This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಜನರ ಸಮಸ್ಯೆಗಳಿಗೆ ಸ್ಪಂಧಿಸಿದ ಡಿಸಿ ಸುನೀಲ್‍ಕುಮಾರ

ಬೇವೂರಿನಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ

ನಿಮ್ಮ ಸುದ್ದಿ ಬಾಗಲಕೋಟೆ

ಕೆರೆ ಒತ್ತುವರಿ, ಜಮೀನುಗಳಿಗೆ ದಾರಿ, ಮಾಶಾಸನ, ಭೂಮಿ ಸವಳು-ಜವಳು ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಸ್ಪಂದಿಸುವ ಮೂಲಕ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಬಗೆಹರಿಸುವ ಕೆಲಸ ಮಾಡಿದರು.

ತಾಲೂಕಿನ ಬೇವೂರ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ತಂದ ಸಮಸ್ಯೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಈಗಾಗಲೇ ಸವಳು-ಜವಳು ಭೂಮಿಯ ಬಗ್ಗೆ ನಿಗಾ ವಹಿಸಲಾಗಿದೆ. ಗ್ರಾಮದಲ್ಲಿರುವ 23.13 ಎಕರೆ ವಿಸ್ತರಣೆ ಹೊಂದಿದ ಕೆರೆಯ ದಾಖಲೆ ಇದ್ದು, ಈಗಾಗಲೇ 15 ಎಕರೆ ಒತ್ತುವರಿಯಾಗಿದೆ. ಅದರಲ್ಲಿ 166 ಮನೆಗಳು, ಬಣವಿ ಸೇರಿಕೊಂಡಿದೆ. ಬಣವಿಗಳನ್ನು ತಕ್ಷಣ ತೆರವುಗೊಳಿಸಲಾಗುತ್ತಿದೆ. ಆದರೆ ಮನೆಗಳಿಗೆ ತೆರವುಗೊಳಿಸಲು ಕಾಲಾವಕಾಶ ನೀಡಲಾಗುತ್ತಿದೆ ಎಂದರು.

ಮನೆ ಕಟ್ಟಿಕೊಳ್ಳಲು ಸರಕಾರದ ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಜಮೀನನ್ನು ನೀಡಲು ಕ್ರಮವಹಿಸುವ ಮೂಲಕ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುತ್ತಿದೆ. ಬೇವೂರ ಗ್ರಾಮದ ಸಮೀಪದ ಕಲಗುಡಿ ಗ್ರಾಮದಲ್ಲಿ ಪುರಾತನ ದೇವಾಲಯಗಳಿದ್ದು, ಅಲ್ಲಿ ವಾಸಿಸುವ ಗ್ರಾಮಸ್ಥರು ಹಾಗೂ ಭಾರತೀಯ ಪುರಾತತ್ವ ಇಲಾಖೆಯ ನಡುವೆ ಉಂಟಾದ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ನಿವಾಸಿಗಳಿಗೆ ಮೂಲ ಸೌಕರ್ಯ ಒದಗಿಸಿಕೊಡುವ ಬರವಸೆ ನೀಡಿದರು.
ಸಂಗಾಪೂರ ಗ್ರಾಮದ ರೈತನ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತಿಮ್ಮಾಪೂರ ಏತ ನೀರಾವರಿಯ ಕಾಲುವೆಯಿಂದ ನೀರು ಸೋರಿಕೆಯಾಗಿ ಜಮೀನು ಸವಳು-ಜವಳು ಉಂಟಾಗಿದೆ. ಇಲ್ಲಿಯವರೆಗೆ ಸವಳು-ಜವಳುಗೊಂಡ ಜಮೀನಿಗೆ, ಹೊಲದಲ್ಲಿ ಹಾಯ್ದು ಹೋದ ಕಾಲುವೆ ನಿರ್ಮಾಣದಿಂದ ಯಾವುದೇ ರೀತಿಯ ಪರಿಹಾರ ಧನ ದೊರೆತಿರುವದಿಲ್ಲವೆಂದಾಗ ಈ ಸಮಸ್ಯೆ ಕುರಿತು ಕೃಷ್ಣಾ ಭಾಗ್ಯ ಜಲ ನಿಗಮ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕೊಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

