This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsPolitics NewsState News

Congress Karnataka : ಮಾತನಾಡಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ; ಶಾಸಕರು, ಸಚಿವರಿಗೆ ಡಿಕೆಶಿ ವಾರ್ನಿಂಗ್!

Congress Karnataka : ಮಾತನಾಡಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ; ಶಾಸಕರು, ಸಚಿವರಿಗೆ ಡಿಕೆಶಿ ವಾರ್ನಿಂಗ್!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ (‌Congress Karnataka) ಸಿಎಂ ಗಾದಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಚಿವರು ಮತ್ತು ಶಾಸಕರ ಬಹಿರಂಗವಾಗಿ ನೀಡುತ್ತಿರುವ ಹೇಳಿಕೆಗೆ ಬ್ರೇಕ್‌ ಹಾಕಲು ಕೆಪಿಸಿಸಿ ಅಧ್ಯಕ್ಷ, ಡಿ.ಕೆ. ಶಿವಕುಮಾರ್‌ (DCM DK Shivakumar) ಬ್ರೇಕ್‌ ಹಾಕಲು ಮುಂದಾಗಿದ್ದಾರೆ. ಯಾರೂ ರಾಜಕೀಯ ಭವಿಷ್ಯವನ್ನು (Political Future) ಹಾಳು ಮಾಡಿಕೊಳ್ಳಲು ಹೋಗಬೇಡಿ. ಜತೆಗೆ ಪಕ್ಷದ ಭವಿಷ್ಯವನ್ನು ಸಹ ಹಾಳು ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ನಾವು ಜನಸೇವೆಯನ್ನು ಮಾಡಬೇಕು. ಗ್ಯಾರಂಟಿ ಯೋಜನೆ (Congress Guarantee Scheme) ಸಮರ್ಪಕವಾಗಿ ಜಾರಿಯಾಗಿದೆಯೇ ಎಂದು ಪರಿಶೀಲನೆ ಮಾಡಬೇಕು. ಲೋಕಸಭಾ ಚುನಾವಣೆ (Lok Sabha Election 2024) ನಮಗೆ ಬಹು ಮುಖ್ಯವಾಗಿದೆ. ಈ ಕಾರಣಕ್ಕೆ ಸಚಿವರಿಗೆ ಪ್ರವಾಸ ಮಾಡುವಂತೆ ಇಂದು ಸಿಎಂ ನಿವಾಸದಲ್ಲಿ ನಡೆದ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ನಲ್ಲಿ (Breakfast meeting) ಸೂಚನೆ ಕೊಟ್ಟಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಜಿಲ್ಲಾವಾರು ಸರ್ವೆಗೆ ಸೂಚನೆ
ಸಚಿವರಿಗೆ ಜಿಲ್ಲಾವಾರು ಸರ್ವೆ ಮಾಡಿ ವರದಿ ನೀಡಲು ಸೂಚಿಸಿದ್ದೆವು. ಇನ್ನೂ ಕೆಲವರು ನಮಗೆ ವರದಿ ಕೊಟ್ಟಿಲ್ಲ. ಅವರು ವರದಿ ಕೊಟ್ಟ ಬಳಿಕ‌ ನಾವು ಸರ್ವೇ ಮಾಡಿಸಬೇಕು. ಮತದಾರರ ಮಿಡಿತ ಪರೀಕ್ಷೆ ಮಾಡಿಸಬೇಕು. ಅದಕ್ಕೆ‌ ಇಂದು ಸಚಿವರಿಗೆ ಸೂಚನೆ ನೀಡಿದ್ದೇವೆ. ಯಾರು ಕೂಡ ಮಾತನಾಡಬೇಡಿ ಅಂತ ಹೇಳಿದ್ದೇವೆ. ನಾನು ಮತ್ತು ಸಿಎಂ ಸೇರಿದಂತೆ ಯಾರೂ ಮಾತನಾಡಬಾರದು. ಐದು ವರ್ಷದ ನಮಗೆ ಆಡಳಿತ ಮಾಡಲು ಅವಕಾಶ ನೀಡಿದ್ದಾರೆ.

