This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Education NewsInternational NewsLocal NewsNational NewsPolitics NewsState News

ಅಯೋಧ್ಯ ಆಯಿತು, ಮುಂದೆ ಕಾಶಿ- ಮಥುರಾ ಮುಕ್ತವಾಗಲಿ : ಡಾ.ವೀರಣ್ಣ ಚರಂತಿಮಠ

ಅಯೋಧ್ಯ ಆಯಿತು, ಮುಂದೆ ಕಾಶಿ- ಮಥುರಾ ಮುಕ್ತವಾಗಲಿ : ಡಾ.ವೀರಣ್ಣ ಚರಂತಿಮಠ

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸಾಮೂಹಿಕ ಶ್ರೀರಾಮನಾಮ ತಾರಕ ಹೋಮ

ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ನೇತೃತ್ವದಲ್ಲಿ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಆಯೋಜನೆ

ಬಾಗಲಕೋಟೆ:

ಭಾರತೀಯ ಜನತಾ ಪಾರ್ಟಿಯ ಅಸಂಖ್ಯಾತ ಕಾರ್ಯಕರ್ತರ ಹೋರಾಟದ ಫಲ ಇಂದು ಅಯೋದ್ಯ ಶ್ರೀ ರಾಮ ಮಂದಿರ ನಾಡಿಗೆ ಮುಕ್ತವಾಗಿದೆ,ಮುಂದೆ ಕಾಶಿ,ಮಥುರಾ ಕೂಡಾ ಮುಕ್ತವಾಗಲಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಅಯೋದ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಶುಕ್ರವಾರ ವಿದ್ಯಾಗಿರಿಯ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ವಿಧಾನಸಭಾ ಮತಕ್ಷೇತ್ರ ಬಾಗಲಕೋಟೆ ವತಿಯಿಂದ ಹಮ್ಮಿಕೊಂಡ 108 ದಂಪತಿಗಳಿಂದ ಸಾಮೂಹಿಕ ಶ್ರೀರಾಮನಾಮ ತಾರಕ ಹೋಮದಲ್ಲಿ ಪಾಲ್ಗೋಂಡು ಶ್ರೀರಾಮನಿಗೆ 108 ನಾಮಾವಳಿ ಮೂಲಕ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಹೋಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದೆ ದಿನಾಂಕ 22ರಂದು ಅಯೋಧ್ಯಯಲ್ಲಿ ನಡೆಯುವ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ದೇಶ ವಿದೇಶಗಳಲ್ಲಿ ಪೂಜಾ ಕೈಂಕರ್ಯಗಳು ಜರುಗುತ್ತಿದ್ದು, ಅಯೋದ್ಯಯಲ್ಲಿ ಇಂದು 25 ಸಾವಿರ ಹೋಮ ಕುಂಡದಲ್ಲಿ ಶ್ರೀರಾಮನಾಮ ತಾರಕ ಹೋಮ ನಡೆಯುವ ಶುಭ ಸಂಧರ್ಭದಲ್ಲಿ ಬಾಗಲಕೋಟೆಯಲ್ಲಿಯೂ ನಮ್ಮೆಲ್ಲ ಕಾರ್ಯಕರ್ತರ ಉತ್ಸಾಹದಿಂದ 108 ಹೋಮ ಕುಂಡಗಳಲ್ಲಿ ಸಕಲ ಸಮಾಜದ 108 ದಂಪತಿಗಳಿಂದ ಶ್ರೀರಾಮ ನಾಮ ತಾರಕ ಹೋಮ ಯಶಸ್ವಿಯಾಗಿದೆ,

ದೇಶದಲ್ಲಿ ಶ್ರೀರಾಮ ಮಂದಿರ ಇದಿಗ ಮುಕ್ತವಾಗಿದ್ದು ಇದೆ ರೀತಿಯಲ್ಲಿ ಕಾಶಿ,ಮಥುರಾ ಕೂಡಾ ಮುಂದಿನ ದಿನಮಾನದಲ್ಲಿ ಮುಕ್ತವಾಗಲಿ ಎಂದ ಅವರು ಪ್ರಧಾನಿ ನರೇಂದ್ರ ಮೋದಿಯವರು ಸಮುದ್ರ ಸ್ನಾನದ ಜೋತೆಗೆ 11 ದಿನಗಳ ಕಠಿಣ ಉಪವಾಸ ವೃತ ಕೈಗೊಂಡು ದೇಶದ ಪ್ರಮುಖ ದೇವಸ್ಥಾನಗಳ ಬೇಟಿ ನಿಡುತ್ತಿದ್ದು 22ರಂದು ಅಯೋದ್ಯಯಲ್ಲಿ ಶ್ರೀ ರಾಮಲಲ್ಲಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಪಾಲ್ಗೋಳ್ಳಲಿದ್ದಾರೆ,

