ಹೊಸದಿಲ್ಲಿ: ದೇಶದ ಜನ ಬರೆದ ಭವಿಷ್ಯ ಕೊನೆಗೂ ಹೊರಬಿದ್ದಿದ್ದು, ಎನ್ ಡಿಎ ಗೆ 297, ಐಎನ್ ಡಿಐಗೆ 228, ಪಕ್ಷೇತರ 18 ಜನರನ್ನು ಲೋಕಸಭೆಗೆ ಕಳುಸುವಲ್ಲಿ ಮತದಾರ ಯಶಸ್ವಿಯಾಗಿದ್ದಾನೆ.
ಕಳೆದ ಎರಡು ಲೋಕಸಭಾ ಚುನಾವಣಾ ಯಲ್ಲಿ ಅತೀ ಹೆಚ್ಚು ಸ್ಥಾನ ಪಡೆದು ಅಧಿಕಾರದ ಗದ್ದುಗೆ ಹಿಡಿದಿದ್ದ ಬಿಜೆಪಿ ಈ ಸಲ ಮತದಾರ ನಿರೀಕ್ಷೆಯಷ್ಟು ಸ್ಥಾನ ನೀಡಿಲ್ಲ. ಹೀಗಾಗಿ ಬಿಜೆಪಿಗೆ ತನ್ನ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಅಧಿಕಾರಕ್ಕೆರುವುದು ಅನಿವಾರ್ಯವಾಗಿದೆ.
ಈಗಾಗಲೇ ಮಿತ್ರಪಕ್ಷದಲ್ಲಿರುವ ಟಿಡಿಪಿ ತನ್ನ ಬೆಂಬಲ ಏನಿದ್ದರೂ ಬಿಜೆಪಿಗೆ ಎಂದು ಹೇಳಿದೆ. ಆದ್ರೆ ಜೆಡಿಯುನ ನಿತೀಶ ಕುಮಾರ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ. ಇದರ ನಡುವೆಯೇ ಮಹಾರಾಷ್ಟ್ರದ ಶರದ ಪವಾರ ನಿತೀಶ ಕುಮಾರ ಹಾಗೂ ಚಂದ್ರಬಾಬು ನಾಯ್ಡು ಅವ್ರನ್ನ ಸಂಪರ್ಕಿಸಿ ಐಎನ್ ಡಿಐಎಗೆ ಬೆಂಬಲಿಸುವಂತೆ ದೂರವಾಣಿ ಕರೆ ಮಾಡಿದ್ದಾರೆ.
ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವ್ರು ಚಂದ್ರಬಾಬು ನಾಯ್ಡು ಅವ್ರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಅದಾದ ನಂತರ ಚಂದ್ರಬಾಬು ನಾಯ್ಡು ತಮ್ಮ ಬೆಂಬಲ ಏನಿದ್ದರೂ ಎನ್ ಡಿಎಗೆ ಎಂದು ಹೇಳಿದ್ದಾರೆ. ಇದರ ಜತೆಗೆ ಎನ್ ಡಿಎ ಮೈತ್ರಿಕೂಟದ ಪಕ್ಷಗಳಮುಖಂಡರಿಗೆ ಹೊಸದಿಲ್ಲಿಗೆ ಬರುವಂತೆ ಅಮಿತ್ ಶಾ ಬುಲಾವ್ ನೀಡಿದ್ದಾರೆ.