This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National NewsState News

*ಪಿಎಂ ವಿಶ್ವಕರ್ಮ ಯೋಜನೆ ಅನುಷ್ಠಾನಕ್ಕೆ ಡಿಸಿ ಸೂಚನೆ

*ಪಿಎಂ ವಿಶ್ವಕರ್ಮ ಯೋಜನೆ ಅನುಷ್ಠಾನಕ್ಕೆ ಡಿಸಿ ಸೂಚನೆ

ಬಾಗಲಕೋಟೆ

ಕೇಂದ್ರ ಸರ್ಕಾರವು ಸ್ಥಳೀಯ ಕುಶಲಕರ್ಮಿಗಳ ಗುಡಿ ಕೈಗಾರಿಗಳ ಅಭಿವೃದ್ಧಿ ಹಾಗೂ ಏಳಿಕೆಗಾಗಿ ಪಿಎಂ ವಿಶ್ವಕರ್ಮ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು, ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅಧಿಕಾರಿಗಳಿಗ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಪಿಎಂ ವಿಶ್ವಕರ್ಮ ಯೋಜನೆ ಅನುಷ್ಠಾನ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಈ ಯೋಜನೆಯಡಿ ಒಟ್ಟು 18 ವರ್ಗದ ಕುಶಲ ಕರ್ಮಿಗಳು ಬರುತ್ತಿದ್ದು, ಯೋಜನೆಯಿಂದ ಅರ್ಹ ಫಲಾನುಭವಿಗಳಿಗೆ ತರಬೇತಿ ಹಾಗೂ ಸೌಲಭ್ಯ ಒದಗಿಸಬೇಕು. ಅರ್ಹ ಕುಶಲಕರ್ಮಿಗಳು ಕಾಮನ್ ಸರ್ವೀಸ್ ಸೆಂಟರ್ (ಸಿಎಸ್‍ಸಿ), ಗ್ರಾಮ ಒನ್ ಸೇವಾ ಕೇಂದ್ರ, ಬಾಗಲಕೋಟೆ ಒನ್ ಸೇವಾ ಕೇಂದ್ರ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಯೋಜನೆಯ ಸೌಲಭ್ಯಕ್ಕೆ ನೋಂದಣಿಗೆ ಕ್ರಮವಹಿಸಲು ತಿಳಿಸಿದರು.

ಯೋಜನೆಯಡಿ ಸೌಲಭ್ಯಕ್ಕಾಗಿ ನೋಂದಾಯಿಸಿಕೊಂಡ ಕುಶಲ ಕರ್ಮಿಗಳಿಗೆ ಬೇಸಿಕ್ 5 ರಿಂದ 7 ದಿನಗಳು ಹಾಗೂ ಮುಂಚಿತವಾಗಿ 15 ದಿನಗಳು ತರಬೇತಿ ಹಾಗೂ ಅವಧಿಯಲ್ಲಿ ಪ್ರತಿದಿನ 500 ರೂ.ಗಳಂತೆ ಸ್ಟೈಪಂಡ್ ನೀಡಲಾಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಕುಶಲಕರ್ಮಿಗಳಿಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ, ಕುಶಲಕರ್ಮಿ ಐಡಿ ಕಾರ್ಡ, 15 ಸಾವಿರ ರೂ ಟೂಲ್ ಕಿಟ್ ಪೆÇ್ರೀತ್ಸಾಹಧನ ಹಾಗೂ ಅರ್ಹ ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ರೂ. 1 ಲಕ್ಷ ಗಳ ಸಾಲ ಸೌಲಭ್ಯ, 2ನೇ ಹಂತದಲ್ಲಿ ರೂ. 2 ಲಕ್ಷ ಗಳ ಸಾಲ ಸೌಲಭ್ಯವನ್ನು ಶೇ. 5ರ ಬಡ್ಡಿ ದರದಲ್ಲಿ ಬ್ಯಾಂಕ್‍ಗಳ ಮೂಲಕ ಒದಗಿಸಿ, ಫಾನುಭವಿಗಳು ತಯಾರಿಸಲ್ಪಡುವ ಉತ್ಪನ್ನಗಳಿಗೆ ಮಾರುಕಟ್ಟೆ ಹಾಗೂ ಡಿಜಿಟಲ್ ವಹಿವಾಡಿಗೆ ಉತ್ತೇಜಿಸಲಾಗುತ್ತಿದೆ ಎಂದರು.

