*Data Entry Operator: ಪ್ರತಿ ಪಂಚಾಯ್ತ್ ಗೆ ಒಬ್ಬ ಡೇಟಾ ಎಂಟ್ರಿ ಸ್ಟಾಫ್ ನೇಮಕ! ಹೀಗಿರುತ್ತೆ ಸೆಲೆಕ್ಷನ್*
ಇದೀಗ ಕರ್ನಾಟಕ ಸರ್ಕಾರ ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗಳಿಗೂ ಡಾಟಾ ಎಂಟ್ರಿ ಆಪರೇಟರ್ (Data Entry Operators) ನೇಮಕ ಮಾಡಲು ಅಧಿಸೂಚನೆ ಯನ್ನು ನೀಡಿದೆ.
ಈಗಾಗಲೇ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ. ಇನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಲ್ಲಿ ನೀವು ಡಾಟಾ ಎಂಟ್ರಿ ಆಪರೇಟರ್ (Data Entry Operator) ಹುದ್ದೆಗೆ ನೇಮಕಾತಿ ವಿಧಾನ ಯಾವ ರೀತಿ ಮಾಡುತ್ತಾರೆ. ವಿದ್ಯಾರ್ಹತೆ ಏನು ಇತ್ಯಾದಿ ಮಾಹಿತಿ ಗಳು ಸಿಗುತ್ತವೆ.
ವಿದ್ಯಾರ್ಹತೆ ಏನು:
ಡಾಟಾ ಎಂಟ್ರಿ ಆಪರೇಟರ್ (Data Entry Operator) ಹುದ್ದೆಯನ್ನು ನೀವು ಪಡೆಯಬೇಕಾದರೆ, ನಿಮ್ಮ ವಿದ್ಯಾರ್ಹತೆ ಸೆಕೆಂಡ್ ಪಿಯುಸಿ ಪಾಸ್ ಆಗಿರಬೇಕು. ಕಂಪ್ಯೂಟರ್ ಕೇಂದ್ರಗಳಿಂದ ತರಬೇತಿ ಪಡೆದ ಕಂಪ್ಯೂಟರ್ ಟ್ರೈನಿಂಗ್ ತರಬೇತಿ ಪ್ರಮಾಣ ಪತ್ರ ಇರಬೇಕು. ಅಂತ ಸೂಚಿಸಲಾಗಿದೆ. ಆಪರೇಟರ್ ಹುದ್ದೆಗೆ ನೇರ ನೇಮಕಾತಿ ವಿಧಾನವಿರುತ್ತದೆ.
ಸೂಚನೆ ನೀಡಲಿದೆ:
ಈ ನೇಮಕಾತಿ ಬಗ್ಗೆ ಪಂಚಾಯತಿಗಳು ಗ್ರಾಮಂತರ ಪ್ರದೇಶದಲ್ಲಿ ಸೂಚನೆ ನೀಡಲಿದೆ.ಈ ಹುದ್ದೆಗೆ ಆಯ್ಕೆಯಾದ ಸಿಬ್ಬಂದಿ ಗಳಿಗೆ ಮಾಸಿಕ ಅಂದ್ರೆ ಪ್ರತಿ ತಿಂಗಳು ರೂ.16,738 ವೇತನ ನೀಡುತ್ತಾರೆ.