ಬಾಗಲಕೋಟೆ: ನಕಲಿ ಮತದಾರರ ಪಟ್ಟಿ ನೀಡಿ ಸೈಟ್ ಪಡೆಯಲು ಯತ್ನಿಸಿದ ಒಟ್ಟು ೧೫ ಜನರ ವಿರುದ್ಧ ಬಿಟಿಡಿಎಯ ಹೆಚ್ಚುವರಿ ಪ್ರಭಾರ ಪುನರ್ವಸತಿ ಅಧಿಕಾರಿ ಪ್ರಶಾಂತ ಬಾರಿಗಿಡದ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟಿರುವ ನವನಗರದಲ್ಲಿ ಸೈಟ್ ಪಡೆಯಲು ಯಂಕಪ್ಪ ಮೆಟ್ಟಿನ, ಗಂಗವ್ವಾ ಮೆಟ್ಟಿನ, ಲಕ್ಷ್ಮಣ ಬಿಲ್ಲಣ್ಣವರ, ಗೀತಾ ಗುಳೇದ, ಗಿರಿಜಾ ಗುಳೇದ, ಜಗದೀಶ ತ್ಯಾಪಿ ಇವರುಗಳು ನಕಲಿ ಮತದಾರರ ಪಟ್ಟಿ ಸೃಷ್ಟಿಸಿದ್ದಾರೆ ಎಂದು ಒಟ್ಟು ೬ ಜನರ ಮೇಲೆ ದೂರು ದಾಖಲಾಗಿದೆ.
ಇನ್ನೂ ಮೆಹಬೂಬ್ ಬೇಪಾರಿ, ಅರುಣಾ ಅಂಬೋರೆ, ಮೆಹಬೂಬ್ ಜಮಖಂಡಿ, ತೌಸೀಪ್ ಬಗಲವಾಡಿ, ಅಬ್ದುಲ್ ಮಜೀದ್ ಬಂಕೂರ್, ಸಂತೋಷ ಕಾಪಟೆ, ಸತೀಶ ಗಾಯಕವಾಡ, ಮುರುಗೇಪ್ಪ ಸೋರಗಾಂವಿ ಹಾಗೂ ಸಲೀಂ ಶೇಖ್ ಎಂಬುವರು ಖೊಟ್ಟಿ ದಾಖಲೆಗಳಿಗೆ ಸೈಟ್ ಹಂಚುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.