This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal News

ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪಟ್ಟಿ ರಿಲೀಸ್

ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪಟ್ಟಿ ರಿಲೀಸ್

21 ಮಂದಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ವಿಜಯಪುರ : ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯಿಂದ 21ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು ಸೆ.5ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಸಾಧಕ ಶಿಕ್ಷಕರಿಗೆ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ, ಹಿರಿಯ ಪ್ರಾಥಮಿಕ ಶಾಲಾ ವಿಭಾಗ ಹಾಗೂ ಪ್ರೌಢಶಾಲೆ ವಿಭಾಗದಿಂದ 7 ಜನ ಸೇರಿದಂತೆ 21 ಮಂದಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಕಿರಿಯ ಪ್ರಾಥಮಿಕ ಶಾಲೆ ವಿಭಾಗ :

ನಿಂಗಯ್ಯ ಅ.ಹಿರೇಮಠ (ಎಲ್‌ಪಿಎಸ್ ಬೆಕಿನಾಳ, ಸಿಂದಗಿ), ಮಲ್ಲಪ್ಪ ಸಿ.ವಾಘಮೋರೆ (ಎಲ್‌ಪಿಎಸ್ ಗದ್ಯಾಳ ವಸ್ತಿ ಜಿಗಜೀವಣಿ, ಚಡಚಣ), ಅಹ್ಮದ್ ಎ.ವಾಲಿಕಾರ (ಯುಬಿಎಲ್‌ಪಿಎಸ್ ಬಂಥನಾಳ, ಇಂಡಿ), ಶಿವಪುತ್ರಪ್ಪ ಎಂ.ಸಜ್ಜನ (ಎಲ್‌ಪಿಎಸ್ ಹಳ್ಳೂರ, ಮುದ್ದೇಬಿಹಾಳ), ಬಸಪ್ಪ ಭ.ಬಾಗೇವಾಡಿ (ಎಲ್‌ಪಿಎಸ್ ಉತ್ನಾಳ, ಬಾಗೇವಾಡಿ), ದೀಪಾ ಈ.ಪಲ್ಲೇದ (ಎಲ್‌ಪಿಎಸ್ ಶಿವಾಜಿ ನಗರ ಅರಕೇರಿ ಎಲ್‌ಟಿ-1, ವಿಜಯಪುರ ಗ್ರಾಮೀಣ), ಶ್ರೀಮತಿ ವಿ.ಎಸ್.ಅಪ್ಪುಗೋಳ (ಎಲ್‌ಪಿಎಸ್ ನಂ.32, ವಿಜಯಪುರ ನಗರ).

ಹಿರಿಯ ಪ್ರಾಥಮಿಕ ಶಾಲೆ :

ಡಿ.ಎಂ.ಮಾಹೂರ (ಎಂಪಿಎಸ್ ಗಣಿಹಾರ, ಸಿಂದಗಿ), ವಿಜಯಕುಮಾರ ಎನ್.ಸಾತಪುತೆ (ಎಚ್‌ಪಿಎಸ್ ಶಿರಾಡೋಣ, ಚಡಚಣ), ಶಾರದಾಬಾಯಿ ಎಸ್.ಹಿರೇಮಠ (ಎಚ್‌ಪಿಎಸ್ ಬೋಳೆಗಾಂವ, ಇಂಡಿ), ವೌಲಾಸಾಬ ಎಂ.ಹಳಕೇರಿ (ಎಂಪಿಎಸ್ ಹಡಲಗೇರಿ, ಮುದ್ದೇಬಿಹಾಳ), ರೇವಣಸಿದ್ದಪ್ಪ ಹ.ಬುದ್ನಿ (ಕೆಬಿಎಂಪಿಎಸ್ ಗೊಳಸಂಗಿ, ಬಾಗೇವಾಡಿ), ಪ್ರಭುಗೌಡ ಶ.ಪಾಟೀಲ (ಎಂಪಿಎಸ್ ಬರಟಗಿ, ವಿಜಯಪುರ ಗ್ರಾಮೀಣ), ಶ್ರೀಮತಿ ಶಮಶಾದ (ಯುಬಿಎಸ್ ನಂ.4, ವಿಜಯಪುರ ನಗರ).

ಪ್ರೌಢಶಾಲೆ ವಿಭಾಗ :

ಆರ್.ವಿ.ಹೊಸಮನಿ (ಸರಕಾರಿ ಪ್ರೌಢಶಾಲೆ ಆಲಮೇಲ, ಸಿಂದಗಿ), ಶರಣಗೌಡ ಎಂ.ಕರ್ನಾಳ (ಸರಕಾರಿ ಪ್ರೌಢಶಾಲೆ ಮಲಘಾಣ, ಬಾಗೇವಾಡಿ), ಮಧುಮತಿ ಸಿ.ಪಾಟೀಲ (ಸರಕಾರಿ ಪ್ರೌಢಶಾಲೆ ಉಮರಾಜ, ಚಡಚಣ), ಮಹಾಂತಪ್ಪ ಚ.ಅಂಗಡಿ (ಸರಕಾರಿ ಪ್ರೌಢಶಾಲೆ ಕಾರಜೋಳ, ವಿಜಯಪುರ ಗ್ರಾಮೀಣ), ಶ್ರೀಮತಿ ಬಿ.ಟಿ.ಸಜ್ಜನ (ಎಸ್‌ಕೆ ಪಪೂ ಕಾಲೇಜ್-ಪ್ರೌಢಶಾಲೆ ವಿಭಾಗ ತಾಳಿಕೋಟೆ, ಮುದ್ದೇಬಿಹಾಳ), ಜಗದೇವಪ್ಪ ಮ.ಕಡಣಿ (ಶಿವಯೋಗೇಶ್ವರ ಪ್ರೌಢಶಾಲೆ ಸಾಲೋಟಗಿ, ಇಂಡಿ), ಎಸ್.ಎಸ್.ಬಿರಾದಾರ (ಕೆಪಿಎಸ್ ಗಾಂಧಿಚೌಕ ವಿಜಯಪುರ ನಗರ).

";