ತುಮಕೂರು : ಬರದಿಂದ ಕಂಗೆಟ್ಟಿರುವ ರೈತರು ದಿನೇ ದಿನೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ತೆಂಗು-ಅಡಕೆ ಬೆಳೆಯನ್ನು ರಕ್ಷಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಅಡಕೆ, ತೆಂಗು ಗರಿಗಳು ಬಿಸಿಲಿಗೆ ಒಣಗುತ್ತಿವೆ. ನಸುಗುನ್ನಿ ಬಳಸಿ ಸಾಧ್ಯವಾದಷ್ಟು ಗಿಡ-ಮರಗಳನ್ನು ಉಳಿಸಿಕೊಳ್ಳಬಹುದು ಎಂದು ಮಾಹಿತಿ ತಿಲಿದು ಬಂದಿದೆ.
ಬಿಸಿಲಿನಿಂದ ಗರಿಗಳು ಒಣಗುತ್ತಿವೆ. ಜಿಲ್ಲೆಯಲ್ಲಿ ಸುಮಾರು ಶೇ.30 ರಷ್ಟು ತೆಂಗು, ಸುಮಾರು ಶೇ.40 ರಷ್ಟು ಅಡಕೆ ಈಗಾಗಲೇ ನಾಶವಾಗಿದೆ. ಹೀಗಾಗಿ ದಿಕ್ಕು ತೋಚದಾಗಿದ್ದಾರೆ.
ಜಿಲ್ಲೆಯಲ್ಲಿ ತೆಂಗು ಹಾಗೂ ಅಡಕೆಯನ್ನು ಹೆಚ್ಚು ಬೆಳೆಯಲಾಗುತ್ತಿದ್ದು, ನೀರಿನ ಅಭಾವವನ್ನು ರೈತರು ಎದುರಿಸುತ್ತಿದ್ದಾರೆ. ಕೆರೆ ಕಟ್ಟೆಗಳು ಖಾಲಿಯಾಗಿವೆ. ಅಂತರ್ಜಲ ಕುಸಿತದ ಪರಿಣಾಮ ಕೊಳವೆಬಾವಿಗಳು ಬತ್ತಿದ್ದು, ರೈತರು ಜಮೀನಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ,
ತೆಂಗು ಮತ್ತು ಅಡಕೆ ತೋಟದಲ್ಲಿ ನಸುಗುನ್ನಿ (ಮುಕುನ ಗೊಬ್ಬರ ಗಿಡ)ಯನ್ನು ಬೆಳೆಯಬೇಕು. ಹೊದಿಕೆ ರೂಪದಲ್ಲಿಈ ಬೆಳೆ ತೋಟದಲ್ಲಿ ಹಬ್ಬುವುದರಿಂದ ನಾನಾ ರೀತಿಯಲ್ಲಿಅನುಕೂಲ ಹಾಗೂ ಆದಾಯದ ಮೂಲವೂ ಆಗಿದೆ.
ಬಿಸಿಲು, ಬರದಿಂದ ನೀರಿಲ್ಲ. ಈ ಕಠಿಣ ಸಂದರ್ಭದಲ್ಲಿ ನಸುಗುನ್ನಿ ಅನುಕೂಲಕಾರಿ. ನೀರನ್ನು ಹಿಡಿದಿಟ್ಟುಕೊಳ್ಳುವ, ಮಣ್ಣಿನ ಸವೆತ ತಡೆಗಟ್ಟುವ, ಫಲವತ್ತತೆ ಹೆಚ್ಚಳದ ಗುಣದಿಂದ ಅಡಕೆ-ತೆಂಗಿಗೆ ಔಷಧವಾಗಿ ನೆರವಾಗುತ್ತದೆ.
ನಸುಗುನ್ನಿಯಲ್ಲಿ ಔಷಧೀಯ ಗುಣವಿದ್ದು, ಇದನ್ನು ಪಾರ್ಕಿನ್ಸನ್ ಕಾಯಿಲೆಯ ಚಿಕಿತ್ಸೆಗಾಗಿ ಆಯುರ್ವೇದದಲ್ಲಿ ಬಳಸುತ್ತಾರೆ. ತೆಂಗು-ಅಡಕೆ ತೋಟದಲ್ಲಿ ಹೊದಿಕೆ ರೂಪದಲ್ಲಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದು ಸಸ್ಯ ವಿಜ್ಞಾನಿಗಳು ತಿಳಿಸಿದ್ದಾರೆ ಎಂದು ಮಾಹಿತಿ ಕಂಡು ಬಂದಿದೆ.