ಬಾಗಲಕೋಟೆ
ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ ಅವರು ಜಮಖಂಡಿ ತಾಲೂಕಿನ ಬರಗಾಲ ಪರಿಸ್ಥಿತಿ ಸ್ಥಳಗಳಿಗೆ ಸೋಮವಾರ ಭೇಟಿ ವೀಕ್ಷಣೆ ಮಾಡಿದರು.
ಬರಪೀಡಿತ ಪ್ರದೇಶಗಳಾದ ತೊದಲಬಾಗಿ ಗ್ರಾಮದ ಕಬ್ಬು ಬೆಳೆ ಹಾನಿ ವೀಕ್ಷಿಸಿ ಗದ್ಯಾಳ ಗ್ರಾಮದಲ್ಲಿ ಇಮಾಮಸಾನ ನದಾಪ್ ಅವರ ಜಮೀನಿನಲ್ಲಾದ ಗೋವಿನ ಜೋಳ ಹಾನಿ ವೀಕ್ಷಿಸಿದರು. ಗೋಠೆ ಗ್ರಾಮದ ಅರ್ಜಿನ ನಾಟಿಕಾರ, ಶಾಂತವ್ವ ನಾಟಿಕಾರ ಅವರ ಜಮೀನಲ್ಲಿ ಹಾನಿಯಾದ ತೊಗತಿ, ಗೋವಿನಜೋಳ ಪರಿಶೀಲಿಸಿ ಅಲ್ಲಿ ಮೇವು ಸಂಗ್ರಹಣಾ ಕೇಂದ್ರ ಸ್ಥಾಪನೆ ಮಾಡುವ ಕುರಿತು ಸ್ಥಳ ಪರಿಶೀಲಿಸಿದರು.
ಕನ್ನೊಳ್ಳಿ ಗ್ರಾಮದಲ್ಲಿ ತೊಗರಿ ಬೆಳೆ ಹಾನಿ ವೀಕ್ಷಿಸಿ, ಕಡಪಟ್ಟಿ ಹಂಚಿನಾಳ ಗ್ರಾಮಗಳಲ್ಲಿ ನರೇಗಾ ಕಾಮಗಾರಿ ಪರಿಶೀಲಿಸಿದರು. ಹುನ್ನೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಹಿಪ್ಪರಗಿ ಆನೆಕಟ್ಟು ವೀಕ್ಷಿಸಿ, ಹನಗಂಡಿ ಗ್ರಾಮದಲ್ಲಿ ಬೆಳೆ ಹಾನಿಯಾಗಿರುವ ಕುರಿತು ಮತ್ತು ಮೇವು ಸಂಗ್ರಹಣ ಕೇಂದ್ರ ಸ್ಥಾಪಿಸುವ ಕುರಿತು ಹಾಗೂ ನರೇಗಾ ಕಾಮಗಾರಿ ಪರಿಶೀಲಿಸಿದರು.
ಬರಗಾಲ ಪರಿಸ್ಥಿತಿ ವೀಕ್ಷಣ ವೇಳೆ ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
*ಪತ್ರಿಕೋದ್ಯಮ ವಿದ್ಯಾರ್ಥಿಗಳ ಅಂಪ್ರೇಟಿಸ್ ತರಬೇತಿಗೆ ಅರ್ಜಿ*
ಬಾಗಲಕೋಟೆ:
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಕ್ಷೇತ್ರ ಪ್ರಚಾರ ಹಾಗೂ ಮಾಧ್ಯಮ ಕ್ಷೇತ್ರದ ಬಗ್ಗೆ ಒಂದು ವರ್ಷದ ಅವಧಿಯ ಅಪ್ರೆಂಟಿಶಿಪ್ ತರಬೇತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ತಲಾ ಒಬ್ಬರಂತೆ ಒಟ್ಟು ಇಬ್ಬರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿದಾರರಿಗೆ ಮಾಹೆಯಾನ 15 ಸಾವಿರ ರೂ.ಗಳಂತೆ ತರಬೇತಿ ಭತ್ಯ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕಾನೂನಾತ್ಮಕವಾಗಿ ಸ್ಥಾಪಿತಗೊಂಡ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದು, ಕಂಪ್ಯೂಟರ ಜ್ಞಾನವಿರುವ ಕನ್ನಡ ಭಾಷೆ ಬಳಸಲು ಪ್ರಭುದ್ದತೆ ಹೊಂದಿರಬೇಕು.
ಮೆರಿಟ್ ಆಧಾರದ ಮೇಲೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಅರ್ಜಿಗಳನ್ನು ಡಿಸೆಂಬರ 8 ರೊಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಭವನ, ಕೊಠಡಿ ಸಂ.35, ನವನಗರ ಬಾಗಲಕೋಟೆ ಇವರಿಗೆ ಸಲ್ಲಿಸುವಂತೆ ಜಿಲ್ಲಾ ವಾರ್ತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊನಂ.9480841239ಗೆ ಸಂಪರ್ಕಿಸಬಹುದಾಗಿದೆ.