ನಿಮ್ಮ ಸುದ್ದಿ ಬಾಗಲಕೋಟೆ
ಸಂಸ್ಕೃತಿಯು ನಮ್ಮ ದೇಶದ ದೊಡ್ಡ ಸಂಪತ್ತು. ಯುವಕರು ಅದನ್ನು ಉಳಿಸಿ-ಬೆಳೆಸಬೇಕು. ಪಠ್ಯ ಪೂರಕ ಕಾರ್ಯಕ್ರಮಗಳು ಈ ದಿಶೆಯಲ್ಲಿ ಸಹಕಾರಿಯಾಗಿವೆ ಎಂದು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯಶಾಸ್ತç ವಿಭಾಗ ಮತ್ತು ಆಯ್‌ಕ್ಯೂಎಸಿ ಸಹಯೋಗದಲ್ಲಿ ನಡೆದ ಐದು ದಿವಸಗಳ ವಾಣಿಜ್ಯೋತ್ಸವ-೨ಕೆ೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಒಟ್ಟುಜನಸಂಖ್ಯೆಯಲ್ಲಿ ೧೫ ರಿಂದ ೩೫ ವಯಸ್ಸಿನ ಯುವಕರ ಸಂಖ್ಯೆಯೇ ಹೆಚ್ಚು. ಅವರುರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಯುವಶಕ್ತಿಯ ಸದ್ಬಳಕೆ ಮಾಡಿಕೊಳ್ಳುವದರ ಮೂಲಕ ಪ್ರಗತಿಯನ್ನು ಸಾಧಿಸಬಹುದುಎಂದರು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ವಿದ್ಯಾರ್ಥಿಗಳು ಸೃಜನಶೀಲ ಗುಣಗಳನ್ನು ಬೆಳೆಸಿಕೊಳ್ಳಬಹುದು.ನಾವಿನ್ಯತೆಯನ್ನು ಮೈಗೂಡಿಸಿಕೊಳ್ಳಬಹುದು. ಹೊಸ ವಿಚಾರಧಾರೆಗಳ ಮೂಲಕ ಹೊಸ ದಿಕ್ಕು ಕಾಣಬಹುದುಎಂದರು.
ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವದರಜೊತೆಗೆ ಅವರುಗಳು ಉತ್ತಮ ನೆಲೆಯನ್ನು ಕಂಡುಕೊಳ್ಳವಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕು.ಅವರಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಬೇಕುಎಂದಅವರು ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಭಾಗ ಮುಖ್ಯಸ್ಥs ಶ್ರೀನಿವಾಸ ನರಗುಂದ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿವಿಧ ಕೌಶಲಗಳನ್ನು ಅಭಿವ್ಯಕ್ತಗೊಳಿಸಲು ಸೂಕ್ತ ವೇದಿಕೆಯನ್ನು ನೀಡಲಾಗುತ್ತಿದೆ. ಈ ವಾಣಿಜ್ಯೋತ್ಸವದಲ್ಲಿಅಂತಹ ಅವಕಾಶಗಳನ್ನು ಒದಗಿಸಲಾಗಿದೆ. ರಸಪ್ರಶ್ನೆ,ಅಣಕು ಸಂದರ್ಶನದAತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ,ಆತ್ಮವಿಶ್ವಾಸವನ್ನು ಬೆಳೆಸಬಲ್ಲವುಎಂದರು.
ಪ್ರಾಚಾರ್ಯೆಡಾ.ಶ್ರೀಮತಿ ವ್ಹಿ.ಎಸ್.ಮಠಅಧ್ಯಕ್ಷತೆ ವಹಿಸಿದ್ದರು. ಪಠ್ಯಪೂರಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಯಶಸ್ವೀ ಜೀವನಕ್ಕೆ ಸಹಕಾರಿಯಾಗಿವೆ. ಇವುಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಅಶ್ವಿನಿ ಬಿಲ್ಲಾರ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಗೌರಿಚವ್ಹಾಣ ನಿರೂಪಿಸಿದರು. ಉಪನ್ಯಾಸಕಎನ್.ಬಿ.ಹಸಬಿ ವಂದಿಸಿದರು. ಆಯ್‌ಕ್ಯೂಎಸಿ ಸಂಯೋಜಕಡಾ.ಎಸ್.ಎಸ್.ಹAಗರಗಿ,ಶಿಕ್ಷಣ ಸಂಯೋಜಕಜಿ.ಎನ್.ಕುಲಕರ್ಣಿ, ನಿವೃತ್ತ ಪ್ರಾಧ್ಯಾಪಕರಾದ ಡಾ.ಪಿ.ಎಸ್.ಹುಯಿಲಗೋಳ.ಡಾ.ಪಿ.ಆರ್.ಜೋಶಿ,ಜಿ.ಜೆ.ಮೊರಬ ಮತ್ತಿತರರು ಉಪಸ್ಥಿತರಿದ್ದರು.