ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ತಿದ್ದಂತೆ, ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ವಶದಲ್ಲಿರುವ ಬಿಜೆಪಿ ಮುಂಖಡ, ವಕೀಲ ದೇವರಾಜೇಗೌಡ ನಿನ್ನೆ ಇದೆರೆಲ್ಲದರ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡ ಇದೆ ಎಂದು ಗಂಭೀರ ಆರೋಪಿಸಿದರು.
ಇದೀಗ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವರಾಜೇಗೌಡ ಏನು ಬೇಕಾದರೂ ಮಾತನಾಡಿಕೊಳ್ಳಲಿ. ತಲೆಕೆಟ್ಟವನು, ಆಸ್ಪತ್ರೆಗೆ ಸೇರಿಸಬೇಕು. ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಆರೋಪ ಮಾಡಬೇಕು ಮಾಡುತ್ತಾರೆ. ಏನೇನೊ ಆಗುತ್ತೆ ನೀವು ದೊಡ್ಡದಾಗಿ ಮಾಡುತ್ತಿದ್ದೀರಿ. ಮಾಧ್ಯಮಗಳಿಗೆ ನಿಮ್ಮದೇ ಆದ ಇಮೇಜ್ ಇದೆ. ಮುಖಪುಟದಲ್ಲಿ ನ್ಯೂಸ್ ಕೂಡ ಆಗಿದೆ. ಅವರ ಬಗ್ಗೆ ಅಲ್ಲ, ನಿಮ್ಮ ಬಗ್ಗೆ ಬೇಜಾರ್ ಆಗುತ್ತಿದೆ ಎಂದು ತಿಳಿಸಿದರು.
ನಾನು ದೇವರಾಜೇಗೌಡ ಜತೆ ಯಾವುದೇ ಮಾತುಕತೆ ನಡೆಸಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ತಲೆಕೆಡಿಸಿಕೊಳ್ಳುವುದಿಲ್ಲ. ಪಕ್ಷ ಎಂದ ಮೇಲೆ ಸಾವಿರಾರು ಜನ ಭೇಟಿಯಾಗಿ ಹೋಗುತ್ತಾರೆ. ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ ಯಾರಿಗೆ ಗೊತ್ತು ಎಂದರು.