ಧಾರವಾಡ: ಧಾರವಾಡದ ಪ್ರತಿಷ್ಠಿತ ಐಐಟಿ ಇರೋದು ಕೂಡ ಆ ರೈತರ ಜಮೀನಿನಲ್ಲೇ, ಆ ರೈತರಿಗೆ ಇದ್ದಿದ್ದು ಅಳಿದುಳಿದ ಒಂದಷ್ಟು ಜಮೀನು ಮಾತ್ರ. ಈಗ ಅದರ ಮೇಲೆಯೂ ಕಣ್ಣು ಹಾಕಿರೋ ಸರ್ಕಾರ, ಕೈಗಾರಿಕಾ ಅಭಿವೃದ್ಧಿ ನೆಪದಲ್ಲಿ ಭೂಸ್ವಾಧೀನಕ್ಕೆ ಮುಂದಾಗಿದ್ದು, ಭೂಮಿ ಬಿಟ್ಟು ಕೊಡಲು ಒಪ್ಪದ ರೈತರು ಸರ್ಕಾರದ ವಿರುದ್ಧ ಸಮರವನ್ನೇ ಸಾರಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಯಾಕಂದ್ರೆ ಐಐಟಿಗಾಗಿ 470 ಎಕರೆ 21 ಗುಂಟೆ ಜಮೀನನ್ನು 2010-11ರಲ್ಲಿ ಎಕರೆಗೆ 26 ಲಕ್ಷ ರೂಪಾಯಿಯಂತೆ ಪಡೆದಿದ್ದು, ಮತ್ತೇ 537 ಎಕರೆ 28 ಗುಂಟೆ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು, ವಿಚಿತ್ರ ಅಂದರೆ ಈ ಹಿಂದೆಯೇ 2009ರಲ್ಲಿ ಒಂದು ಅಧಿಸೂಚನೆ ಹೊರಡಿಸಿದ್ದು, 13 ವರ್ಷಕ್ಕೆ ಎಕರೆಗೆ 30 ಲಕ್ಷದಂತೆ ಪಡೆಯಲು ಮುಂದಾದಾಗ ವಿರೋಧ ವ್ಯಕ್ತವಾಗಿತ್ತು. ವಿರೊಧ ಬಂದಾಗ, 35 ಲಕ್ಷಕ್ಕೆ ಏರಿಸಿದ್ದು, ಒಪ್ಪದ ಸುಮಾರು 320 ಎಕರೆಗೆಯ ಜಮೀನಿನ ಮಾಲೀಕರು ಹೈಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಉಳಿದವರು ಕಡಿಮೆ ಬೆಲೆಗೆ ಭೂಮಿ ಕೊಡೋದಿಲ್ಲ ಅಂತಾ ಪಟ್ಟು ಹಿಡಿದಿದರು.
ಸದ್ಯ ರೈತರು ಎಕರೆಗೆ 35 ಲಕ್ಷದಂತೆ ಭೂಮಿ ಕೊಡಲು ಒಪ್ಪದೇ ಇರೋದಕ್ಕೆ ಸರ್ಕಾರದ ತಾರತಮ್ಯ ನೀತಿಯೇ ಕಾರಣವಾಗಿದ್ದು, ಏಕೆಂದರೆ ಇತ್ತೀಚೆಗೆ ಭೂಸ್ವಾಧೀನ ಮಾಡಿಕೊಳ್ಳುತ್ತಿರೋ ಹೊಸವಾಳ, ರಾಮಾಪುರ, ಕಲ್ಲಾಪುರ ಗ್ರಾಮದ ಜಮೀನುಗಳಿಗೆ 45 ಲಕ್ಷ ರೂ. ನಿಗದಿ ಮಾಡಿದ್ದು, ಐಐಟಿ ಸಮೀಪವೇ ಇರೋ ಜಮೀನಿಗೆ ಮಾತ್ರ ಕಡಿಮೆ ಬೆಲೆ ಯಾಕೆ ಅನ್ನೋದು ರೈತರ ಪ್ರಶ್ನೆ.ಹೈಕೋರ್ಟ್ ತಡೆ ಹೊರತಾಗಿ ಇರೋ ಜಮೀನನ್ನು ಬಿಟ್ಟು ಕೊಡೋದಿಲ್ಲ. ಯಾವುದೇ ಒತ್ತಡ ಮಾಡುವಂತಿಲ್ಲ ಅಂತಾ ಜಿಲ್ಲಾಧಿಕಾರಿಗೂ ಮನವಿ ಸಲ್ಲಿರೋ ರೈತರು ಉಗ್ರ ಹೋರಾಟ ಮಾಡೋದಕ್ಕೂ ಮುಂದಾಗಿದ್ದು, ಪರಿಶೀಲಿಸಿ ನೋಡೋದಾಗಿ ಡಿಸಿ ಹೇಳಿದರು.
ಧಾರವಾಡದ ಪ್ರತಿಷ್ಠಿತ ಐಐಟಿ ಕಂಪೌಂಡ್ಗೆ ಹೊಂದಿಕೊಂಡಿರುವ ಜಾಗ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ರೈತರ ಜಮೀನು. ಧಾರವಾಡ ನಗರಕ್ಕೆ ಹೊಂದಿಕೊಂಡೇ ಇರೋ ಈ ಗ್ರಾಮಸ್ಥರು ಕೃಷಿಯನ್ನೇ ನಂಬಿ ಜೀವನ ಸಾಗಿಸುದ್ದು, ಕೈಗಾರಿಕೆಗಳು ಮತ್ತು ಐಐಟಿ ತಮ್ಮ ಜಮೀನುಗಳನ್ನು ಕೊಟ್ಟಿದ್ದಾರೆ. ಈಗ ಅಳಿದುಳಿದ ಜಮೀನನ್ನು ಸಹ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಭೂ ಬ್ಯಾಂಕ್ ಮಾಡಲು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳೋಕೆ ಮುಂದಾಗಿದ್ದು, ಇದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.