ಇದಲ್ಲದೇ ಅನಾಧಿಕಾಲದಿಂದ ಬಳಸಿಕೊಂಡು ಬಳಸಿಕೊಂಡು ಬರುತ್ತಿದ್ದ ಹೊಲಗಳಿಗೆ ಹೋಗುವ ದಾರಿಯಿಂದ ಸಮಸ್ಯೆ ಉಂಟಾಗುತ್ತಿದೆ. ಅಂತವುಗಳಿಗೆ ಗ್ರಾಮಸ್ಥರೆ ಕೂಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ಗ್ರಾಮ ನಕಾಶೆಯಲ್ಲಿ ದಾರಿ ಇದ್ದರೆ ಮಾತ್ರ ಕ್ರಮಕೈಗೊಳ್ಳಲಾಗುವುದು. ಗ್ರಾಮ ಪಂಚಾಯತ ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳೀಯವಾಗಿ ಇರದೇ ಕಾರಣ ಗ್ರಾಮದ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದಾಗ ಸ್ಥಳೀಯವಾಗಿ ಕಚೇರಿಯಲ್ಲಿ ಇರುವಂತೆ ನಿರ್ದೇಶನ ನೀಡಲಾಯಿತು.

ಗ್ರಾಮದ ಅನೇಕ ಮಹಿಳೆಯರು ಗ್ರಾಮದಲ್ಲಿರುವ ಸರಾಯಿ ಅಂಗಡಿ ತೆರವು ಗೊಳಿಸಬೇಕು. ಒಂದು ವೇಳೆ ಸರಕಾರ ಸರಾಯಿ ಅಂಗಡಿಗಳಿಗೆ ಅನುಮತಿ ಕೊಡುವುದಾದರೆ ಗ್ರಾಮದ ನಿವಾಸಿಗಳಿಗೆ ಕೊಡಬೇಕು. ಬೇರೆಯವರಿಗೆ ಕೊಡಬಾರದು ಎಂದು ಮಹಿಳೆಯರು ಆಗ್ರಹಿಸಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಈ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದರು. ಕೃಷಿ ಇಲಾಖೆಯ ಅಧಿಕಾರಿಗಳು ಕೇವಲ ಜಾಹೀರಾತು ಮೂಲಕ ಮನವರಿಕೆ ಮಾಡುವ ಬದಲು ಪ್ರತಿ ರೈತರ ಜಮೀನುಗಳಿಗೆ ತೆರಳಿ ಅಲ್ಲಿರುವ ಬೆಳೆಗಳಿಗೆ ಸೂಕ್ತ ಸಲಹೆ ನೀಡುವ ಕಾರ್ಯವಾಗಬೇಕೆಂದು ರೈತರು ಒತ್ತಾಯಿಸಿದರು. ಶಾಲಾ ಮಕ್ಕಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆಗೆ ಬಗ್ಗೆ ಅಹವಾಲುಗಳಿದ್ದು, ಸ್ಪಂದಿಸುವ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಂವಾದ ನಡೆಸಿದರು. ಉನ್ನತ ಹುದ್ದೆ ಪಡೆಯಲು ತಾವುಗಳು ಪಟ್ಟ ಪರಿಶ್ರಮದ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆಗಳು ಸೇರಿದಂತೆ ಕಲಿಕೆಗೆ ಸಂಬಂಧಿಸಿದ ಇತರೆ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಓ, ಪ್ರೋಬೇಷನರಿ ಐ.ಎ.ಸ್ ಅಧಿಕಾರಿಗಳು ಉತ್ತರ ನೀಡಿದರು. ಪ್ರಾರಂಭದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬೇವೂರ ಗ್ರಾ.ಪಂ ಅಧ್ಯಕ್ಷ ತುಕಾರಾಮ ಮಾಗಿ, ತಹಶೀಲ್ದಾರ ವಿನಯ ಕುಲಕರ್ಣಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ, ಡಿಡಿಎಲ್‍ಆರ್ ರವಿಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ತಾ.ಪಂ ಇಓ ಶಿವಾನಂದ ಕಲ್ಲಾಪೂರ, ತೋಟಗಾರಿಕೆ ಉಪನಿರ್ದೇಶಕ ರಾಹುಕುಮಾರ ಬಾವಿದಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಮರಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ.ಬಡಿಗೇರಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

