This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Agriculture NewsEducation NewsFeature ArticleHealth & FitnessLocal NewsNational NewsState News

ಆಲೂಗಡ್ಡೆ ಜಾಸ್ತಿ ತಿನ್ನಬೇಡಿ, ಇಲ್ಲಾಂದ್ರೆ ಆರೋಗ್ಯ ಸಮಸ್ಯೆಗಳು ಕಮ್ಮಿ ಅಲ್ಲ, ಜಾಸ್ತಿ ಆಗಬಹುದು!

ಆಲೂಗಡ್ಡೆ ಜಾಸ್ತಿ ತಿನ್ನಬೇಡಿ, ಇಲ್ಲಾಂದ್ರೆ ಆರೋಗ್ಯ ಸಮಸ್ಯೆಗಳು ಕಮ್ಮಿ ಅಲ್ಲ, ಜಾಸ್ತಿ ಆಗಬಹುದು!

ಬೇರೆ ತರಕಾರಿಗಳಿಗೆ ಹೋಲಿಸಿದರೆ, ಸ್ವಲ್ಪ ಕಡಿಮೆ ಬೆಲೆಗೆ ಸಿಗುವ ಆಲೂಗಡ್ಡೆ, ವರ್ಷ ಪೂರ್ತಿ ಮಾರುಕಟ್ಟೆಯಲ್ಲಿ ಕಾಣಲು ಸಿಗು ತ್ತದೆ. ತನ್ನಲ್ಲಿ ಹಲವಾರು ಬಗೆಯ ಪೋಷಕಾಂಶಗಳನ್ನು ಒಳಗೊಂಡಿರುವ ಈ ತರಕಾರಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ತಜ್ಞರು ಕೂಡ ಹೇಳುತ್ತಾರೆ.

ಪ್ರಮುಖವಾಗಿ ಆಲೂಗಡ್ಡೆಯಲ್ಲಿ ನಾರಿನಾಂಶ ಹಾಗೂ ಪೊಟ್ಯಾಶಿಯಮ್ ಅಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದ ರಿಂದ, ದೇಹದ ಜೀರ್ಣಶಕ್ತಿ ಯನ್ನು ಹೆಚ್ಚು ಮಾಡಿ ರಕ್ತದೊತ್ತಡವನ್ನು ನಿಯಂತ್ರಣ ಮಾಡಲು ಕೂಡ ನೆರವಾಗುತ್ತದೆ. ಆದರೆ ಅತಿ ಯಾದರೆ ಅಮೃತವು ವಿಷ ಎನ್ನುವ ಮಾತಿನಂತೆ, ಆಲೂಗಡ್ಡೆಯ ವಿಚಾರದಲ್ಲೂ ಕೂಡ ಈ ಮಾತು ಅನ್ವಯವಾಗುತ್ತದೆ! ಯಾಕೆಂದ್ರೆ ಈ ತರಕಾರಿಯನ್ನು ಕೂಡ ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿ ರುತ್ತದೆಯಂತೆ!

ಪ್ರೀತಿಯ ಜೀವನದಲ್ಲಿ ಸಮಸ್ಯೆಗಳು? ಜ್ಯೋತಿಷಿಯಿಂದ ಪರಿಹಾರವನ್ನು ಪಡೆಯಿರಿ. ಮೊದಲ ಚಾಟ್ ಉಚಿತವಾಗಿದೆ. ತೂಕ ಇರುವವರು
ತೂಕ ಇಳಿಸಲು ಬಯಸುವವರು, ತಮ್ಮ ಆಹಾರ ಪದ್ಧತಿಯಲ್ಲಿ ಆಲೂ ಗಡ್ಡೆ ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು. ಯಾಕೆಂದ್ರೆ ಈ ತರಕಾರಿಯಲ್ಲಿ ಕ್ಯಾಲೋರಿ ಅಂಶಗಳು ಕಂಡು ಬರುವುದರಿಂದ, ತೂಕ ಇರುವಂತಹ ಜನರು ಆಲೂಗಡ್ಡೆ ಸೇವನೆ ಕಡಿಮೆ ಮಾಡಬೇಕು.

ಜಾಸ್ತಿ ಆಲೂಗಡ್ಡೆ ತಿಂದ್ರೆ ಹೃದಯಕ್ಕೆ ಸಮಸ್ಯೆ!
ಮೊದಲೇ ಹೇಳಿದ ಹಾಗೆ, ಆಲೂಗಡ್ಡೆ ತನ್ನಲ್ಲಿ ಒಳ್ಳೆಯ ನಾರಿನ ಅಂಶ, ಪೊಟ್ಯಾಶಿಯಮ್, ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಅಂಶಗಳನ್ನು ಒಳಗೊಂಡಿದೆ. ಇವೆಲ್ಲಾವು ಕೂಡ ಹೃದಯದ ಆರೋಗ್ಯಕ್ಕೆ ಬಹಳ ತುಂಬಾನೇ ಒಳ್ಳೆಯದು.