ವಾರದಲ್ಲಿ ವರದಿ ನೀಡಲು ಸೂಚನೆ
ಶನಿವಾರ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ನಲ್ಲಿ ಹಲವು ರೀತಿಯ ಚರ್ಚೆಗಳು ನಡೆದವು. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ. ಅವುಗಳ ಕಡೆಗೆ ಗಮನಹರಿಸಲು ಹೇಳಿದ್ದೇವೆ. ಸಚಿವರಿಗೆ ಟಾಸ್ಕ್ ಕೊಟ್ಟಿದ್ದೇವೆ. ಲೋಕಸಭಾ ಚುನಾವಣೆಗೆ ಬೇರೆ ಕಡೆ ಉಸ್ತುವಾರಿ ಕೊಟ್ಟಿದ್ದೇವೆ. ಅಂದರೆ, ಅವರ ಜಿಲ್ಲೆ ಬಿಟ್ಟು ಬೇರೆಯವರಿಗೆ ಉಸ್ತುವಾರಿ ನೀಡಿದ್ದೇವೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಎಲೆಕ್ಷನ್ ಕಮಿಟಿ ಮೆಂಬರ್ ಆಗಿದ್ದರಿಂದ ಅವರಿಗೆ ಜವಾಬ್ದಾರಿ ವಹಿಸಲಾಗಿಲ್ಲ. ಮೂರ್ನಾಲ್ಕು ದಿನಗಳಲ್ಲಿ ವರದಿ ಕೊಡಲು ಹೇಳಿದ್ದೇನೆ. ಪ್ರತಿ ಕ್ಷೇತ್ರದಿಂದ ಮೂರು ಜನರ ಸಂಭಾವ್ಯ ಪಟ್ಟಿ ಕೊಡಲು ಹೇಳಲಾಗಿದೆ ಇದಾದ ಬಳಿಕ ಸರ್ವೆ ಮಾಡಿಸುತ್ತೇವೆ. ಜನವರಿಯಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ. ಅಭ್ಯರ್ಥಿಗಳಿಗೆ ಕೆಲಸ ಮಾಡಲು ಸೂಚನೆ ನೀಡಲಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ಜಾತಿ ಗಣತಿ ಬಗ್ಗೆ ಬೇರೆ ಕಲ್ಪನೆ ಇದೆ
ಜಾತಿ ಗಣತಿ ಹೊಂದಿರುವ ಕಾಂತರಾಜ ಆಯೋಗದ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ನಮ್ಮ ಕಮ್ಯುನಿಟಿ ಅವರರಿಗೆ ಇದರ ಬಗ್ಗೆ ಏನೋ ಒಂದು ಕಲ್ಪನೆ ಇದೆ. ನಾವು ಮಾಡುತ್ತಿರುವುದು ಸಾಮಾಜಿಕ ಮತ್ತು ಆರ್ಥಿಕ ಸರ್ವೆ ಆಗಿದೆ. ಅದರ ಬಗ್ಗೆ ಕೆಲವರಿಗೆ ಗೊಂದಲ ಇದೆ. ಆದರೆ, ಆ ವರದಿ ಇನ್ನೂ ನಮ್ಮ ಸರ್ಕಾರದ ಕೈಗೆ ಸೇರಿಲ್ಲ. ಅದನ್ನು ಏನು ಮಾಡಬೇಕೆಂದು ನಾವಿನ್ನೂ ನಿರ್ಧಾರ ಮಾಡಿಲ್ಲ. ಅದನ್ನು ಏನು ಮಾಡಬೇಕು ಎಂದು ನೋಡೋಣ ಎಂದು ಹೇಳಿದರು.

ಬಡವರಿಗೆ ಸಹಾಯ ಮಾಡುವುದರಲ್ಲಿ ನಾವು ಬಹಳ ಮುಂದೆ ಇದ್ದೇವೆ. ಶೇ. 10ರಷ್ಟು ಮಹಿಳೆಯರಿಗೆ ಅಕೌಂಟ್ ಸಮಸ್ಯೆಯಿಂದ ಗೃಹಲಕ್ಷ್ಮಿ ಹಣವು ಖಾತೆಗೆ ಸಂದಾಯವಾಗಿಲ್ಲ. ಅದನ್ನು ಸರಿ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಹೇಳಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಐಟಿ, ಇಡಿ ಕೇಸಲ್ಲಿ ಬಿ ರಿಪೋರ್ಟ್‌ ಬರುತ್ತೆ
ಐಟಿ, ಇಡಿ ನೋಟಿಸ್ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಈಗ ಆ ವಿಚಾರ ಬೇಡ. ಈಗೆಲ್ಲಾ ಬೇಡ, ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಎಲ್ಲ ದಾಖಲೆ ನಿಮ್ಮ ಹತ್ತಿರವೂ ಇದೆ. ನೀವೇ ಲೆಕ್ಕ ಹಾಕಿ, ನಾನೇನು ಹೆಚ್ಚು ಆಸ್ತಿ ಗಳಿಕೆ ಮಾಡಿದ್ದೇನಾ? ಎಲ್ಲವನ್ನೂ ಮುಂದೆ ನೋಡೋಣ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಈ ಪ್ರಕರಣದ ಬಗ್ಗೆ This is not a fit Case far ಎಂದು ಅಡ್ವೋಕೆಟ್ ಜನರಲ್ ಹೇಳಿದ್ದಾರೆ. ಅಂದು ಬಿ.ಎಸ್. ಯಡಿಯೂರಪ್ಪ ಅವರ ಕಾಲದಲ್ಲಿ ಬಿಜೆಪಿ ಸರ್ಕಾರ ಪರ್ಮಿಷನ್ ಕೊಟ್ಟಿದೆ. ನೋಟಿಸ್ ಕೊಟ್ಟರೆ ಕೊಟ್ಟುಕೊಳ್ಳಲಿ, ನಾನದಕ್ಕೆ ಉತ್ತರ ಕೊಡುತ್ತೇನೆ. ಬಿ ರಿಪೋರ್ಟ್ ಬರೆಯುವ ಕಾಲ ಬರುತ್ತದೆ ಎಂದು ಡಿಕೆ.ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಬರ ಪ್ರವಾಸ ಹಮ್ಮಿಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ನಾವೆಲ್ಲ ಅಧ್ಯಯನ ಮಾಡಿ ಈಗಾಗಲೇ ರಿಪೋರ್ಟ್ ಕೊಟ್ಡಿದ್ದೇವೆ. ಬಿಜೆಪಿ ಅವರು ಮಾಡಲಿ, ಯಾರು ಬೇಡ ಅಂತ ಹೇಳಿದ್ದು? ವಾಸ್ತವಾಂಶ ನೋಡಿ ದುಡ್ಡು ಕೊಡಿಸಲಿ ಎಂದು ಹೇಳಿದರು.

";