This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಅಮ್ಮನಿಗಾಗಿ ಸಾಯಿ ಬಾಬಾ ಮಂದಿರ ನಿರ್ಮಿಸಿದ ದಳಪತಿ ವಿಜಯ್

ಅಮ್ಮನಿಗಾಗಿ ಸಾಯಿ ಬಾಬಾ ಮಂದಿರ ನಿರ್ಮಿಸಿದ ದಳಪತಿ ವಿಜಯ್

ನಟ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಕಾಲಿಡೋ ಘೋಷಣೆ ಮಾಡಿದ್ದು, ಅವರು ಸದ್ಯ ‘GOAT’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದು ಶೀಘ್ರವೇ ಅವರ 69ನೇ ಸಿನಿಮಾ ಘೋಷಣೆ ಆಗಲಿದೆ. ಇದು ಅವರ ಕೊನೆಯ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ.

ಲೋಕಸಭೆ ಚುನಾವಣೆಗೆ ಸ್ಪರ್ಧಿಸದೆ 2026ರಲ್ಲಿ ಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಈಗ ದಳಪತಿ ವಿಜಯ್ ಅವರು ಚೆನ್ನೈನಲ್ಲಿ ಸಾಯಿ ಬಾಬಾ ಮಂದಿರ ನಿರ್ಮಾಣ ಮಾಡಿದ್ದಾರೆ. ಇದು ಅವರ ತಾಯಿಗಾಗಿ ನಿರ್ಮಾಣ ಮಾಡಿದ ಮಂದಿರ ಎಂದು ಮಾಹಿತಿ ತಿಳಿದು ಬಂದಿದೆ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ದಳಪತಿ ವಿಜಯ್ ಅವರು ಸಣ್ಣ ಜಾಗ ಒಂದನ್ನು ಹೊಂದಿದ್ದು, ಅಲ್ಲಿ ಈ ಮಂದಿರ ನಿರ್ಮಾಣ ಆಗಿದೆ. ವಿಜಯ್ ತಾಯಿ ಶೋಭಾ ಅವರಿಗೆ ದೇವಸ್ಥಾನ ನಿರ್ಮಾಣ ಮಾಡಬೇಕು ಎನ್ನುವ ಕನಸಿತ್ತು. ಆ ಕನಸು ಈಗ ಈಡೇರಿದೆ. ಚೆನ್ನೈನ ಕೊರಟ್ಟೂರ್​ನಲ್ಲಿ ಈ ಮಂದಿರ ನಿರ್ಮಾಣ ಆಗಿದೆ.

ಈ ವರ್ಷ ಫೆಬ್ರವರಿಯಲ್ಲಿ ಈ ಮಂದಿರ ನಿರ್ಮಾಣದ ಕಾರ್ಯ ಪೂರ್ಣಗೊಂಡಿದೆ ಎನ್ನಲಾಗಿದೆ. ಅವರು ಇತ್ತೀಚೆಗೆ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವಿಜಯ್ ಅವರು ಸಾಯಿ ಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಏಕೆ ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೆ ಉತ್ತರ ಈಗ ಸಿಕ್ಕಂತೆ ಆಗಿದೆ.

ವಿಜಯ್ ಅವರು ‘ಗ್ರೇಟೆಸ್ಟ್ ಆಫ್ ಆಲ್​ ಟೈಮ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತ್ರಿಶಾ ನಾಯಕಿ. ಈ ಸಿನಿಮಾದಲ್ಲಿ ಪ್ರಭುದೇವ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆ ವಿಜಯ್ ಅವರ ಮುಂದಿನ ಸಿನಿಮಾ ಬಗ್ಗೆಯೂ ಚರ್ಚೆ ಶುರುವಾಗಿದೆ. ಈ ಚಿತ್ರವನ್ನು ಅಟ್ಲಿ ನಿರ್ದೇಶನ ಮಾಡುತ್ತಾರೆ ಎಂದು ಕೂಡ ವರದಿಯಾಗಿದ್ದ ಮಾಹಿತಿ ಬೆಳಕಿಗೆ ಬಂದಿದೆ.

";