ನಿಮ್ಮ ಸುದ್ದಿ ಬಾಗಲಕೋಟೆ
ಕೊರೊನಾ ರೋಗ ನಿಯಂತ್ರಣಕ್ಕೆ ಬವಿವ ಸಂಘದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ (ಶ್ವಾಸಕೋಶ ವಿಭಾಗ) ಕೊಠಡಿ ಸಂಖ್ಯೆ ೯ರಲ್ಲಿ ಪ್ರತಿದಿನ ಬೆಳಗ್ಗೆ ೯.೧೫ ರಿಂದ ೫ರ ವರೆಗೆ ಸೌಲಭ್ಯ ದೊರೆಯಲಿದೆ. ೪೫ ರಿಂದ ೫೯ ವರ್ಷ ವಯಸ್ಸಿನ ರಕ್ತದೊತ್ತಡ ಹಾಗೂ ಮಧುಮೇಹ ಸಂಬAಧಿತ ಕಾಯಿಲೆಯಿಂದ ಬಳಲುತ್ತಿದ್ದರೆ ಅಂಥವರು ಶೀಘ್ರ ಲಸಿಕೆ ಹಾಕಿಸಿಕೊಳ್ಳಬೇಕು. ೬೦ ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಕೋವಿಡ್ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ.
ಲಸಿಕೆ ಪಡೆಯಲು ಆಧಾರ ಸಂಖ್ಯೆ ಕಡ್ಡಾಯವಾಗಿದ್ದು ವಯಸ್ಸಿನ ದೃಢೀಕರಣಕ್ಕಾಗಿ ಯಾವುದೇ ಸರಕಾರಿ ದಾಖಲೆ ತರುವುದು ಕಡ್ಡಾಯವಾಗಿರುತ್ತದೆ. ಸರಕಾರ ನಿಗದಿ ಪಡಿಸಿದ ೨೫೦ ರೂ. ಪಾವತಿಸಿ ಲಸಿಕೆ ಹಾಕಿಸಿಕೊಳ್ಳಬೇಕು. ಮಾಹಿತಿಗೆ ಡಾ.ಅಶೋಕ ಡೋರ್ಲೆ (೪೪೮೪೦೮೨೪೪), ಡಾ.ಬಿ.ಎಸ್.ಮನ್ನಾಪೂರ (೮೦೭೩೭೪೭೬೭೩) ಸಂಪರ್ಕಿಸಬಹುದು.
ಕೊರೊನಾ ನಿಯಂತ್ರಣಕ್ಕೆ ಲಸಿಕಾ ಅಭಿಯಾನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬವಿವ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.