ನಿಮ್ಮ ಸುದ್ದಿ ಬಾಗಲಕೋಟೆ
ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿ ಹಾಗೂ ಪ್ರವಾಹ ಕಾರಣದಿಂದಾಗಿ ಮಧ್ಯ ಋತುವಿನ ಪ್ರತಿಕೂಲತೆಯಿಂದಾಗಿ ಕ್ಲೈಮ್ ಖಾತೆ ಪಾವತಿಯ ಕುರಿತಂತೆಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾ ಜಂಟಿ ಸಮಿತಿ ಸಭೆ ಜರುಗಿತು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಇನ್ಸೂರನ್ಸ್ ಕಂಪನಿಯಿಂದ 2019-20ನೇ ಸಾಲನಲ್ಲಿ ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆಯಾಗದ ಬೆಳೆ ವಿಮೆ ಪ್ರಸ್ತಾವನೆಗಳ ಪೈಕಿ ಮುಂಗಾರು ಹಂಗಾಮಿನಲ್ಲಿ 88 ಮತ್ತು ಹಿಂಗಾರು ಹಂಗಾಮಿನಲ್ಲಿ 938 ರೈತರ ಅರ್ಜಿಗಳು ತಿರಸ್ಕøತಗೊಂಡಿದ್ದು, ಈ ಬಗ್ಗೆ ವಿನಾಯಿತಿ ಕೊಟ್ಟು ರೈತರಿಂದ ಆಕ್ಷೇಪಣೆ ಪಡೆದು ಸಂಬಂಧಿಸಿದ ದಾಖಲೆಯನ್ನು ಪಡೆದು ಜಿಲ್ಲೆಯಲ್ಲಿ ತಾಲ್ಲೂಕಾ ಮಟ್ಟದ ಜಂಟಿ ಸಮಿತಿಯಲ್ಲಿ ಮಂಡಿಸಿ ಸಲ್ಲಿಸಿದ ವರದಿಯಂತೆ ಸಂರಕ್ಷಣೆ ತಂತ್ರಾಂಶದಲ್ಲಿ ಕ್ರಮಕೈಗೊಳ್ಳಲು ತಿಳಿಸಿದರು.
2021-22ನೇ ಸಾಲಿನಲ್ಲಿ ಬಾಗಲಕೋಟೆ ತಾಲೂಕಿನಲ್ಲಿ ವಿಮೆ ಯೋಜನೆಯಡಿ ಸ್ವೀಕೃತಗೊಂಡ 40 ಅರ್ಜಿಗಳ ಪೈಕಿ 17 ಜನರಿಗೆ ಪರಿಹಾರ ದೊರೆತಿದ್ದು, ಇನ್ನು 23 ರೈತರ ಪರಿಹಾರ ಬಾಕಿ ಉಳಿದ ಬಗ್ಗೆ ಇನ್ಸೂರೆನ್ಸ್ ಕಂಪನಿಯವರು ಅರ್ಜಿಗಳನ್ನು ಪುರಸ್ಕರಿಸಿ ಕ್ಲೈಮಗೆ ಕ್ರಮವಹಿಸಲಾಗುವುದೆಂದು ತಿಳಿಸಿದರು.
ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ 1700 ಪ್ರಕರಣಗಳಿಗೆ ವಿಮೆ ಪರಿಹಾರ ಹಣ ಜಮೆ ಮಾಡಲಾಗಿದ್ದರು. ರೈತ ಖಾತೆಗೆ ಜಮೆ ಆಗಿರುವದಿಲ್ಲ. ಈ ಬಗ್ಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದಾಗ ರೈತರೆ ಬ್ಯಾಂಕ್ ಖಾತೆಗೆ ಆಧಾರ ಲಿಂಕ್, ಎನ್.ಪಿ.ಸಿ.ಐ ಸೀಡಿಂಗ್ ಆಗದೇ ಇರುವ ಕಾರಣ ಹಣ ಜಮೆ ಆಗಿರುವದಿಲ್ಲ. ಬಾಕಿ ಇರುವ ರೈತರ ಖಾತೆಗೆ ಆಧಾರ ಸೀಡಿಂಗ್ ಮಾಡಲಾಗಿದ್ದು, ಬಿಡಿಸಿಸಿ ಬ್ಯಾಂಕನಲ್ಲಿ ಆಧಾರ ಸೀಡಿಂಗ್‍ಗೆ ಬಾಕಿ ಉಳಿಸಿವೆ ಎಂದು ಸಭೆಗೆ ತಿಳಿಸಿದಾಗ ಎರಡು ದಿನಗಳಲ್ಲಿ ಬಾಕಿ ಇರುವ ರೈತರ ಖಾತೆಗೆ ಆಧಾರ ಸೀಡಿಂಗ್ ಕ್ರಮವಹಿಸಲು ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಉಪ ನಿರ್ದೇಶಕ ರಾಹುಲ್ ಕುಮಾರ ಬಾವಿದಡ್ಡಿ, ಬಾಗಲಕೋಟೆ ಉಪ ಕೃಷಿ ನಿರ್ದೇಶಕ ಎಚ್.ಡಿ.ಕೋಳೇಕರ, ಜಮಖಂಡಿ ಉಪ ಕೃಷಿ ನಿರ್ದೇಶಕ ಕೆ.ಎಸ್.ಅಗಸನಾಳ, ರೈತ ಪ್ರತಿನಿಧಿ ವೆಂಕಣ್ಣ ಲಂಕೆಣ್ಣವರ ಹಾಗೂ ಗಿರಿಯಪ್ಪಗೌಡ ಪಾಟೀಲ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಕೃಷಿ ವಿಜ್ಞಾನಿಗಳು, ವ್ಯವಸ್ಥಾಪಕರು, ಜಿಲ್ಲಾ ಅಗ್ರಣಿಯ ಬ್ಯಾಂಕ್, ಇನ್ಸೂರನ್ಸ್ ಕಂಪನಿಯ ಪ್ರತಿನಿಧಿಗಳಾದ ಸಂದೀಪ, ಪವನ, ಸುನೀಲ್, ಕನಕಪ್ಪ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು, ಸಹಾಯಕ ಕೃಷಿ ನಿರ್ದೇಶಕರು ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳು ಹಾಗೂ ಉಪಸ್ಥಿತರಿದ್ದರು.