This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಕಾಂಗ್ರೆಸ್ ಮುಂದುವರೆದರೆ ವಿಧಾನಸೌಧ ಗೋಪುರದ ಮೇಲೆ ಮೈಕ್ ಇಟ್ಟು ಆಜಾನ್ ಕೂಗಿದರು ಆಶ್ಚರ್ಯ ಪಡಬೇಡಿ: ಪ್ರತಾಪ್​ ಸಿಂಹ

ಕಾಂಗ್ರೆಸ್ ಮುಂದುವರೆದರೆ ವಿಧಾನಸೌಧ ಗೋಪುರದ ಮೇಲೆ ಮೈಕ್ ಇಟ್ಟು ಆಜಾನ್ ಕೂಗಿದರು ಆಶ್ಚರ್ಯ ಪಡಬೇಡಿ: ಪ್ರತಾಪ್​ ಸಿಂಹ

ಬೆಂಗಳೂರು:ವಿಧಾನಸೌಧದ ಒಳಗೆ ಪಾಕಿಸ್ತಾನ ಪರ ಘೋಷಣೆ ಮೊಳಗಿದೆ ಅಂದರೆ ಯಾರು ಅಧಿಕಾರ ಮಾಡುತ್ತಿದ್ದಾರೆ ಎಂಬುವುದು ಸ್ಪಷ್ಟವಾಗಿದ್ದು, ಕಾಂಗ್ರೆಸ್ ಮುಂದುವರೆದರೆ ವಿಧಾನಸೌಧ ಗೋಪುರದ ಮೇಲೆ ಮೈಕ್ ಇಟ್ಟು ಆಜಾನ್ ಕೂಗಿದರು ಆಶ್ಚರ್ಯ ಪಡಬೇಡಿ ಎಂದು ಸಂಸದ ಪ್ರತಾಪ್​ ಸಿಂಹ್​ ಹೇಳಿದರು.

ಬಾಂಬ್ ಬ್ಲಾಸ್ಟ್‌ಗಳು ಶುರುವಾಗಿದ್ದು, ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಹತ್ತು ವರ್ಷಗಳ ಕಾಲ ಸರಣಿ ಬಾಂಬ್ ಬ್ಲಾಸ್ಟ್‌ಗಳು ನಡೆದಿದ್ದವು. ಚಿನ್ನಸ್ವಾಮಿ ಸ್ಟೇಡಿಯಂ, ಲುಂಬಿಣಿ ಗಾರ್ಡನ್, ಜರ್ಮನ್ ಬೇಕರಿ, ಪುಣೆ, ಮುಂಬೈ, ಡೆಲ್ಲಿ, ಸೂರತ್ ದೇಶಾದ್ಯಂತ ಸರಣಿ ಬಾಂಬ್ ಬ್ಲಾಸ್ಟ್‌ಗಳು ನಡೆಯುತ್ತಿದ್ದವು. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಹಾಗಾಗಿ ಬಾಂಬ್ ಬ್ಲಾಸ್ಟ್‌ಗಳು ಪ್ರಾರಂಭವಾಗಿವೆ.

ಇದು ಟ್ರೈಲರ್ ಮಾತ್ರ, ಮುಂದೆ ಇನ್ನೂ ದುರ್ಘಟನೆಗಳು ಕಾದಿವೆ. ಒಸಮಾಬಿನ್, ಮುಲ್ಲಾ ಉಮರ್‌ ಅಂತಹವರು ಅಧಿಕಾರ ಮಾಡುವಾಗ ಬಾಂಬ್ ಹಾಕುವವರಿಗೆ ರಕ್ಷಣೆ ಕೊಡುತ್ತಾರೆ ಎಂದು ವಾಗ್ದಾಳಿ ಮಾಡಿದರು.

ಸಿದ್ದರಾಮಯ್ಯ ಅವರೆ, ನೀವು ಮುಸ್ಲಿಮರ ಕೈ ಕಡೆದರೂ ಅವರು ನಿಮಗೇ ಮತ ಹಾಕುತ್ತಾರೆ. ಮತ್ತೇಕೆ ನೀವು ರಕ್ಷಣೆ ಮಾಡಲು ಹೊರಟಿದ್ದಿರಿ? ಇದೇ ರೀತಿ ಮುಂದುವರಿದರೆ ಕರ್ನಾಟಕ ಯಾವ ಸ್ಥಿತಿಗೆ ಬರುತ್ತೆ ಯೋಚನೆ ಮಾಡಿ ಎಂದು ತಿಳಿಸಿದರು.

";