This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsState News

ಯುವನಿಧಿ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಡಿಸಿ ಕರೆ

ಯುವನಿಧಿ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಡಿಸಿ ಕರೆ

ಬಾಗಲಕೋಟೆ:

ಸರಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯು ಜಿಲ್ಲಯಲ್ಲಿ ನೂರಕ್ಕೆ ನೂರರಷ್ಟು ಸಮರ್ಪಕ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಕರೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಯುವನಿಧಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಕುರಿತು ಜರುಗುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ಪ್ರತಿ ಪದವಿ ಹಾಗೂ ಡಿಪ್ಲೋಮಾ ಕಾಲೇಜಿನಲ್ಲಿ ಜನವರಿ 1, 2023 ರಿಂದ ಪಾಸಾದ ವಿದ್ಯಾರ್ಥಿಗಳು ಈ ಯೋಜನೆಯಡಿ ನೊಂದಾಯಿಸಲು ಅರ್ಹರಾಗಿರುತ್ತಾರೆ.

ಅಂತ ವಿದ್ಯಾರ್ಥಿಗಳ ಮಾಹಿತಿಯನ್ನು ಕ್ರೂಢೀಕರಿಸಿ ಮಾಹಿತಿ ನೀಡಬೇಕು. ಅಂದಾಗ ಮಾತ್ರ ಅರ್ಹ ಅಭ್ಯರ್ಥಿಗಳ ಮಾಹಿತಿ ಲಭ್ಯವಾಗಲಿದೆ ಎಂದರು.

ಕಾಲೇಜು ಹಂತದಲ್ಲಿ ಅರ್ಹ ನಿರುದ್ಯೋಗಿಗಳ ಪಟ್ಟಿ ದೊರೆತಲ್ಲಿ ಅವರೆಲ್ಲರನ್ನು ಎನ್‍ಎಡಿ ಪೋರ್ಟಲ್‍ನಲ್ಲಿ ನೊಂದಣಿ ಮಾಡಲು ಅನುಕೂಲವಾಗುತ್ತದೆ. ನಿಮ್ಮ ಹಂತದಲ್ಲಿ ತಾಂತ್ರಿಕ ತೊಂದರೆಯಿಂದ ನೊಂದಣಿ ಆಗದಿದ್ದಲ್ಲಿ ಅವುಗಳ ಮಾಹಿತಿಯನ್ನು ನೀಡಿದಲ್ಲಿ ನೊಂದಣಿಗೆ ಕ್ರಮವಹಿಸಲಾಗುತ್ತದೆ.

ಯುವನಿಧಿ ಯೋಜನೆಗೆ ಸರಕಾರ ನಿಗದಿಪಡಿಸಿದ ಅರ್ಹತೆಗಳು ಹೊಂದಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಜಿಲ್ಲೆಯ ಪ್ರತಿಯೊಂದು ಕಾಲೇಜಿನ ಪ್ರಾಚಾರ್ಯರು ಎರಡು ದಿನಗಳ ಒಳಗಾಗಿ ಅರ್ಹ ಅಭ್ಯರ್ಥಿಗಳ ಮಾಹಿತಿ ನೀಡಿದಲ್ಲಿ ನೋಂದಣಿಗೆ ಕಾಲೇಜುವಾರು ಕ್ಯಾಂಪ್‍ಸಹ ಮಾಡಲಾಗುತ್ತದೆ. ಅಲ್ಲದೇ ಪ್ರತಿ ಕಾಲೇಜಿಗೆ ಓರ್ವ ನೋಡಲ್ ಅಧಿಕಾರಿಗಳನ್ನು ಸಹ ನೇಮಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 2802 ಜನ ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಒಟ್ಟು ಎಷ್ಟು ಜನ ಈ ಯೋಜನೆಗೆ ಒಳಪಡಲಿದ್ದಾರೆಂಬುದು ಮಾಹಿತಿ ಸಿಗಬೇಕಿದೆ. ಈ ನಿಟ್ಟಿನಲ್ಲಿ ಪ್ರಾಚಾರ್ಯರು ತಮ್ಮ ಕಾಲೇಜುವಾರು 2023ರಲ್ಲಿ ತೇರ್ಗಡೆಹೊಂದಿದ ಅರ್ಹ ನಿರುದ್ಯೋಗ ಅಭ್ಯರ್ಥಿಗಳ ಮಾಹಿತಿ ನೀಡಬೇಕು.

ಅಂದಾಗ ಮಾತ್ರ ಈ ಪೈಕಿ ನೊಂದಣಿ ಎಷ್ಟು ಆಗಿದೆ. ಇನ್ನು ಎಷ್ಟು ಆಗಬೇಕೆಂಬುದು ಗೊತ್ತಾಗುತ್ತದೆ. ಇದರಿಂದ ನೂರಕ್ಕೆ ನೂರರಷ್ಟು ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಸರಕಾರವು ಸಹ ಈ ಯೋಜನೆ ಪ್ರಕ್ರಿಯೆ ಬಗ್ಗೆ ಪ್ರತಿದಿನ ಮೌಲ್ಯಮಾಪನ ಮಾಡುತ್ತಿದೆ. ಯುವನಿಧಿ ಯೋಜನೆಯಡಿ ನೊಂದಣಿಯಾದಲ್ಲಿ ಕೌಶಲ್ಯ ಅಭಿವೃದ್ದಿ ಇಲಾಖೆಯಿಂದ ಯುವಜನತೆಗೆ ಅನುಕೂಲವಾಗಲಿದೆ.

ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಪ್ರಾಚಾರ್ಯರು ಅರ್ಹ ವಿದ್ಯಾರ್ಥಿಗಳ ನೊಂದಣಿಗೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃಧ್ದಿ ಅಧಿಕಾರಿ ಗುರುಪಾದಯ್ಯ ಹಿರೇಮಠ ಸೇರಿದಂತೆ ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ ಪದವಿ ಕಾಲೇಜಿನ ಪ್ರಾಚಾರ್ಯರು ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರು ಉಪಸ್ಥಿತರಿದ್ದರು.

*ವಿಡಿಯೋಗ್ರಾಫಿ, ವಾರ್ತಾ ವಾಚಕ, ಬ್ಯೂಟಿಷಿಯನ್ ತರಬೇತಿಗೆ ಅರ್ಜಿ*

ಬಾಗಲಕೋಟೆ:

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ ಯುವಜನರಿಗೆ ವಿಡಿಯೋಗ್ರಾಫಿ, ನಿರೂಪಣಾ ಮತ್ತು ವಾರ್ತಾ ವಾಚಕರ, ಜಿಮ್, ಫಿಟ್‍ನೆಸ್ ತರಬೇತಿ ಹಾಗೂ ಯುವತಿಯರಿಗೆ ಬ್ಯೂಟಿಷಿಯನ್ ತರಬೇತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.

ಜಿಮ್, ಫಿಟ್‍ನೆಸ್ ತರಬೇತಿ ಶಿಬಿರವು ಜನವರಿ 24 ರಿಂದ ಫೆಬ್ರವರಿ 7 ವರೆಗೆ ಒಟ್ಟು 15 ದಿನಗಳ ಕಾಲ ನಡೆಯಲಿದೆ. ಈ ತರಬೇತಿಗೆ ದ್ವಿತೀಯ ಪಿಯುಸಿ ಪಾಸಾಗಿದ್ದು, 16 ರಿಂದ 30 ವರ್ಷದೊಳಗಿರಬೇಕು. ತರಬೇತಿ ಬೆಂಗಳೂರಿನ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ ವಿದ್ಯಾನಗರ, ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಬ್ಯೂಟಿಷಿಯನ್ ತರಬೇತಿಯು ಜನವರಿ 26 ರಿಂದ 13 ದಿನಗಳ ವರೆಗೆ ನಡೆಯಲಿದ್ದು, ಎಸ್.ಎಸ್.ಎಲ್.ಸಿ ಪಾಸ್/ಪೇಲ್ ಆಗಿರಬೇಕು. 15 ರಿಂದ 29 ವಯಸ್ಸು ಮೀರಿರಬಾರದು. ವಿಡಿಯೋಗ್ರಾಫಿ ತರಬೇತಿಯು ಜನವರಿ 27 ರಿಂದ 12 ದಿನಗಳ ವರೆಗೆ ನಡೆಯಲಿದೆ. ದ್ವಿತೀಯ ಪಿಯುಸಿ ಪಾಸಾಗಿದ್ದು, 15 ರಿಂದ 29 ವರ್ಷ ಮೀರಿರಬಾರದು. ತರಬೇತಿ ಬೆಂಗಳೂರಿನ ಕುಂಬಳಗೋಳ ತರಬೇತಿ ಕೇಂದ್ರದಲ್ಲಿ ನಡೆಸಲಾಗುತ್ತಿದೆ.

ನಿರೂಪಣಾ ಮತ್ತು ವಾರ್ತಾ ವಾಚಕರ ತರಬೇತಿಯು ಜನವರಿ 31 ರಿಂದ 8 ದಿನಗಳ ಕಾಲ ನಡೆಯಲಿದೆ. ಪದವಿ ಹಾಗೂ ಜರ್ನಲಿಸಂಗೆ ಪ್ರಾಮುಖ್ಯತೆ ನೀಡಲಾಗುತ್ತದೆ. 15 ರಿಂದ 29 ವರ್ಷದೊಳಗಿರಬೇಕು. ತರಬೇತಿಯನ್ನು ಬೆಂಗಳೂರಿನ ಯುವಿಕಾ ಸಭಾಂಗಣದಲ್ಲಿ ನಡೆಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸುವ ಯುವಜನರಿಗೆ ಊಟೋಪಚಾರ, ಪ್ರಮಾಣ ಪತ್ರ, ಸಾಮಾನ್ಯ ವಸತಿ ವ್ಯವಸ್ಥೆ ನೀಡಲಾಗುತ್ತದೆ. ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಚೇರಿ, ಕ್ರೀಡಾ ಇಲಾಖೆ, ನವನಗರ, ಬಾಗಲಕೋಟೆ ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜನವರಿ 20 ರಂದು ಸಂಜೆ 4 ಗಂಟೆಯೊಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂಸಮ.08354-235896, 9739722700, 9945284771ಗೆ ಸಂಪರ್ಕಿಸಬಹುದಾಗಿದೆ.

Nimma Suddi
";