ಬೆಂಗಳೂರು: ರಾಜ್ಯದ ಒಕ್ಕಲಿಗರು ಕಾಂಗ್ರೆಸ್ ಕೈ ಬಿಡಲ್ಲ, ರೆಡ್ಡಿಗಳು ಸೇರಿ ಒಟ್ಟು 8 ಒಕ್ಕಲಿಗ ಮುಖಂಡರಿಗೆ ಟಿಕೆಟ್ ನೀಡಲಾಗಿದೆ ಮತ್ತು ಕೆಪಿಸಿಸಿ ಅಧ್ಯಕ್ಷನಾಗಿರುವ ತಾನೂ ಕೂಡ ಒಕ್ಕಲಿಗ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ದೇವೇಗೌಡರು ತಮ್ಮ ಅಳಿಯನಿಗೆ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶ ಕಂಡಿರಬಹುದು, ಆದರೆ ಜೆಡಿಎಸ್ ಪಕ್ಷವು ಬೆಂಗಳೂರು ಗ್ರಾಮಾಂತರ ಸೇರಿದಂತೆ ಎಲ್ಲ 4 ಸೀಟುಗಳಲ್ಲಿ ಸೋಲು ಅನಭವಿಸಲಿರುವುದು ಖಚಿತ, ಇದನ್ನು ಬೇಕಾದರೆ ಬರೆದಿಟ್ಟುಕೊಳ್ಳಿ ಎಂದು ಸೂಚಿಸಿದರು.
ಗಿಫ್ಟ್ ಹಂಚಿದ್ದರ ಬಗ್ಗೆ ಶಿವಕುಮಾರ್ ನೀಡಿದ ಪ್ರತಿಕ್ರಿಯೆ ಅದನ್ನು ಒಪ್ಪಿಕೊಂಡಂತಿದ್ದು, ನಾನು ಹಂಚಿದ್ದೀನೋ ಬಿಟ್ಟಿದ್ದೇನೋ ಬೇರೆಯವರರು ಹಂಚಿಲ್ವಾ ಎಂದು ಅವರು ಕೇಳಿದರು.
ಕುಮಾರಸ್ವಾಮಿ ಕೇಂದ್ರದಲ್ಲಿ ಮಿನಿಸ್ಟ್ರಾಗುವ ಬಗ್ಗೆ ಕೇಳಿದ ಪ್ರಶ್ನೆಗೆ ಶಿವಕುಮಾರ್, ಅವರು ಮಿನಿಸ್ಟ್ರು ಬೇಕಾದರೂ ಆಗಲಿ, ಅದಕ್ಕಿಂತ ದೊಡ್ಡದೇನಾದರೂ ಇದ್ದರೆ ಅದೂ ಆಗಲಿ, ಅವರಿಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಎಂದು ಶಿವಕುಮಾರ್ ಹೇಳಿದರು.
ಕೊನೆಯಲ್ಲಿ, ಮಾಧ್ಯಮಗಳು ತಾರತಮ್ಯದ ವರದಿಗಾರಿಕೆ ಮಾಡುತ್ತಿವೆ, ಕಾಂಗ್ರೆಸ್ ಗೆ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಒದಗಿಸುತ್ತಿಲ್ಲ ಎಂದು ವಿಶ್ಲೇಷಿಸಿದರು.