ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿವೆ ಅನ್ನೋದನ್ನು ಇಡೀ ರಾಜ್ಯವನ್ನು ಒಂದು ಸುತ್ತು ಹಾಕಿದ ಬಳಿಕ ಹೇಳುತ್ತೇನೆ ಎಂದು ತಿಳಿಸಿದರು.
ತೀಕ್ಷ್ನ ತಾಪಮಾನದಿಂದ ಕುದಿಯುತ್ತಿರುವ ಕಲಬುರಗಿಯಲ್ಲಿ ಆಯೋಜಿಸಲಾಗಿರುವ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ಅಗಮಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು,ವಿಶ್ವಾಸ ಇದ್ದವರು 14 ಕ್ಷೇತ್ರಗಳಲ್ಲಿ ಯಾಕೆ ಅಭ್ಯರ್ಥಿಗಳನ್ನು ಬದಲಾಯಿಸಿದ್ದಾರೆ? ಆ ಮುಖಗಳಿಗೆ ವೋಟು ಸಿಕ್ಕಲ್ಲ ಅಂತ ಪಕ್ಷದ ವರಿಷ್ಠರಿಗೆ ಚೆನ್ನಾಗಿ ಗೊತ್ತಿತ್ತು, ಹಾಗಾಗೇ ಬೇರೆಯರಿಗೆ ಟಿಕೆಟ್ ನೀಡಿದ್ದಾರೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಗೆ 141 ಸೀಟು ಬರುತ್ತವೆ ಎಂದಿದ್ದರು ಮತ್ತು ಅವರ ಭವಿಷ್ಯವಾಣಿ
ಆಲ್ಮೋಸ್ಟ್ ನಿಜವಾಗಿತ್ತು. ಬಿಜೆಪಿ ನಾಯಕರು ಎಲ್ಲ 28 ಸ್ಥಾನ ಗೆಲ್ಲುತ್ತೇವೆ ಅನ್ನುತ್ತಿದ್ದಾರಲ್ಲ ಸರ್ ಅಂತ ಕೇಳಿದಾಗ, ಅವರು ಲೋಕಸಭೆಯ ಎಲ್ಲ 543 ಸೀಟುಗಳನ್ನು ಗೆಲ್ಲುತ್ತೇವೆ ಅನ್ನುತ್ತಾರೆ,
ರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರವ ಬಗ್ಗೆ ಶಿವಕುಮಾರ್, ಸ್ವಾಮೀಜಿ ಬಗ್ಗೆ ತಾನೇನೂ ಕಾಮೆಂಟ್ ಮಾಡಲ್ಲ, ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಗೆ ಬಿ ಫಾರಂ ನೀಡಲಾಗಿದೆ ಎಂದರು.