This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಇಡಿ ಪ್ರಕರಣ ರದ್ದು: ‘ಸುಪ್ರೀಂಕೋರ್ಟ್‌ ಹಾಗೂ ನ್ಯಾಯಮೂರ್ತಿಗಳಿಗೆ ಸಾಷ್ಟಾಂಗ ನಮಸ್ಕಾರ ಎಂದ ಡಿ.ಕೆ. ಶಿವಕುಮಾರ್

ಇಡಿ ಪ್ರಕರಣ ರದ್ದು: ‘ಸುಪ್ರೀಂಕೋರ್ಟ್‌ ಹಾಗೂ ನ್ಯಾಯಮೂರ್ತಿಗಳಿಗೆ ಸಾಷ್ಟಾಂಗ ನಮಸ್ಕಾರ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ಇಡಿ ಪ್ರಕರಣದಲ್ಲಿ ಬಿಗ್ ರಿಲೀಫ್ ವಿಚಾರವಾಗಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಸುಪ್ರೀಂಕೋರ್ಟ್‌ ಹಾಗೂ ನ್ಯಾಯಮೂರ್ತಿಗಳಿಗೆ ಸಾಷ್ಟಾಂಗ ನಮಸ್ಕಾರ ಎಂದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ‘ಸುಪ್ರೀಂ ರಿಲೀಫ್ ನೀಡಿದ ಮಾಹಿತಿ ಸಿಕ್ಕಿದ್ದು, ಕಷ್ಟದ ಜೀವನದ ದೊಡ್ಡ ಸಂತೋಷದ ಇವತ್ತು. ವಕೀಲರುಗಳಿಂದ ಫೋನಿನ ಸುರಿಮಳೆ ಬರುತ್ತಿದ್ದು, ನಾನೇನೂ ತಪ್ಪು ಮಾಡಿಲ್ಲ. ಇಡಿ ಅಧಿಕಾರಿಗಳಿಂದ ಕ್ರಮ ಆಗಿದ್ದು ತಪ್ಪು ಎನ್ನುವ ಮಾಹಿತಿ ಗೊತ್ತಾಗ್ತಿದೆ. ಈಗಲೂ ಸಿಬಿಐನವರು ಏನೇನು ಮಾಡ್ತಿದ್ದಾರೆಂದು ಸದ್ಯದಲ್ಲೇ ಹೇಳುವೆ ಎಂದರು.‘

ಸುರ್ಜೇವಾಲ ಸೇರಿದಂತೆ ಎಲ್ಲರೂ ಸುಪ್ರೀಂಕೋರ್ಟ್‌ನಲ್ಲಿ ಇದ್ದರು. ಸುಪ್ರೀಂಕೋರ್ಟ್‌ನ ತೀರ್ಪಿನ ಮುಂದೆ ಮತ್ತೇನಿದೆ. ಜೈಲಿಗೆ ಹೋಗುವಾಗಲೂ ಆತ್ಮವಿಶ್ವಾಸದಿಂದಲೇ ಹೋಗಿದ್ದೆ, ಈಗಲೂ ಅದೇ ಆತ್ಮ ವಿಶ್ವಾಸದಲ್ಲಿದ್ದು, ಸಿಬಿಐನವರು ಈಗಲೂ ನನ್ನ ಸುತ್ತಮುತ್ತಲಿನವರಿಗೆ ಕಿರುಕುಳ ನೀಡುತ್ತಿದ್ದಾರೆ. ಆದರೆ, ಯಾರೂ ಕೂಡ ವಿರೋಧಿಗಳಿಲ್ಲ, ಎಲ್ಲ‌ಾ ಪ್ರಕೃತಿಯ ನಿಯಮ ಎಂದಿದ್ದಾರೆ. ಇದೇ ವೇಳೆ ಕಲ್ಲು ಕಡಿದ್ರೆ ಆಕೃತಿ, ಪೂಜಿಸಿದ್ರೆ ಸಂಸ್ಕೃತಿ ಎಂಬ ಗಾದೆ ಮಾತು ಹೇಳಿದರು.

ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ನಿವಾಸದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಪ್ರಮಾನದ ನಗದು ಪತ್ತೆಯಾಗಿತ್ತು. ಆಗ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿತ್ತು.

";