ಬಾಗಲಕೋಟೆ
ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಸಾಯವಯ ಮೇಳದ ಅಂಗವಾಗಿ ಹಮ್ಮಿಕೊಂಡ ಸಿರಿಧಾನ್ಯ ನಡಿಗೆಗೆ ಜಿಲ್ಲಾಕಾರಿ ಕೆ.ಎಂ.ಜಾನಕಿ ಹಾಗೂ ಜಿಪಂ ಸಿಇಓ ಶಶೀಧರ ಕುರೇರ ಗುರುವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಕಾರಿ, ಎಲ್ಲ ವಯಸ್ಸಿನವರು ಸಿರಿಧಾನ್ಯ ಬಳಸುವುದರಿಂದ ಹಲವಾರು ರೋಗಗಳಿಂದ ದೂರವಿರಲು ಸಾಧ್ಯವಿದೆ. ಉತ್ತಮ ಸಮಾಜಕ್ಕಾಗಿ ಸಿರಿಧಾನ್ಯ ಆಹಾರ ಬಳಕೆ ಅವಶ್ಯವಾಗಿದೆ. ಸಿರಿಧಾನ್ಯಗಳನ್ನು ಬಳಕೆ ಮಾಡುವದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.
ಸಾವಯುವ ಪದ್ಧತಿಯಲ್ಲಿ ಸಿರಿಧಾನ್ಯ ಬೆಳೆಯುವದರಿಂದ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸಾರ್ವಜನಿಕರು ಸಿರಿಧಾನ್ಯಗಳ ಹೆಚ್ಚೆಚ್ಚು ಬಳಕೆ ಮಾಡುವದರಿಂದ ರೈತರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಜಿಪಂ ಸಿಇಒ ಶಶಿಧರ ಕುರೇರ, ವಿಶ್ವ ಸಂಸ್ಥೆಯು ೨೦೨೩ನ್ನು ವಿಶ್ವ ಸಿರಿಧಾನ್ಯ ವರ್ಷವನ್ನಾಗಿ ಆಚರಿಸುತ್ತಿದ್ದು, ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಇವುಗಳ ಬಳಕೆಯಿಂದ ಹಲವು ರೋಗಳಿಂದ ಮುಕ್ತರಾಗಬಹುದು ಎಂದು ತಿಳಿಸಿದರು.
ಜಿಲ್ಲಾಡಳಿತ ಭವನದಿಂದ ಆರಂಭವಾದ ಸಿರಿಧಾನ್ಯ ನಡಿಗೆ ಪೊಲೀಸ್ ಪ್ಯಾಲೇಸ್, ಎಲ್‌ಐಸಿ ಸರ್ಕಲ್, ಎಸ್‌ಬಿಐ, ಜಿಲ್ಲಾಸ್ಪತ್ರೆ, ಕಾಳಿದಾಸ ಸರ್ಕಲ್ ಮಾರ್ಗವಾಗಿ ವಿದ್ಯಾಗಿರಿ ಎಂಜಿನೀಯರಿAಗ್ ಕಾಲೇಜ್ ವೃತ್ತಕ್ಕೆ ಮುಕ್ತಾಯಗೊಂಡಿತು.
ವಿದ್ಯಾಗಿರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಸಿರಿಧಾನ್ಯಗಳ ಬಳಕೆ, ಅವುಗಳ ಮಹತ್ವ ಮತ್ತು ಸಾವಯವ ಕೃಷಿ ಬಗ್ಗೆ ಒತ್ತು ನೀಡಲು ಉತ್ತೇಜಿಸಲಾಯಿತು. ನಡಿಗೆಯಲ್ಲಿ ೨೫ ಸೈಕ್ಲಿಸ್ಟಗಳು, ಎತ್ತಿನ ಬಂಡಿ, ಕಿವುಡ ಮತ್ತು ಮೂಕ ಶಾಲೆಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಮಾರ್ಗದುದ್ದಕ್ಕೂ ಸಿರಿಧಾನ್ಯಗಳ ಜಾಗೃತಿ ಘೋಷಣೆ ಕೂಗಿದರು.
ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಯೋಜನಾಕಾರಿ ಪುನಿತ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷö್ಮಣ ಕಳ್ಳೆನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ಕೃಷಿ ಇಲಾಖೆಯ ಉಪನಿರ್ದೇಶಕರಾದ ಎಲ್.ಐ.ರೂಢಗಿ, ಕೆ.ಎಸ್.ಅಗಸಿನಾಳ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಪಿ.ಕೆ.ಪಾಟೀಲ ಇತರರು ಇದ್ದರು.