ಬಾಗಲಕೋಟೆ
ಜಿಲ್ಲೆಯ ಇಳಕಲ್ ತಾಲೂಕಿನ ಕೆಲೂರ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನವನ್ನು ಪ್ರವಾಸಿ ತಾಣವಾಗಿಸಿ ಮೂಲ ಸೌಲಭ್ಯ ಒದಗಿಸಬೇಕು ಎಂದು ಪ್ರವಾಸೋದ್ಯಮ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಐಹೊಳೆಗೆ ಆಗಮಿಸಿದ್ದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲರಿಗೆ ಮನವಿ ಸಲ್ಲಿಸಿ ಮಾತನಾಡಿದ ಕೆಲೂರ ಗ್ರಾಪಂ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ, ಗ್ರಾಮದಲ್ಲಿ ದಕ್ಷಿಣ ಕಾಶಿ ಎನಿಸಿಕೊಂಡಿರುವ ೧೫ನೇ ಶತಮಾನದ ದೇವಾಲಯವಿದ್ದು ಈ ದೇವಾಲಯ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದೆ. ಶ್ರೀರಾಮ ಅಯೋಧ್ಯೆಯಿಂದ ಐಹೊಳೆ ಮಾರ್ಗವಾಗಿ ಕೆಲೂರ ಗ್ರಾಮಕ್ಕೆ ಬಂದು ಸಜ್ಯೋಜಾತದೇವ, ಅಘೋರದೇವ, ವಾಮದೇವ, ತತ್ವಪುರುಷದೇವ, ಈಶಾನ್ಯದೇವ ಎಂಬ ಪಂಚಲಿAಗ ಸ್ಥಾಪಿಸಿದ ಇತಿಹಾಸ ಈ ದೇವಾಲಯಕ್ಕಿದೆ ಎಂದರು.
ಜಿಲ್ಲೆಯ ಸ್ಮಾರಕಗಳ ವೀಕ್ಷಣೆಗೆ ಬರುವ ವಿದೇಶಿಗರು ಕೆಲೂರ ಗ್ರಾಮದ ರಾಮಲಿಂಗೇಶ್ವರ ದೇವಾಲಯಕ್ಕೂ ಆಗಮಿಸುವಂತೆ ಈ ಕ್ಷೇತ್ರವನ್ನು ಪ್ರವಾಸಿತಾಣವನ್ನಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ವಜೀರಪ್ಪ ಪೂಜಾರ ಇತರರು ಇದ್ದರು.