ಅವರಿಗೆ ಭಗವಂತ ಇನ್ನು ಹೆಚ್ಚಿನ ಆಯು ಆರೋಗ್ಯ ದಯಪಾಲಿಸಲಿ, ಇನ್ನು ಹೆಚ್ಚು ಕಾಲ ಭಾರತದ ಪ್ರಧಾನಿಯಾಗಿ ದೇಶವನ್ನು ಮುನ್ನೆಡಸಲಿ ಎಂದರು, ಅಲ್ಲದೆ 22 ರಂದು ಎಲ್ಲರೂ ದೇವಸ್ಥಾನಗಳಲ್ಲಿ ಬೇಳಗ್ಗೆ ವಿಶೇ಼ ಪೂಜೆ, ಭಜನೆ, ಪ್ರಾರ್ಥನೆಗಳನ್ನು ಸಲ್ಲಿಸಿ, ಮನೆಯಲ್ಲಿ ಹಬ್ಬದ ವಾತವರಣದಂತೆ ಸಿಹಿ ಪದಾರ್ಥಗಳನ್ನು ಮಾಡ ಬೇಕು, ಸಂಜೆ ದೀಪಾವಳಿಯ ಆಚರಣೆಯಂತೆ ಮನೆ ಮುಂದೆ 5 ದೀಪಗಳನ್ನು ಬೇಳಗುವ ಮೂಲಕ ಶ್ರೀರಾಮನ ದೀಪೋತ್ಸವವದಲ್ಲಿ ಪಾಲ್ಗೋಳ್ಳಬೇಕೆಂದರು.

ಶ್ರೀರಾಮ ನಾಮ ತಾರಕ ಹೋಮ ನೇತೃತ್ವ ವಹಿಸಿದ ಪಂಡಿತೋತ್ತಮ ಬಿಂಧುಮಾದವಾಚಾರ್ಯ ನಾಗಸಂಪಿಗೆ ಮಾತನಾಡಿ ಸಕಲ ಸಮುದಾಯದ ಭಕ್ತರ ಉಪಾಸಕ ಶ್ರೀರಾಮಚಂದ್ರ ಪ್ರಭು ಎಲ್ಲರಿಗೂ ಅದರ್ಶವಾಗಿದ್ದು, ಅಯೋದ್ಯಯಲ್ಲಿ 500 ವರ್ಷಗಳ ನಂತರ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡಯುತ್ತಿರುವುದು ದೈವ ಸಂಕಲ್ಪವಾಗಿದೆ.

ಭಕ್ತರ ಸ್ವರೂಪದಲ್ಲಿ ಶ್ರೀ ಆಂಜನೆಯ ಇಂದು ಶ್ರೀರಾಮ ಎಲ್ಲ ಪೂಜಾ ಕಾರ್ಯಗಳಲ್ಲಿ ಪಾಲ್ಘೋಂಡಿದ್ದಾನೆ ಎಂದರು, 22ರಂದು ಎಲ್ಲ ಗ್ರಾಮೀಣ ನಗರದ ಎಲ್ಲ ದೇವಸ್ಥಾನಗಳ್ಳಿ ವಿಶೇಷ ಪೂಜಾ ಕಾರ್ಯಗಳು ದೀಪಾವಳಿಯ ಹಬ್ಬದಂತೆ ಆಚರಿಸಲಾಗುತ್ತಿದೆ ಎಂದರು.

ಯಶಸ್ವಿಯಾದ ರಾಮನಾಮ ತಾರಕ ಹೋಮ
ಹಿರಿಯ ಆಚಾರ್ಯರಾದ ಪಂಡಿತೋತ್ತಮ ಬಿಂಧುಮಾದವಾಚಾರ್ಯ ನಾಗಸಂಪಿಗೆ ಅವರ ಆಚಾರ್ಯ ತಂಡದ ಸಾನಿದ್ಯದಲ್ಲಿ ಪ್ರಧಾನ ಹೋಮ ಕುಂಡ ಸೇರಿದಂತೆ 108 ಹೋಮ ಕುಂಡದಲ್ಲಿ 111 ದಂಪತಿಗಳಿಂದ ಶ್ರೀರಾಮನಾಮತಾರಕ ಹೋಮ ಶೃದ್ಧಾಭಕ್ತಿಯಿಂದ ಶಾಸ್ತ್ರೋಕ್ತವಾಗಿ ಯಶಸ್ವಿಯಾಯಿತು.

ಸಂತೋ಼ ಗದ್ದನಕೇರಿ ಹಾಗೂ ರಂಗಪ್ಪ ರಂಗನಗೌಡರ ತಂಡದಿಂದ ಶ್ರೀರಾಮನ ಭಕ್ತಿಗೀತೆಗಳ ಸಂಗೀತದಾಸೋಹ ಜರುಗಿತು.ನಂತರ ಎಲ್ಲ ಭಕ್ತಾಧಿಗಳಿಂದ ಅನ್ನಸಂತರ್ಪಣೆ ಜರುಗಿತು.ಇದೆ ಸಂಧರ್ಬದಲ್ಲಿ ಶ್ರೀರಾಮನ ಭಾವಚಿತ್ರವನ್ನು ಬಲೂನಗಳ ಸಹಾಯದಿಂದ ಆಕಾಶದೇತ್ತರಕ್ಕೆ ಹಾರಿಬಿಡಲಾಯಿತು.

