This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsState News

ಹೆಣ್ಣು ಭ್ರೂಣ ಹತ್ಯೆ ತಡೆಗೆ ಸಹಕಾರ ಅಗತ್ಯ : ಡಿಸಿ ಜಾನಕಿ

ಹೆಣ್ಣು ಭ್ರೂಣ ಹತ್ಯೆ ತಡೆಗೆ ಸಹಕಾರ ಅಗತ್ಯ : ಡಿಸಿ ಜಾನಕಿ

ಬಾಗಲಕೋಟೆ

ಹೆಣ್ಣು ಭ್ರೂಣ ಹತ್ಯೆ ಮಹಾಪಾಪವಾಗಿದ್ದು, ಅದನ್ನು ತಡೆಯಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ತಿಳಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು ಹಾಗೂ ಕ್ಷ-ಕಿರಣ ವೈದ್ಯರುಗಳಿಗೆ ಹಮ್ಮಿಕೊಂಡ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ವೈದ್ಯರು ಕಾನೂನು ಬಾಹೀರವಾದ ಕೆಲಸ ಮಾಡಬಾರದು. ಹೆಣ್ಣು ಭ್ರೂಣ ಹತ್ಯೆ ಜಿಲ್ಲೆಗೆ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತಿದ್ದು, ವ್ಯವಸ್ಥೆ ಬದಲಾವಣೆ ಎಲ್ಲರೂ ಕೈಜೋಡಿಸಬೇಕು ಎಂದರು.

ನಾಗರಿಕರ ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆಯಂತಹ ಕಾರ್ಯಗಳು ನಡೆಯುತ್ತಿರುವುದು ವಿಷಾಧನೀಯ ಸಂಗತಿ. ಇಂತಹ ಕಾರ್ಯಗಳಲ್ಲಿ ತೊಡಗಿದವರಿಗೆ ಕಾನೂನಿನ ರೀತಿಯಲ್ಲಿ ಶಿಕ್ಷೆಯಾಗಬೇಕು ಅಂದಾಗ ಮಾತ್ರ ತಡೆಯಲು ಸಾಧ್ಯವಾಗುತ್ತದೆ. ಎಲ್ಲ ಜೀವಕ್ಕು ಹಕ್ಕು ಇದೆ. ವೈದ್ಯರು ತಮ್ಮ ವೈದ್ಯಕೀಯ ಧರ್ಮದ ಜೊತೆಗೆ ಸಾಮಾಜಿಕ ಕಳಕಳಿ ಇಟ್ಟುಕೊಂಡು ಕೆಲಸ ಮಾಡಬೇಕು. ವೈದ್ಯರಿಗೆ ಗೌರವ ಸ್ಥಾನವಿದ್ದು, ವೃತ್ತಿಗೆ ಚ್ಯೂತಿ ಬರದ ಹಾಗೆ ನಿಮ್ಮ ಕರ್ತವ್ಯ ಮಾಡಲು ತಿಳಿಸಿದರು.

ಸಮಾಜದ ಪ್ರತಿಯೊಬ್ಬರಿಗೂ ಹೆಣ್ಣಿನ ಬಗ್ಗೆ ಸಂವೇಧನಾಶೀಲತೆ ಬರಬೇಕು. ಸ್ಕ್ಯಾನಿಂಗ್ ಸೌಲಭ್ಯ ಹೊಂದಿರುವ ಪ್ರತಿಯೊಮದು ಕೇಂದ್ರದ ನೋಂದಣಿ ಕಡ್ಡಾಯವಾಗಿದ್ದು, ಯಾರೆ ವ್ಯಕ್ತಿ ವೈಜ್ಞಾನಿಕ ತಂತ್ರಗಳನ್ನು ಭ್ರೂಣ ಲಿಂಗ ಪತ್ತೆಗಾಗಿ ಬಳಸಿದರೆ, ಬಳಸಲು ಕಾರಣವಾದರೆ, ಸಹಾಯ ಮಾಡಿದರೆ, ಲಿಂಗಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಗರ್ಭಿಣಿ ಮಹಿಳೆಯ ಮೇಲೆ ಒತ್ತಡ ಹೇರಿದರೆ ಅದು ಅಪರಾಧವಾಗುತ್ತದೆ. ಈ ಬಗ್ಗೆ ಅರಿವು ಮೂಡಿಸಿ. ವೈದ್ಯರು ತಮ್ಮ ವೃತ್ತಿ ಧರ್ಮ ಮರೆಯದೇ, ನೈತಿಕ ಮೌಲ್ಯ ಉಳಿಸಿಕೊಳ್ಳಬೇಕು. ಭ್ರೂನ ಹತ್ಯೆಯಿಂದ ಉಂಟಾಗಬಹುದಾದ ಸಮಸ್ಯೆ ಹಾಗೂ ಸಾಮಾಜಿಕ ಅಸಮತೋಲನದ ಬಗ್ಗೆ ಅರಿವು ಮೂಡಿಸಿದಲ್ಲಿ ಪಿಡುಗು ನಿವಾರಣೆ ಮಾಡಲು ಸಾಧ್ಯವೆಂದರು.

ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜಕುಮಾರ ಯರಗಲ್ಲ ಅವರು ಜಿಲ್ಲೆಯಲ್ಲಿ ಗರ್ಭಪಾತ ಪ್ರಕರಣಗಳು ಹೆಚ್ಚಿಗೆ ಕಂಡುಬರುತ್ತಿವೆ. ಅದನ್ನು ತಡೆಯುವ ನಿಟ್ಟಿನಲ್ಲಿ ವೈದ್ಯರುಗಳಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಣ್ಣು ಭ್ರೂಣ ಹತ್ಯೆಯಂತಹ ಮಹಾಪಾಪದ ಕಾರ್ಯ ನಿಲ್ಲಿಸಲು ಎಲ್ಲರೂ ಕೈಜೋಡಿಸಬೇಕು. ಕಾರ್ಯಾಗಾರದ ಮೂಲಕ ಕಾಯ್ದೆಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಾಗಾರದಲ್ಲಿ ಬಿವಿವ ಸಂಘದ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಸ್ತ್ರೀರೋಗ ತಜ್ಞೆ ಡಾ.ಆಶಾ ಮಲ್ಲಾಪೂರ, ರೆಡಿಯಾಲಿಜಿಸ್ಟ ಅನಿಲ ಕಾರಡೆ ಅವರು ಸ್ತ್ರೀರೋಗ, ಪ್ರಸೂತಿ ಹಾಗೂ ಕ್ಷ-ಕಿರಣ ವೈದ್ಯರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಶ್ರೀಶೈಲ ಹಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

*ಹುನಗುಂದ : ಡೇ-ನಲ್ಮ ಯೋಜನೆಯಡಿ ಅರ್ಜಿ*
—————————————
ಬಾಗಲಕೋಟೆ: ನವೆಂಬರ 29 (ಕರ್ನಾಟಕ ವಾರ್ತೆ) : ಹುನಗುಂದ ಪರುಸಭೆಯು ಪ್ರಸಕ್ತ ಸಾಲಿನ ಡೇ-ನಲ್ಮ ಅಭಿಯಾನದಡಿ 6 ಮಹಿಳಾ ಸಂಘಗಳನ್ನು ರಚಿಸಲು, ಒಂದು ಎಎಲೆಪಿ ಸಂಘ ರಚಿಸಲು, 3 ವ್ಯಯಕ್ತಿಕ ಸಾಲ, 3 ಇಂಟರಸೆಪ್ ಕಾರ್ಯಕ್ರಮ ಹಾಗೂ 1 ಮೂರನೆ ವ್ಯಕ್ತಿಯ ತಪಾಸಣೆ ಮಾಡುವ ಸಲುವಾಗಿ ಗುರಿ ಹೊಂದಲಾಗಿದೆ. ಅರ್ಹ ಫಲಾನುಭವಿಗಳಿಗೆ ಡಿಸೆಂಬರ 3 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಬಹುದಾದ ದಾಖಲಾತಿಗಳಿಗಾಗಿ ಹುನಗುಂದ ಪುರಸಭೆ ಕಚೇರಿ ಡೇ-ನಲ್ಮ ವಿಷಯ ನಿರ್ವಾಹಕರನ್ನು ಸಂಪಕಿಸುವಂತೆ ಪ್ರಕಟಣೆ ತಿಳಿಸಿದೆ.

Nimma Suddi
";