ನಿಮ್ಮ ಸುದ್ದಿ ಬಾಗಲಕೋಟೆ
ಜೀವನದಲ್ಲಿ ಗುರಿ ಮುಟ್ಟಲು ಧನಾತ್ಮಕ ಚಿಂತನೆಯೊಂದಿಗೆ ಮುನ್ನುಗ್ಗಿ, ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ ಎಂದು ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಆರ್.ಜಿ.ಸನ್ನಿ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಸಂಗಮೇಶ್ವರ ಸಂಯುಕ್ತ ಪಪೂ ಕಾಲೇಜ್‌ನಲ್ಲಿ ವಿಪ್ರೋ-ಸಂತೂರ ವತಿಯಿಂದ ಹಮ್ಮಿಕೊಂಡ ರಂಗೋಲಿ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉದಾತ್ತ ಚಿಂತನೆಯೊAದಿಗೆ ಮುನ್ನಡೆಯಬೇಕು ಎಂದರು.
ಕೊರೊನಾ ಮಹಾಮಾರಿಯಿಂದಾಗಿ ಶಾಲೆಗಳು ಬಂದ್ ಆಗಿ ಎಲ್ಲರೂ ತೊಂದರೆ ಅನುಭವಿಸಿದ್ದೇವೆ. ಎಲ್ಲರಲ್ಲೂ ಶಾಲೆಗಳು ಯಾವಾಗ ಆರಂಭವಾಗುತ್ತವೆ ಎಂಬ ತುಡಿತವಿತ್ತು. ಅದೀಗ ಶಾಲೆ ಆರಂಭವಾಗಿ ಎಲ್ಲರಲ್ಲೂ ಹುಮ್ಮಸ್ಸು ಮೂಡಿದೆ. ಮಕ್ಕಳನ್ನು ಅಡಗಿರುವ ಕಲೆಯನ್ನು ಹೊರತರುವುದು ಶಿಕ್ಷಣದ ಅವಿಭಾಜ್ಯ ಅಂಗ. ಅದನ್ನು ವಿಪ್ರೋ ಕಂಪನಿ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವಿಪ್ರೋ ಪ್ರತಿನಿಧಿ ಅನಿಲ ರಾಠೋಡ, ಪ್ರಕಾಶ ಕಾಳಗಿ, ಶಿಕ್ಷಕರಾದ ವೈ.ಎಚ್.ಪೂಜಾರ, ಡಿ.ಎಲ್.ಕೆಂಗಲ್, ಎಸ್.ಪಿ.ಆಲಮೇಲ, ಎ.ಬಿ.ಪಾಟೀಲ, ಎಸ್.ಎಚ್.ಬೀರಕಬ್ಬಿ, ಸಿ.ಎಂ.ಸಜ್ಜನ, ಶ್ರೀಕಾಂತ ಹೊಸಮನಿ, ಹನಮಂತ ಹೆಬ್ಬಾಳ, ಬಿ.ವಿ.ಗಚ್ಚಿನಮಠ ಇತರರು ಇದ್ದರು.
ರಂಗೋಲಿ ಸ್ಪರ್ಧೆಯಲ್ಲಿ ಎಸ್.ಆರ್.ರಜಪೂತ (ಪ್ರಥಮ), ಜೆ.ಎಸ್.ಐಹೊಳ್ಳಿ (ದ್ವಿತೀಯ) ಹಾಗೂ ಎಸ್.ಬಿ.ಅಗಸಿಮುಂದಿನ (ತೃತೀಯ) ಸ್ಥಾನ ಪಡೆದರು. ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.