ಈ ಯೋಜನೆಯಡಿಯಲ್ಲಿ ಪ್ರಸ್ತುತ ಬಡಗಿತನ, ದೋಣಿ ತಯಾರಿಕೆ, ಶಸ್ತ್ರಾಸ್ತ್ರ ತಯಾರಿಕೆ, ಬೀಗ ತಯಾರಿಕೆ, ಶಿಲ್ಪಕಲೆ (ಮೂರ್ತಿಕಾರರು, ಕಲ್ಲು ಕೆತ್ತನೆ), ಕಲ್ಲು ಪುಡಿ ಮಾಡುವವರು, ಆಭರಣ ತಯಾರಿಕೆ (ಅಕ್ಕಸಾಲಿಗರು), ಕುಂಬಾರಿಕೆ, ಚಮ್ಮಾರರು (ಚರ್ಮಗಾರಿಕೆ), ಪಾದರಕ್ಷೆ ತಯಾರಿಕೆ, ಗಾರೆ ಕೆಲಸಗಾರಿಕೆ (ಗೌಂಡಿ), ಪೆÇರಕೆ, ಬ್ಯಾಸ್ಕೆಟ್ಸ್, ಮ್ಯಾಟ್ ತಯಾರಿಕೆ, ನಾರುನೇಕಾರರು, ಸಾಂಪ್ರದಾಯಿಕ ಬೊಂಬೆ ಹಾಗೂ ಆಟಿಕೆ ಸಾಮಾನು ತಯಾರಿಕೆ, ಕ್ಷೌರಿಕರು, ಮಾಲೆ ತಯಾರಕರು, ಅಗಸಿಗರು(ಧೋಬಿ), ಸಿಂಪಿಗರು (ದರ್ಜಿ) ಹಾಗೂ ಮೀನುಗಾರಿಕೆ ಬಲೆ ತಯಾರಕರು ಸೇರಿ ಒಟ್ಟು 18 ವರ್ಗದ ಕುಶಲ ಕರ್ಮಿಗಳಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು.

ಫಲಾನುಭವಿಗಳು 18 ವರ್ಷ ಮೇಲ್ಪಟ್ಟವರು ಯೋಜನೆಯಡಿ ತಿಳಿಸಿದ ಕುಶಲಕರ್ಮಿಗಳು ಯಾವುದಾದರೊಂದು ವೃತ್ತಿಯಲ್ಲಿ ಸ್ವಯಂ ಉದ್ಯೋಗಸ್ಥರಾಗಿರಬೇಕು. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರರಾಗಿರಬಾರದು. ಹೆಚ್ಚಿನ ಮಾಹಿತಿಗಳಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಜಿಲ್ಲಾಡಳಿತ ಭವನ ರೂಂ ನಂ118, ನವನಗರ ಬಾಗಲಕೋಟೆ ಕಛೇರಿ ದೂಸಂ. 08354-295210 ಹಾಗೂ 7676634184ಗೆ ಸಂಪರ್ಕಿಸುವಂತೆ ತಿಳಿಸಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ ಬಾರಿಗಿಡದ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಗುರುಪಾದಯ್ಯ ಹಿರೇಮಠ, ಜಿಲ್ಲಾ ಅಗ್ರಣಿ ಬ್ಯಾಂಕ್‍ನ ವ್ಯವಸ್ಥಾಪಕ ಮದುಸೂಧನ ಸೇರಿದಂತೆ ಇತರರ ಉಪಸ್ಥಿತರಿದ್ದರು.
ಛಾಯಾಚಿತ್ರ ಲಗತ್ತಿಸಿದೆ.

