ಮೈಸೂರು : ನಾಳೆ ನಡೆಯುವ ಬಜೆಟ್ ನಲ್ಲಿ ನಮಗೆ ಯಾವುದೇ ರೀತಿಯಾದ ನಿರೀಕ್ಷೆಗಳಿಲ್ಲದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್ ನವರೇ ನಿರ್ನಾಮ ಮಾಡುತ್ತಾರೆ ಎಂದು ಮೈಸೂರಿನಲ್ಲಿ ಬಿಜೆಪಿಯ ಮಾಜಿ ಸಚಿವ ಡಾ. ಅಶ್ವತ್ ನಾರಾಯಣ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾಳೆಯ ಬಜೆಟ್ ಮೇಲೆ ನಮಗೆ ಯಾವುದೇ ನಿರೀಕ್ಷೆ ಇಲ್ಲ. ಆಡಳಿತ ಪಕ್ಷದ ಶಾಸಕರಿಗೆ ತೃಪ್ತಿ ಇಲ್ಲ. ಒಬ್ಬರ ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಇಂಥವರು ಮಂಡಿಸುವ ಬಜೆಟ್ ಮೇಲೆ ನಿರೀಕ್ಷೆಯಿಲ್ಲ. ಏನೇ ಘೋಷಣೆಯಾದರೂ ಕೇವಲ ಪೇಪರ್ ನಲ್ಲಿ ಇರುತ್ತದೆ ಎಂದರು.
ಜಾತಿ ಧರ್ಮಗಳ ನಡುವೆ ಎತ್ತಿ ಕಟ್ಟುವುದರಲ್ಲಿ ನಿಸೀಮರು ಕಂಡ ಕಂಡಲ್ಲಿ ಚೀಲ ಹಿಡಿದುಕೊಂಡು ನಿಂತಿದ್ದು, ಕುಟುಂಬಸ್ಥರೇ ಏಜೆಂಟ್ ಬ್ರೋಕರ್ ಗಳಾಗಿದ್ದು, ಇದು ಬಂಡಗೆಟ್ಟ ಸರ್ಕಾರ ಎಂದು ಕಾಂಗ್ರೆಸ್ ಪಕ್ಷದವರೇ ಕಾಂಗ್ರೆಸ್ ಅನ್ನು ನಿರ್ನಾಮ ಮಾಡುತ್ತಾರೆ ಎಂದು ಮೈಸೂರಿನಲ್ಲಿ ಅಶ್ವಥ್ ನಾರಾಯಣ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯ ಶಾಸಕರ ವಿರುದ್ಧ FIR ದಾಖಲಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ನಾವು ಕಾನೂನು ಹೋರಾಟ ಮಾಡುತ್ತೇವೆ. ದೇಶ ವಿಭಜನೆ ಹೇಳಿಕೆಯ ಕೊಟ್ಟವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಡಿಕೆ ಸುರೇಶ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿವರಿಸಿದರು.