ಬಾಗಲಕೋಟೆ
ಸಂಘ ಪರಿವಾರದ ಅಂಗ ಸಂಸ್ಥೆ ಸಹಕಾರ ಭಾರತಿ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ನೇಕಾರ ಮುಖಂಡ ಡಾ.ಎಂ.ಎಸ್.ದಡ್ಡೇನವರ ಅವರನ್ನು ಆಯ್ಕೆ ಮಾಡಲಾಗಿದೆ.
ಡಾ.ಎಂ.ಎಸ್.ದಡ್ಡೇನವರ ಅವರು ಸಹಕಾರಿ ಕ್ಷೇತ್ರದಲ್ಲಿ ಅನುಭವಿಗಳಾಗಿದ್ದು, ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ನೂತನವಾಗಿ ಆಯ್ಕೆಯಾದ ಅವರನ್ನು ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಜಿ.ಎನ್.ಪಾಟೀಲ, ಮುಖಂಡರಾದ ರಂಗನಗೌಡ ದಂಡನ್ನವರ, ಜಯಂತ ಕುರಂದವಾಡ, ರಾಜು ಶಿಂತ್ರೆ, ವೆಂಕಣ್ಣ ಹಲಗಲಿ, ಅಶೋಕ ಜಿಗಳೂರ, ಜಿದ್ದಿಮನಿ, ಶೈಲಜಾ ಸಂಗಳದ ಹಾಗೂ ಇತರರು ಸನ್ಮಾನಿಸಿದರು.