ ನಿರ್ವಹಿಸುತ್ತಿದ್ದು ಕೋವಿಡ್ ತಡೆಗೆ ರಚನೆಯಾದ ತಂಡಗಳು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿವೆ. ಇನ್ನು ಬಹುತೇಕ ಅಂಗಡಿಗಳು ಮನೆಗೆ ಸ್ಥಳಾಂತರವಾದಂತೆ ತೋರುತ್ತಿದ್ದು ಮನೆ ಬಾಗಿಲು ತೆರೆಯುವ ನೆಪದಲ್ಲಿ ದಿನದ ೨೪ ಗಂಟೆಯೂ ವ್ಯಾಪಾರ ಭರ್ಜರಿಯಾಗಿ ನಡೆದಿರುತ್ತದೆ.

ಪಟ್ಟಣದಲ್ಲಿ ಮಾಸ್ಕ್ ಹಾಕಿಕೊಳ್ಳದವರಿಗೆ ಆರಂಭದಲ್ಲಿ ದಂಡ ವಿಧಿಸಲು ಮುಂದಾಗಿದ್ದ ಸ್ಥಳೀಯ ಆಡಳಿತ ಇತ್ತೀಚಿನ ದಿನದಲ್ಲಿ ಅದನ್ನೂ ಸಹ ಮಾಡುತ್ತಿಲ್ಲ ಎಂಬ ದೂರು ಕೇಳಿದೆ. ಮದುವೆ, ಅಂತ್ಯ ಸಂಸ್ಕಾರ, ತಿಥಿ ಊಟ ಹೀಗೆ ಹಲವು ಕಾರ್ಯಗಳು ಸರಕಾರದ ನಿಯಮ ಮೀರಿ ನಡೆಯುತ್ತಿದ್ದರೂ ಪಪಂ ಆಡಳಿತ ಮಾತ್ರ ನಮಗೇನು ಗೊತ್ತಿಲ್ಲ ಎಂಬಂತೆ ವರ್ತಿಸುತ್ತಿದೆ. ಹೀಗಾಗಿ ಪಟ್ಟಣದಲ್ಲಿ ಇತ್ತೀಚೆಗೆ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಮರಣ ಹೊಂದುವವರ ಸಂಖ್ಯೆಯೂ ಏರುಗತಿಯಲ್ಲಿದೆ.

Nimma Suddi
";