ಸರಕಾರಿ ಸೌಲಭ್ಯ ಇಂದು ಮನೆ ಮನೆಗೆ : ಚರಂತಿಮಠ

ಅಂಗವಿಕಲರಿಗೆ ತ್ರಿಚಕ್ರ ವಾಹನ, ಊರುಗೋಲು, ರೈತರಿಗಾಗಿ ಬೀಜ ಗೊಬ್ಬರ ಮತ್ತು ಈಗಾಗಲೇ ಉಸ್ತುವಾರಿ ಸಚಿವರು ತಿಳಿಸಿದಂತೆ 7 ಗಂಟೆಯ ತ್ರಿಪೇಸ್ ವಿದ್ಯುತ್ ಹಾಗೂ ನಿರಂತರ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸದಿರು.

ಬೇವೂರ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ವಿವಿಧ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದ ಅವರು ಈಗಾಗಲೇ ರೈತರಿಗಾಗಿ, ನೇಕಾರರಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಸರಕಾರದ ಯೋಜನೆಗಳ ನಿಮ್ಮ ಮನೆಯ ಬಾಗಿಲಿಗೆ ತಲುಪಿಸುವ ಕಾರ್ಯ ನಡೆದಿದೆ. ಹಿಂದೆ ಬೀಜ, ವಿದ್ಯುತ್‍ಗಾಗಿ ಹೋರಾಟ ನಡೆದಿರುವುದು ನೋಡಿದ್ದೀರಿ, ಇಂದು ಅಂತಹ ಸಮಸ್ಯೆಗಳಿಲ್ಲ. ಈಗಾಗಲೇ ಸರಕಾರದಿಂದ ಗ್ಯಾಸ್, ನೀರಾವರಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಕಾರ ನೀಡಿದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ವಿವಿಧ ಸೌಲಭ್ಯಗಳ ವಿತರಣೆ
————————
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮದ ಜನರಿಗೆ ಕಂದಾಯ ಇಲಾಖೆಯಿಂದ ಒಟ್ಟು 68 ವಿವಿಧ ಪಿಂಚಣಿಗಳ ಆದೇಶ ಪತ್ರ, 8 ಜನರೈತರಿಗೆ ಕೃಷಿ ಉಪಕರಣ, ಪಹಣಿ ತಿದ್ದುಪಡಿ, ಹೆಸ್ಕಾಂದಿಂದ ಬೆಳಕು ಯೋಜನೆಯಡಿ 10 ಜನರಿಗೆ ಸೇವಾ ಪ್ರಮಾಣ ಪತ್ರ, ರೇಷ್ಮೇ ಇಲಾಖೆಯಿಂದ 4 ಜನ ರೈತರಿಗೆ ಸಲಕರಣೆ ಹಾಗೂ 11 ಕುಟುಂಬಗಳಿಗೆ ಬಿಪಿಎಲ್ ಕಾರ್ಡಗಳನ್ನು ಶಾಸಕ ವೀರಣ್ಣ ಚರಂತಿಮಠ ಅವರು ವಿತರಿಸಿದರು.

Nimma Suddi
";