This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Agriculture NewsLocal NewsState News

ಫಲಾನುಭವಿಗಳಿಗೆ ಹಣ ವಿತರಿಸಿ

ಫಲಾನುಭವಿಗಳಿಗೆ ಹಣ ವಿತರಿಸಿ

ವಿಜಯಪುರ

ಯುಕೆಪಿ 3ನೇ ಹಂತದಲ್ಲಿ ಮುಳುಗಡೆಯಾಗುವ ಗ್ರಾಮಸ್ಥರಿಗೆ ಮಂಜೂರಾಗಿ ಸರಕಾರದಿಂದ ಬಿಡುಗಡೆಯಾಗಿರುವ ಹಣವನ್ನು ಫಲಾನುಭವಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಜಯಪುರದಲ್ಲಿರುವ ಗೃಹ ಕಚೇರಿಯಲ್ಲಿ ಇಂದು ಶನಿವಾರ ಬೆಳಿಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು, ನಾನಾ ಸಮಸ್ಯೆಗಳನ್ನು ಗಮನಕ್ಕೆ ತಂದ ರೈತರು ಮತ್ತು ಸಾರ್ವಜನಿಕರಿಗೆ ಕೂಡಲೇ ಸ್ಪಂದಿಸಿದರು.

ಬಬಲೇಶ್ವರ ತಾಲೂಕಿನ ಶಿರಬೂರ ಗ್ರಾಮದಿಂದ ಆಗಮಿಸಿದ್ದ ರೈತರು ಯುಕೆಪಿ 3ನೇ ಹಂತದಲ್ಲಿ ಆಲಮಟ್ಟಿ ಜಲಾಷಯವನ್ನು 524.256 ಮೀ. ಹೆಚ್ಚಳದಿಂದ ಶಿರಬೂರ ಗ್ರಾಮದ 170 ಹಾಗೂ ಪಕ್ಕದ ಬಾಗಲಕೋಟೆ ಜಿಲ್ಲೆಯ ಚಿಕ್ಕಗಲಗಲಿ ಗ್ರಾಮದ 240 ಮನೆಗಳು ಮುಳುಗಡೆಯಾಗುತ್ತವೆ. ಈ ಮುಳುಗಪಡೆ ಪ್ರದೇಶದ ಸಮೀಕ್ಷೆ ಕಾರ್ಯ ಪೂರ್ಣವಾಗಿದ್ದು, ಐ-ತೀರ್ಪು ಕೂಡ ಮಂಜೂರಾಗಿದೆ. ಅಲ್ಲದೇ, ಪುನರ್ವಸತಿ ಮತ್ತು ಪುನರ್ನಿರ್ಮಾಣಕ್ಕಾಗಿ ರೂ. 568 ಕೋ. ಹಣ ಮಂಜೂರಾಗಿದೆ. ಈಗಾಗಲೇ ರೂ. 174 ಕೋ. ಬಿಡುಗಡೆಯಾಗಿದೆ. ಆದರೆ, ಈ ಹಣ ಇನ್ನೂ ಫಲಾನುಭವಿಗಳಿಗೆ ವಿತರಣೆಯಾಗಿಲ್ಲ. ಪರಿಹಾರ ನೀಡಿದರೆ ನಾವು ಸ್ಥಳಾಂತರವಾಗುತ್ತೇವೆ ಎಂದು ಶಿರಬೂರ ಗ್ರಾಮಸ್ಥರು ಸಚಿವರಿಗೆ ಅಳಲು ತೋಡಿಕೊಂಡರು. ಕೂಡಲೇ, ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಸಚಿವರು, ಈ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಿರಬೂರ ಗ್ರಾಮಸ್ಥರಾದ ಅರವಿಂದ ಗುರಡ್ಡಿ, ಚಿಕ್ಕಯ್ಯ ಹಿರೇಮಠ, ಬಿ. ಸಿ. ಪಾಟೀಲ, ಸದಾಶಿವ ಕುಂಬಾರ, ಗಿರೀಶ ಪಾಟೀಲ, ಮಲ್ಲಪ್ಪ ಚಿಕ್ಕನಳ್ಳಿ, ಮಹಾದೇವ ನಿಂಗನೂರ ಮಂತಾದವರು ಉಪಸ್ಥಿತರಿದ್ದರು.

*ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಲು ಸೂಚನೆ*

ಅನುದಾನಿತ ಶಾಲೆಗಳ ಶಿಕ್ಷಕರು ಕಳೆದ ಮೂರು ತಿಂಗಳಿಂದ ತಮಗೆ ವೇತನ ಬಿಡುಗಡೆಯಾಗಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವ ಎಂ. ಬಿ. ಪಾಟೀಲ ಅವರಿಗೆ ಮನವಿ ಮಾಡಿದರು. ಕೂಡಲೇ ಡಿಡಿಪಿಐ ಮತ್ತು ವಿಜಯಪುರ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿದ ಸಚಿವರು, ಶಿಕ್ಷಕರ ವೇತನ ಬಿಡುಗಡೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಇದೇ ವೇಳೆ, ನೇಗಿನಾಳ, ಶಿವಣಗಿ, ಹಡಗಲಿ, ಕಗ್ಗೋಡ, ಕವಲಗಿ, ಅರಕೇರಿ ಸೇರಿದಂತೆ ಜಿಲ್ಲೆಯ ನಾನಾ ಗ್ರಾಮಗಳಿಂದ ಆಗಮಿಸಿದ್ದ ರೈತ ಮುಖಂಡರಾದ ಬಾಪುಗೌಡ ಪಾಟೀಲ ವಡವಡಗಿ, ಎಸ್. ಎಂ. ಧುಂಡಸಿ, ಮಲಕನಗೌಡ ಬಿರಾದಾರ, ಸಂತೋಷ ಹತ್ತರಕಿ ಮುಂತಾದವರು ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ಎಂ. ಬಿ. ಪಾಟೀಲ ಅವರು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪರಿಹಾರ ಒದಗಿಸುವ ಮೂಲಕ ಸ್ಪಂದಿಸಿದರು.

ಸಚಿವ ಎಂ. ಬಿ. ಪಾಟೀಲರಿಂದ ಅಹವಾಲು ಸ್ವೀಕಾರ:* ವಿಜಯಪುರದಲ್ಲಿ ತಮ್ಮ ಗೃಹ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರಿಂದ ಸಚಿವ ಎಂ. ಬಿ. ಪಾಟೀಲ ಅವರು ಅಹವಾಲು ಸ್ವೀಕರಿಸಿದರು. ಶಿವಣಗಿ, ಕವಲಗಿ, ಹಡಗಲಿ ಮತ್ತೀತರ ಗ್ರಾಮಗಳಿಂದ ಬಂದಿದ್ದ ಗ್ರಾಮಸ್ಥರು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್. ಎಂ. ಧುಂಡಸಿ, ಬಾಪುಗೌಡ ಪಾಟೀಲ ವಡವಡಗಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

ಸಚಿವ ಎಂ. ಬಿ. ಪಾಟೀಲರಿಂದ ಅಹವಾಲು ಸ್ವೀಕಾರ:* ವಿಜಯಪುರದಲ್ಲಿ ತಮ್ಮ ಗೃಹ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರಿಂದ ಸಚಿವ ಎಂ. ಬಿ. ಪಾಟೀಲ ಅವರು ಅಹವಾಲು ಸ್ವೀಕರಿಸಿದರು.

Nimma Suddi
";