ಕಾರ್ಯಕ್ರಮದಲ್ಲಿ ಸಂಸಧ ಪಿ.ಸಿ.ಗದ್ದಿಗೌಡರ,ವಿಧಾನ ಪರಿಷತ್ತ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ,
ಪರಿವಾರದ ಪ್ರಮುಖರಾದ ಡಾ.ಸಿ.ಎಸ್.ಪಾಟೀಲ, ಮುಖಂಡ ಎಮ್.ಎಸ್.ದಡ್ಡೆನ್ನವರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ,ರಾಜು ರೇವಣಕರ,ಬಸವರಾಜ ಯಂಕಂಚಿ, ವಿಸ್ತಾರಕ ಹರೀಶ ಮಲ್ಲರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ,ಜಿಲ್ಲಾ ಮಾದ್ಯಮ ವಕ್ತಾರ ಸತ್ಯನಾರಯಾಣ ಹೆಮಾದ್ರಿ, ದರ್ಶನ ಏಡಕೆ, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣುರ, ಮಹೇಶ ಅಥಣಿ, ಎಮ್.ಪಿ.ಶೆಟ್ಟರ. ಮಹೇಶ ಅಂಗಡಿ. ಗುರುಬಸವ ಸೂಳಿಬಾವಿ, ಕುಮಾರ ಹಿರೇಮಠ, ಪ್ರಭು ಹಡಗಲಿ, ಲಕ್ಷ್ಮೀನಾರಾಯಣ ಕಾಸಟ್,ವೀರೇಶ ಅಥಣಿ, ಸಂಗಮೇಶ ಗುಡ್ಡದ, ಪರಮೇಶ್ವರ ಮಧುರ, ಮುರಗೇಶ ಕುಂದರಗಿ,ವಿಜಯ ಚೆಟ್ಟರಕಿ,ಸಂಗಪ್ಪ ಸಜ್ಜನ,ಸಂಗಣ್ಣ ಕಲಾದಗಿ, ನಗರಸಭೆ ಸದಸ್ಯೆ ಜ್ಯೋತಿ ಭಜಂತ್ರಿ,ಶೋಭಾ ರಾವ, ಶಶಿಕಲಾ ಮಜ್ಜಗಿ, ಶಿವಲೀಲಾ ಪಟ್ಟಣಶೆಟ್ಟಿ,ಅನಿತಾ ಸರೋದೆ, ಭಾಗಿರತಿ ಪಾಟೀಲ,ಭಾಗ್ಯಾಶ್ರಿ ಹಂಡಿ,ವಿಜಯಲಕ್ಷ್ಮೀ ಆಚಾರ್ಯ,ಶೈಲಜ ಸಂಗಳದ, ಡಾ.ರೇಖಾ ಕಲಬುರ್ಗಿ,ಸ್ಮೀತಾ ಪವಾರ, ಬಸವರಾಜ ಅವರಾದಿ,ಯಲ್ಲಪ್ಪ ನಾರಾಯಣಿ, ರಾಜು ಶಿಂತ್ರೆ, ಶ್ರೀಧರ ನಾಗರಬೆಟ್ಟ, ರಾಜೇಂದ್ರ ಬಳೂಲಮಠ, ಸಂಗಪ್ಪ ಕಾರಪುಡಿ,ಬಸವರಾಜ ನಾಶಿ,ಶಂಕರ ಗಲಗ,ಸುರೇಶ ಕುಂದರಗಿ, ಶ್ರೀನಾಥ ಸಜ್ಜನ, ಸುರೇಶ ಮಜ್ಜಗಿ, ಸಿದ್ದೇಶ ಜಿರ್ಲಿ, ಶರತ ಪಾಟೀಲ, ಚಂದ್ರು ಸರೂರ.ನಾಗರಾಜ ನಾರಾಯಣಕರ,ಕಾಂತು ಖಾತೆದಾರ,ಸಾಗರ ಬಂಡಿ,ಮುತ್ತಣ್ಣ ಸೂಳಿಕೇರಿ, ರಾಜು ಕೋಟಿಕಲ್. ರುದ್ರಗೌಡಾ ಸದಲಾಪುರ,ಶ್ರೀಶೈಲ ಗಾಣಗೇರ,ಬಸವರಾಜ ಅಂಬಿಗೇರ, ಶಿವು ಜಾಗಾರ, ಮಂಜು ಬಜೆನ್ನವರ, ಬಸವರಾಜ ಹುನಗುಂದ,ಉಮೇಶ ಹಂಚಿನಾಳ ಸೇರಿದಂತೆ ಸಕಲ ಸಮಾಜದ ಹಿರಿಯ ಪ್ರಮುಖರು ಭಾಗವಹಿಸಿದ್ದರು.

Nimma Suddi
";