*ವೈರಾಣು ಸೋಂಕು ತಡೆಗೆ ಆಯುಷ ಇಲಾಖೆ ಸಲಹೆ*
———————————-
ಬಾಗಲಕೋಟೆ:

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವೈರಾಣು ಸೋಂಕಿನಿಂದಾಗಿ ಬಹಳಷ್ಟು ಜನರು ಜ್ವರದಿಂದ ಬಳಲುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಆಯುಷ್ ಇಲಾಖೆಯ ಸಲಹೆಗಳನ್ನು ಅನುಸರಿಸುವಂತೆ ಜಿಲ್ಲಾ ಆಯುಷ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ ತಿಳಿಸಿದ್ದಾರೆ.
ಮುಖ್ಯವಾಗಿ ವೈರಾಣು ಸೋಂಕಿನಿಂದ ಜ್ವರ, ತಲೆನೋವು, ನೆಗಡಿ, ಕೆಮ್ಮು ಹಾಗೂ ಮೈಕೈ ನೋವು ಉಂಟಾಗುತ್ತದೆ. ಈ ಸೋಂಕು ತಡೆಗಟ್ಟಲು ಅನುಸರಿಸಬೇಕಾಗ ವಿಧಾನಗಳು ಇಂತಿವೆ. ತಾಜಾ, ಬಿಸಿಯಾದ, ಜೀರ್ಣಕ್ಕೆ ಸುಲಭವಾದ ಆಹಾರವನ್ನು ಸೇವಿಸಬೇಕು. ಆಯಾ ಕಾಲಕ್ಕೆ ಲಭ್ಯವಿರುವ ಹಣ್ಣು, ತರಕಾರಿಗಳನ್ನು ಸೇವಿಸಿ, ತುಳಸಿ, ಶುಂಠಿ ಹಾಗೂ ಅರಿಶಿಣಗಳ ಮಿಶ್ರಣದ ಕಷಾಯವನ್ನು ಕುಡಿಯುವುದು. ಅಗತ್ಯವಿದ್ದಲ್ಲಿ ಬೆಲ್ಲವನ್ನು ಸೇರಿಸುವುದು. ಮಧುಮೇಹಿ ರೋಗಿಗಳು ಬೆಲ್ಲ ರಹಿತ ಕಷಾಯವನ್ನು ಸೇವಿಸಬೇಕು. ಅಮೃತಬಳ್ಳಿ ಕಾಂಡವನ್ನು ಒಣಗಿಸಿ ಅಥವಾ ಪತ್ರದ ಕಷಾಯವನ್ನು (ಎಲೆಯ ರಸವನ್ನು) 15-20 ಮಿಲಿ ದಿನಕ್ಕೆ 2 ಬಾರಿ ಸೇವಿಸಬೇಕು.
ಕೆಮ್ಮು ಇದ್ದಾಗ ಒಂದು ಚಿಟಿಕೆ ಕಾಳು ಮೆಣಸಿನ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು. ಶೀತಲೀಕರಿಸಿದ ಪದಾರ್ಥವನ್ನು ಸೇವಿಸಬಾರದು. ತಂಪಾದ ಗಾಳಿ ಬೀಸುವ ಸ್ಥಳದಿಂದ ದೂರವಿರಬೇಕು. ಒಂದು ಕಪ್ಪು ಹಾಲಿಗೆ ಒಂದು ಚಿಟಿಕೆಯಷ್ಟು ಅರಿಶಿಣ ಪುಡಿಯನ್ನು ಹಾಕಿ ಸೇವಿಸುವುದು. ವಿಶ್ರಾಂತಿ ಪಡೆಯಿರಿ ಹಾಗೂ ಸಮಯಕ್ಕೆ ಸರಿಯಾಗಿ ನಿದ್ರಿಸಿ. ನಿರ್ಜಲೀಕರಣವಾಗದಂತೆ ಆಗಾಗ ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು. ಕಡಿಮೆ ಲಕ್ಷಣಗಳಿದ್ದಲ್ಲಿ ಈ ಮೇಲಿನ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಸೋಂಕನ್ನು ತಡೆಗಟ್ಟುವ ವಿಧಾನಗಳನ್ನು ಅನುಸರಿಸಬೇಕು. ತೀವ್ರತರ ಲಕ್ಷಣಗಳಿದ್ದಲ್ಲಿ ಸಮೀಪದ ಆಸ್ಪತ್ರೆಗೆ ತಕ್ಷಣವೇ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವಂತೆ ಆಯುಷ ಅಧಿಕಾರಿಗಳು ತಿಳಿಸಿದ್ದಾರೆ.

";