This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

State News

ದಕ್ಷಿಣಕಾಶಿ ನಂಜನಗೂಡಿನ ಪಂಚ ಮಹಾರಥೋತ್ಸವ ; ರಥ ಎಳೆಯುವಾಗಲೂ RCB ಪರ ಜಯಘೋಷ!

ದಕ್ಷಿಣಕಾಶಿ ನಂಜನಗೂಡಿನ ಪಂಚ ಮಹಾರಥೋತ್ಸವ ; ರಥ ಎಳೆಯುವಾಗಲೂ RCB ಪರ ಜಯಘೋಷ!

ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನ ಪಂಚ ಮಹಾರಥೋತ್ಸವ ಮಾ. 22ರಂದು ವಿಜೃಂಭಣೆಯಿಂದ ನೆರವೇರಿದ್ದು, ಲಕ್ಷಾಂತರ ಭಕ್ತರ ಸಮಾಗಮದಲ್ಲಿ ದೊಡ್ಡ ಜಾತ್ರೆ ಸುಸೂತ್ರವಾಗಿ ನೆರವೇರಿದ್ದು, ನಂಜುಂಡೇಶ್ವರನ ಸ್ಮರಣೆಯಲ್ಲಿ ಭಕ್ತರು ಮಿಂದೆದ್ದರು. ಬೆಳಿಗ್ಗೆ 6:30 ರಿಂದ 6:50 ರೊಳಗಿನ ಶುಭ ಮೀನ ಲಗ್ನದಲ್ಲಿ ಈ ಬಾರಿಯ ಪಂಚಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು ಎಂದು ಮಾಹಿತಿ ತಿಳಿದು ಬಂದಿದೆ.

ಆರ್ ಸಿ ಬಿ, ಆರ್ ಸಿ ಬಿ, ಆರ್ ಸಿ ಬಿ ಎಂದು ಘೋಷಣೆ ಕೂಗಿ ಅಭಿಮಾನಿಗಳು ಸಂಭ್ರಮಿಸಿದರು. ಆರ್ ಸಿ ಬಿ ತಂಡದ ಬಾವುಟ, ಬ್ಯಾನರ್ ಹಿಡಿದು ಘೋಷಣೆ ಕೂಗಿದರು. ಲಕ್ಷಾಂತರ ಜನರ ನಡುವೆ ರಾರಾಜಿಸಿದ ಆರ್ ಸಿ ಬಿ ಬ್ಯಾನರ್ ಹಾಗೂ ಬಾವುಟಗಳು ಎಲ್ಲರ ಗಮನ ಸೆಳೆದವು.ಪಂಚಮಹಾರಥೋತ್ಸವದ ವೇಳೆ ಮೊದಲಿಗೆ ಗಪಣತಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದ ರಥ ಸಾಗಿತು.

ವಿಶೇಷವೆಂದರೆ, ರಥೋತ್ಸವದ ವೇಳೆಯಲ್ಲಿ, ಕೆಲವು ಕ್ರಿಕೆಟ್ ಅಭಿಮಾನಿಗಳು ಆರ್ ಸಿಬಿ ಪರವಾಗಿ ಜಯಘೋಷ ಮಾಡಿದರು.ದಕ್ಷಿಣಕಾಶಿ ನಂಜನಗೂಡು ಪಂಚಮಹಾರಥೋತ್ಸವದ ವೇಳೆಯೂ ಆರ್ ಸಿ ಬಿ ಪರ ಜಯಘೋಷ ಮೊಳಗಿದೆ. ಆರ್ ಸಿ ಬಿ ತಂಡದ ಗೆಲುವಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ನಂಜನಗೂಡು ಪಂಚಮಹಾರಥೋತ್ಸವಕ್ಕೆ ಬಂದಿದ್ದ ಆರ್ ಸಿ ಬಿ ಅಭಿಮಾನಿಗಳು ತಂಡದ ಒಳಿತಿಗಾಗಿ ಪೂಜೆ ಸಲ್ಲಿಕೆ ಮಾಡಿದರು.

ಶ್ರೀಕಂಠೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಬೃಹತ್ ರಥ ಸುಮಾರು 108 ಅಡಿ ಎತ್ತರವಿದ್ದು 110 ಟನ್ ತೂಕವಿದೆ. ಈ ಬೃಹತ್ ರಥವನ್ನು ಹರ್ಷೋದ್ಗಾರಗಳ ನಡುವೆ ಭಕ್ತರು ಎಳೆದು ಸಾಗುವ ಮೂಲಕ ಸಂಭ್ರಮಿಸಿದರು. ನಂಜುಂಡೇಶ್ವರನ ದೇಗುಲದ ಮುಂಭಾಗದಿಂದ ಹೊರಟ ರಥಗಳು ರಥ ಬೀದಿಯಲ್ಲಿ ಸಾಗಿದ ನಂತರ ಮತ್ತೆ ನಂಜುಂಡೇಶ್ವರನ ದೇಗುಲದ ಬಳಿಗೆ ಬಂದು ತಲುಪಿದವು.

ನಂತರ ಶ್ರೀಕಂಠೇಶ್ವರಸ್ವಾಮಿ, ಪಾರ್ವತಿ ಅಮ್ಮ, ಸುಬ್ರಹ್ಮಣ್ಯಸ್ವಾಮಿ, ಚಂಡಿಕೇಶ್ವರಸ್ವಾಮಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ರಥಗಳು ಒಂದಾದ ಮೇಲೆ ಒಂದರಂತೆ ಸಾಗಿದ್ವು. ಈ ವೇಳೆ ಜಮಾಯಿಸಿದ್ದ ಲಕ್ಷಾಂತರ ಜನರು ರಥಗಳ ಮೇಲೆ ಹಣ್ಣು ಜವನವನ್ನು ಎಸೆದು ಭಕ್ತಿಭಾವ ಮೆರೆದರು.

 

Nimma Suddi
";