ನಿಮ್ಮ ಸುದ್ದಿ ವಿಜಯಪುರ
ನಗರದಲ್ಲಿ ಮತ್ತೆ ಭೂಮಿ ಕಂಪಿಸಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ನಗರದ ಹಲವೆಡೆ ಶನಿವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ಬೆಳಗ್ಗೆ 2 ನಿಮಿಷ ಭೂಮಿ ಕಂಪಿಸಿದೆ.
ಬೆಳಗ್ಗೆ 8.18 ರಿಂದ 8.20 ರ ವರೆಗಿನ ಅವಧಿಯಲ್ಲಿ ಮನೆಯಲ್ಲಿನ ಪಾತ್ರೆಗಳು ಅಲುಗಾಡಿದ ಹಾಗೂ ಭೂಮಿಯಲ್ಲಿ ಶಬ್ಧ ಹೊರಹೊಮ್ಮಿದ ಅನುಭವ ಆಗಿದ್ದರ ಬಗ್ಗೆ ಸಾರ್ವಜನಿಕರು ತಿಳಿಸಿದ್ದಾರೆ.
ಜಲನಗರ, ಕೀರ್ತಿನಗರ, ಬಸ್ ನಿಲ್ದಾಣ ಮತ್ತಿತರ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ್ದರ ಮಾಹಿತಿ ಲಭ್ಯವಾಗಿದೆ.
ಕಳೆದ ವಾರವೂ ಜಿಲ್ಲೆಯ ಹಲವೆಡೆ ಮಧ್ಯ ರಾತ್ರಿ 2 ಬಾರಿ ಭೂಮಿ ಕಂಪಿಸಿತ್ತು.
ಕಳೆದ ಸಲ ಭೂಮಿ ಕಂಪನದ ಕೇಂದ್ರಬಿಂದು ಮಹಾರಾಷ್ಟ್ರದ ಕೊಲ್ಲಾಪುರ ಆಗಿದ್ದು
ರಿಕ್ಟರ್ ಮಾಪನದಲ್ಲಿ 3.9ರಷ್ಟು ದಾಖಲಾಗಿತ್ತು.
ನೈಸರ್ಗಿಕ ವಿಕೋಪ ಕೇಂದ್ರದ ವಿಜ್ಞಾನಿಗಳ ತಂಡ ಜಿಲ್ಲೆಗಳಲ್ಲಿ ಭೇಟಿ ನೀಡಿ ಅಧ್ಯಯನ ನಡೆಸಿತ್ತು.