ಹಾಗಂತ ಆಲೂಗಡ್ಡೆಯನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡಿದರೆ, ಲಾಭಕ್ಕಿಂತ ಸಮಸ್ಯೆಗಳೇ ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ! ಯಾಕೆಂದ್ರೆ ಆಲೂಗಡ್ಡೆಯಲ್ಲಿ ಸಿಗುವ ಅತಿಯಾದ ಪೊಟ್ಯಾಶಿಯಮ್ ಅಂಶವು ರಕ್ತದೊತ್ತಡದ ಮೇಲೆ ಏರುಪೇರು ಉಂಟು ಮಾಡುವುದರಿಂದ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆ ಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಮಧುಮೇಹ ಕಾಯಿಲೆ ಇದ್ದವರು
ಈಗಾಗಲೇ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು, ಆಲೂ ಗಡ್ಡೆಯನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಒಳ್ಳೆಯದು. ಯಾಕೆಂದ್ರೆ ಈ ತರಕಾರಿಯಲ್ಲಿ ಗ್ಲೈಸೆಮಿಕ್ಸ್ ಸೂಚ್ಯಾಂಕ ಪ್ರಮಾಣ ಸ್ವಲ್ಪ ಅಧಿಕ ಪ್ರಮಾಣದಲ್ಲಿ ಕಂಡು ಬರು ವುದರಿಂದ, ರಕ್ತನಾಳಕ್ಕೆ ಬೇಗನೆ ಸಕ್ಕರೆಯನ್ನು ಬಿಡುಗಡೆ ಮಾಡುವುದು.
ಕೊನೆಗೆ ಇದೇ ಕಾರಣದಿಂದಾಗಿ ಮಧುಮೇಹಿಗಳ, ರಕ್ತದಲ್ಲಿ ಸಕ್ಕರೆ ಮಟ್ಟವು ಏರಿಕೆ ಆಗುವ ಸಾಧ್ಯತೆ ಕಂಡು ಬರುತ್ತದೆ. ಹೀಗಾಗಿ ಶುಗರ್ ಇರುವವರು ಆಲೂಗಡ್ಡೆಯನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಒಳ್ಳೆಯದು.

ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು
ಅತಿಯಾಗಿ ಆಲೂಗಡ್ಡೆ ಸೇವನೆಯಿಂದ ಅಜೀರ್ಣ ಗ್ಯಾಸ್ಟ್ರಿಕ್, ಮಲ ಬದ್ಧತೆ ಹೊಟ್ಟೆ ಉಬ್ಬರದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಕ್ಕೆ ಪ್ರಮುಖ ಕಾರಣ ಆಲೂಗಡ್ಡೆಯಲ್ಲಿ ಇರು ವಂತಹ ಕೆಲವು ಪಿಷ್ಠದ ಅಂಶವು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಗಳನ್ನು ತಂದೊಡ್ಡುವುದು ಹಾಗೂ ಕರುಳಿನಲ್ಲಿ ಗ್ಯಾಸ್ ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಈಗಾಗಲೇ ಅಧಿಕರಕ್ತದೊತ್ತಡದ ಸಮಸ್ಯೆ ಇರುವವರು
ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿಕೊಳ್ಳುವಲ್ಲಿ ಆಲೂ ಗಡ್ಡೆಯಲ್ಲಿ ಕಂಡುಬರುವ ಪೊಟ್ಯಾಷಿಯಂ ಅಂಶ ಸಹಕಾರ ನೀಡುತ್ತದೆ. ಇದನ್ನು ವೈದ್ಯರು ಕೂಡ ಒಪ್ಪಿಕೊಳ್ಳುತ್ತಾರೆ.
ಯಾಕೆಂದ್ರೆ ಪೊಟ್ಯಾಷಿಯಂ ಅಂಶವು ದೇಹದಲ್ಲಿ ಕಂಡುಬರುವ ಸೋಡಿಯಂ ಅಂಶದ ವಿರುದ್ಧವಾಗಿ ಕೆಲಸ ಮಾಡುತ್ತದೆ. ಆದರೆ ಈ ಬಗ್ಗೆ ನಿಮಗೆ ಗೊತ್ತಿರಲೇಬೇಕು, ಅದು ಏನೆಂದ್ರೆ, ಈಗಾಗಲೇ ಅಧಿಕ ರಕ್ತ ದೊತ್ತಡದ ಸಮಸ್ಯೆ ಇರುವವರು, ಆಲೂಗಡ್ಡೆ ಯನ್ನು ಮಿತವಾಗಿ ಸೇವನೆ ಮಾಡಬೇಕು.

ಯಾಕೆಂದರೆ ಅತಿಯಾದರೆ, ದೇಹದಲ್ಲಿ ಪೊಟ್ಯಾಷಿಯಂ ಅಂಶವು ಹೆಚ್ಚಾಗಿ ರಕ್ತದೊತ್ತಡವು ಸಾಮಾನ್ಯ ಮಟ್ಟಕ್ಕಿಂತಲೂ ಕೆಳಗೆ ಕುಸಿಯಬಹುದು. ಕೊನೆಗೆ ಇದೇ ಕಾರಣದಿಂದ ಬಳಲಿಕೆ, ನಿರ್ಜ ಲೀಕರಣ, ಕಣ್ಣಿನ ದೃಷ್ಟಿ ಮಂದವಾಗುವುದು, ಮುಂ ತಾದ ಸಮಸ್ಯೆಗಳು ಕಾಣಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ.​

ಕೊಲೆಸ್ಟ್ರಾಲ್ ಇದ್ದವರು
ಈಗಾಗಲೇ ಅತಿಯಾದ ಕೊಲೆಸ್ಟ್ರಾಲ್ ಅಂಶದಿಂದ ಬಳಲುತ್ತಿರುವವರು, ಲೂಗಡ್ಡೆಯಿಂದ ಸಾಧ್ಯವಾದಷ್ಟು ದೂರ ಉಳಿಯಬೇಕು ಎಂದು ಹೇಳು ತ್ತಾರೆ. ಹೀಗಾಗಿ ಈ ಸಮಸ್ಯೆ ಇರುವವರು ವೈದ್ಯರ ಸಲಹೆಗಳನ್ನು ಪಡೆದು ಕೊಂಡು, ಈ ತರಕಾರಿಯನ್ನು ಸೇವನೆ ಮಾಡಿದರೆ ಒಳ್ಳೆಯದು.

";