This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics NewsState News

ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ತೆರವು ಮಾಡಿದ ವಂಶ ನಮ್ಮದು- ಡಿಕೆಶಿ

ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ತೆರವು ಮಾಡಿದ ವಂಶ ನಮ್ಮದು- ಡಿಕೆಶಿ

ಮೈಸೂರು: ಮಹಾನುಭಾವರು 1980ರಲ್ಲೇ ಸಿಡಿ ಫ್ಯಾಕ್ಟರಿ ಓಪನ್ ಮಾಡಿದ್ದಾರೆ. ಅವರಿಂದಲೇ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ಹರಿದಾಡಿವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಆರೋಪಿಸಿದರು.

ಇದೇ ವೇಳೆ, ತಮಗೆ ಡಿಕೆಶಿಯವರನ್ನು ಕಂಡರೆ ಅಸೂಯೆ ಎಂದು ಟೀಕಿಸಿರುವ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಉತ್ತರಿಸಿದರು. “ನನಗೆ ಡಿಕೆ ಶಿವಕುಮಾರ್ ಕಂಡರೆ ಅಸೂಯೆ ಅಂತಾ ಹೇಳಿದ್ದಾರೆ. ನಾನು ಯಾಕೆ ಅವರನ್ನು ನೋಡಿ ಅಸೂಯೆ ಪಡಲಿ. ಅಧಿಕಾರ ಯಾರ ಅಪ್ಪನ ಆಸ್ತಿಯಲ್ಲ ಎಂದರು.

ರಾಜಕೀಯದಲ್ಲಿ ಏಳು ಬೀಳು ಅದು ಭಗವಂತ ಇಚ್ಚೆ. ಇದರಲ್ಲಿ ಅಸೂಯೆ ಯಾಕೆ? ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ತೆರವು ಮಾಡಿದ ವಂಶ ನಮ್ಮದು. ಎಲ್ಲಾ ಅಧಿಕಾರವನ್ನು ನಾವು ನೋಡಿ ಆಗಿದೆ. ನಮಗೆ ಅಧಿಕಾರ ಬೇಡ ಅಂದರೂ ಹಿಂದೆಲ್ಲಾ ಅದು ಅದು ಬಂದಿದೆ. ನಾವು ಅಧಿಕಾರ ಹುಡುಕಿಕೊಂಡು ಹೋಗಿಲ್ಲ. ನಿಮಗೆ ಇದು ಗೊತ್ತಿರಲಿ’’ ಎಂದು ಹೇಳಿದರು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಹಗರಣಕ್ಕೆ ಸಂಬಂದಿಸಿದ ಅಶ್ಲೀಲ ದೃಶ್ಯಗಳನ್ನು ವಿಡಿಯೋ ಮಾಡಿರುವುದು ಒಂದು ಅಪರಾಧವಾದರೆ, ಅದರ ವೀಡಿಯೋವನ್ನು ಚುನಾವಣೆಯ ದುರುದ್ದೇಶಕ್ಕಾಗಿ ಸಾರ್ವಜನಿಕರಿಗೆ ವಿತರಿಸಿದ್ದು ಅಪರಾಧವಲ್ಲವೇ ? ವೀಡಿಯೋ ಮಾಡಿದ್ದಕ್ಕಿಂತಾ ಅದರ ವಿತರಣೆ ಅದು ಕೂಡ ಅಪರಾಧ ಅಲ್ವಾ? ಎಂದು ಅವರು ಪ್ರಶ್ನಿಸಿದರು.

Nimma Suddi
";