ವಿಜಯನಗರ:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ನಿಮಿತ್ತ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಉತ್ತರಾದಿ ಮಠಕ್ಕೆ ದಲಿತರು ಭಾನುವಾರ ಪ್ರವೇಶ ಮಾಡಿದ್ದು, ಬ್ರಾಹ್ಮಣ ಸಂಘದ ಅಧ್ಯಕ್ಷ ದಿವಾಕರ್ ನೇತೃತ್ವದಲ್ಲಿ ಶ್ರೀಮಠದ ಅರ್ಚಕರು ಬರಮಾಡಿಕೊಂಡರು ಎಂದು ಮಾಹಿತಿ ತಿಳಿದು ಬಂದಿದೆ.
ಮಠಕ್ಕೆ ಪ್ರವೇಶಿಸಿ, ಸಮಿತಿ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಫಲ, ಪ್ರಸಾದ ಸ್ವೀಕರಿಸಿದರು.ಸಮಿತಿ ಮುಖಂಡ ಮರಡಿ ಜಂಬಯ್ಯ ನಾಯಕ ಹಾಗೂ ವಕೀಲ ಎ. ಕರುಣಾನಿಧಿ ಮಾತನಾಡಿ, ”ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಸಮಾನತೆ ಸಾರಿದ್ದಾರೆ. ಮೊದಲು ನಮ್ಮ ಮನಸ್ಸುಗಳು ಒಂದಾಗಬೇಕು. ಹಾಗಾಗಿ ಅಂಬೇಡ್ಕರ್ ಜನ್ಮದಿನದ ನಿಮಿತ್ತ ಸೌಹಾರ್ದಯುತವಾಗಿ ಉತ್ತರಾದಿ ಮಠದ ಪ್ರವೇಶ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.
ಶ್ರೀಮಠದವರು ಆದರದಿಂದ ಬರಮಾಡಿಕೊಂಡಿದ್ದಾರೆ. ನಾವೆಲ್ಲರೂ ಸೇರಿ ಸಮಾಜಕ್ಕೆ ಉತ್ತಮ ಸಂದೇಶ ನೀಡೋಣ. ಶಾಂತಿ, ಸಹಬಾಳ್ವೆಯಿಂದ ಜೀವಿಸೋಣ. ಸಂವಿಧಾನದ ಆಶಯ ಉಳಿಸೋಣ,” ಎಂದು ಹೇಳಿದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ದಿವಾಕರ್ ಮಾತನಾಡಿ, ”ನಾವು ಸದಾ ಎಲ್ಲರ ಜತೆಗೆ ಇದ್ದೇವೆ. ಇಡೀ ಹೊಸಪೇಟೆ ಜನರು ಸೇರಿ ಊರಮ್ಮ ದೇವಿ ಜಾತ್ರೆಯನ್ನು ಹಬ್ಬದಂತೆ ಆಚರಿಸಿದ್ದೇವೆ. ಹಾಗಾಗಿ ಹೊಸಪೇಟೆಯಲ್ಲಿ ಎಂದಿಗೂ ಸೌಹಾರ್ದತೆಗೆ ಧಕ್ಕೆಯಾಗಿಲ್ಲ. ನಾವೆಲ್ಲರೂ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡೋಣ,” ಎಂದರು.
ಸುಬ್ರಹ್ಮಣ್ಯ: ಸರಕಾರಿ ರಜೆ ಹಾಗೂ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಾನುವಾರ ಭಾರಿ ಸಂಖ್ಯೆಯಲ್ಲಿ ಭಕ್ತಸಾಗರವೇ ಕಂಡು ಬಂತು.ಶನಿವಾರ ಬೆಳಗ್ಗೆಯಿಂದಲೇ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಾನುವಾರ ಮತ್ತಷ್ಟು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ದರುಶನ ಪಡೆದು ಸೇವೆ ನೆರವೇರಿಸಿ, ಪ್ರಸಾದ ಸ್ವೀಕರಿಸಿದರು.
ಮುಖಂಡರಾದ ಆರ್.ಭಾಸ್ಕರ್ ರೆಡ್ಡಿ, ವಿ.ಸ್ವಾಮಿ, ರಮೇಶ್, ಪವನ್, ಎನ್.ಯಲ್ಲಾಲಿಂಗ, ಬಿಸಾಟಿ ಮಹೇಶ್, ಧನರಾಜ್, ನಾಗಮ್ಮ, ದುರುಗಮ್ಮ, ಉತ್ತರಾದಿ ಮಠದ ಉಮರ್ಜಿ ರಾಮಾಚಾರ್ಯ, ಆನಂದಾಚಾರ್ಯ ಮಹಿಷಿ, ವ್ಯವಸ್ಥಾಪಕ ಕೃಷ್ಣಾಚಾರ್ಯ, ಮಠದ ಭಕ್ತ ರಮೇಶ್ ನವರತ್ನ ಇದ್ದರು.